ಸಾಹಿತಿ, ಕಾದಂಬರಿಕಾರ ಬಿಎಲ್ ವೇಣುಗೆ ಮತ್ತೆ ಜೀವ ಬೆದರಿಕೆ

| Updated By: ನಯನಾ ರಾಜೀವ್

Updated on: Jul 11, 2022 | 2:58 PM

ಸಾಹಿತಿ ಹಾಗೂ ಕಾದಂಬರಿಕಾರ ಬಿಎಲ್ ವೇಣು ಅವರಿಗೆ ಜೀವ ಬೆದರಿಕೆ ಪತ್ರ ಬಂದಿದ್ದು, ಆತಂಕಕ್ಕೊಳಗಾಗುವಂತೆ ಮಾಡಿದೆ. ಸಹಿಷ್ಣು ಹಿಂದೂ ಹೆಸರಿನಲ್ಲಿ ವಿಳಾಸವಿಲ್ಲದ ಬೆದರಿಕೆ ಪತ್ರವು ಚಿತ್ರದುರ್ಗದ ಕೆಳಗೋಟೆ ಬಡಾವಣೆಗೆ ಬಂದಿದೆ.

ಸಾಹಿತಿ, ಕಾದಂಬರಿಕಾರ ಬಿಎಲ್ ವೇಣುಗೆ ಮತ್ತೆ ಜೀವ ಬೆದರಿಕೆ
BL Venu
Follow us on

ಸಾಹಿತಿ ಹಾಗೂ ಕಾದಂಬರಿಕಾರ ಬಿಎಲ್ ವೇಣು ಅವರಿಗೆ ಜೀವ ಬೆದರಿಕೆ ಪತ್ರ ಬಂದಿದ್ದು, ಆತಂಕಕ್ಕೊಳಗಾಗುವಂತೆ ಮಾಡಿದೆ. ಸಹಿಷ್ಣು ಹಿಂದೂ ಹೆಸರಿನಲ್ಲಿ ವಿಳಾಸವಿಲ್ಲದ ಬೆದರಿಕೆ ಪತ್ರವು ಚಿತ್ರದುರ್ಗದ ಕೆಳಗೋಟೆ ಬಡಾವಣೆಗೆ ಪತ್ರ ಬಂದಿದೆ.

ಎರಡು ಪುಟಗಳ ಕೈಬರಹದ ಪತ್ರ ಬರೆದು ಜೀವ ಬೆದರಿಕೆ ಹಾಕಲಾಗಿದ್ದು, 61 ಸಾಹಿತಿಗಳಿಗೆ ತಿಳಿ ಹೇಳಿ ಎಂದು ಸಲಹೆ ನೀಡಲಾಗಿದೆ. ಅಷ್ಟೇ ಅಲ್ಲದೆ ಸಾವರ್ಕರ್ ಬಗ್ಗೆ ಟೀಕಿಸಿದ್ದಕ್ಕೆ ಕ್ಷಮೆ ಕೇಳಬೇಕೆಂದು ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

ಬರಗೂರು ರಾಮಚಂದ್ರಪ್ಪ ಸಮಿತಿಯಿಂದ ಪಠ್ಯ ಪರಿಷ್ಕರಣೆಯಲ್ಲಿ ನಾಡದ್ರೋಹವಾಗಿದೆ. ಬರಗೂರು ರಾಮಚಂದ್ರಪ್ಪ ಸಮಿತಿಗೆ 61 ಸಾಹಿತಿಗಳ ಬೆಂಬಲ ನೀಡಿದ್ದಾರೆ, ಆ ಎಲ್ಲಾ 61 ಜನರನ್ನೂ ಗಲ್ಲಿಗೇರಿಸಬೇಕು, ಗುಂಡಿಕ್ಕಬೇಕೆಂದು ಬೆದರಿಕೆ ಪತ್ರದಲ್ಲಿ ಹೇಳಲಾಗಿದೆ.

ಇದನ್ನೂ ಓದಿ

ದೇಶದಲ್ಲಿ ಹುಟ್ಟಿ ಭಗವದ್ಗೀತೆ ಮೇಲೆ ಹೀನ ಭಾವನೆ ಏಕೆ ಎಂದು ಪ್ರಶ್ನಿಸಲಾಗಿದೆ. ಈ ಸಂಬಂಧ ಸಾಹಿತಿ ಬಿ.ಎಲ್ ವೇಣು ಅವರ ಚಿತ್ರದುರ್ಗದ ನಿವಾಸಕ್ಕೆ ಪೋಸ್ಟ್ ಒಂದರಲ್ಲಿ ಲೆಟರ್ ಬಂದಿದ್ದು, ಆ ಪತ್ರದಲ್ಲಿ ಸಾರ್ವರ್ಕರ್ ಮತ್ತು ಅವರ ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದ ಯಜ್ಞ ಕುಂಡಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದೆ. ಅವರ ಕುರಿತಾಗಿ ನೀವು ಹೀಯಾಳಿಸಿ ಮಾತನಾಡಿದ್ದು ನಿಮಗೆ ಶೋಭೆ ತರೋದಿಲ್ಲ. ಕೂಡಲೇ ಕ್ಷಮೆಯಾಚಿಸುವಂತೆ ಒತ್ತಾಯಿಸಲಾಗಿದೆ.

ಇದಷ್ಟೇ ಅಲ್ಲದೇ ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಸಂಬಂಧವೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬರಗೂರು ರಾಮಚಂದ್ರಪ್ಪ ಸಮಿತಿ ಬೆಂಬಲಿಸಿ ಪತ್ರ ಬರೆದಂತ 61ಕ್ಕೂ ಹೆಚ್ಚು ವಿಷ ಸರ್ಪಗಳನ್ನು ಗುಂಡಿಕ್ಕಿ ಕೊಲ್ಲಬೇಕು. ಗಲ್ಲಿಗೇರಿಸಬೇಕು. ದೇಶಬಿಟ್ಟು ಓಡಿಸಬೇಕು ಎಂಬುದಾಗಿಯೂ ಹೇಳಲಾಗಿದೆ.

 

ಜೂನ್ 11ರಂದು ಮೊದಲ ಬಾರಿಗೆ ಬೆದರಿಕೆ ಪತ್ರ: ಸಾಹಿತಿ ಬಿ.ಎಲ್.ವೇಣುಗೆ ಸಹಿಷ್ಣು ಹಿಂದೂ ಹೆಸರಿನಲ್ಲಿ 2 ಪುಟಗಳ ಕೈಬರಹದ ಎಚ್ಚರಿಕೆ ಪತ್ರ ಬರೆಯಲಾಗಿದ್ದು, ನಗರದ ಕೆಳಗೋಟೆ ಬಡಾವಣೆಯ ಮನೆಗೆ ಪತ್ರ ಬಂದಿದೆ. ಎಸ್​ಡಿಪಿಐ, ಪಿಎಫ್​ಐ, ಸಿಎಫ್​ಐ ಜತೆ ಸೇರಿಕೊಂಡಿದ್ದೀರಿ. ದೇಶದ್ರೋಹಿಗಳ ಗುಂಪನ್ನು ಬೆಂಬಲಿಸುತ್ತಿದ್ದೀರಿ ಎಂದು ಎಚ್ಚರಿಕೆ ನೀಡಲಾಗಿದೆ. ಸಿದ್ದರಾಮಯ್ಯ, ಹೆಚ್.​ಡಿ. ಕುಮಾರಸ್ವಾಮಿ ನೆರವಾಗುತ್ತಿದ್ದೀರಿ ಎಂದು ಉಲ್ಲೇಖ ಮಾಡಲಾಗಿದೆ.

ಸಾವರ್ಕರ್ ಬಗ್ಗೆ ಹಗುರವಾಗಿ ಮಾತಾಡಿದ್ದಕ್ಕೆ ಕ್ಷಮೆ ಕೇಳಬೇಕು. ಪಠ್ಯ ಪರಿಷ್ಕರಣೆ ಬಗ್ಗೆ ಸಾಹಿತಿ ಬಿ.ಎಲ್.ವೇಣು ಟೀಕೆಗೆ ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಮಕ್ಕಳ ಮನಸ್ಸಲ್ಲಿ ವಿಷಬೀಜ ಬಿತ್ತಬೇಡಿ ಎಂಬ ಹೇಳಿಕೆ‌ಗೆ ಕಿಡಿಕಾರಲಾಗಿತ್ತು.