ಚಿತ್ರದುರ್ಗ: ಪರಶುರಾಂಪುರ ಗ್ರಾಮದಲ್ಲಿ ಕುರುಬ ಬಾಲಕನ ಮತಾಂತರ, ದೂರು ಕೊಟ್ಟರೂ ಪೊಲೀಸರು ಮೌನ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದಲ್ಲಿ ಕುರುಬ ಸಮುದಾಯದ ಬಾಲಕನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಬಾಲಕನ ಪೋಷಕರು ಠಾಣೆಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.

ಚಿತ್ರದುರ್ಗ: ಪರಶುರಾಂಪುರ ಗ್ರಾಮದಲ್ಲಿ ಕುರುಬ ಬಾಲಕನ ಮತಾಂತರ, ದೂರು ಕೊಟ್ಟರೂ ಪೊಲೀಸರು ಮೌನ
ಪರಶುರಾಂಪುರ ಗ್ರಾಮದಲ್ಲಿ ಕುರುಬ ಬಾಲಕನ ಮತಾಂತರ
Edited By:

Updated on: Nov 06, 2023 | 6:12 PM

ಚಿತ್ರದುರ್ಗ, ನ.6: ಜಿಲ್ಲೆಯ (Chitradurga) ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದಲ್ಲಿ ಕುರುಬ ಸಮುದಾಯದ ಬಾಲಕನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಬಾಲಕನ ಪೋಷಕರು ಠಾಣೆಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.

ಶಾಲೆಗೆ ಹೋಗುತ್ತಿದ್ದ ಬಾಲಕನನ್ನು ಸೆಳೆದು ಮತಾಂತರ ಮಾಡಿದ ಆರೋಪ ಅಬ್ಬಾ ಮತ್ತು ಫಾರುಕ್ ಎಂಬುವರ ವಿರುದ್ಧ ಕೇಳಿಬಂದಿದೆ. ಮತಾಂತರಗೊಂಡ ಬಾಲಕನ ಪೋಷಕರು ಅಕ್ಟೋಬರ್ 29 ರಂದು ಪರಶುರಾಂಪುರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಭೀಕರ ಬರಗಾಲಕ್ಕೆ ನೀರು-ಮೇವು ಸಿಗದೆ ಗೂಳೆ ಹೊರಟ ಕುರಿಗಾಹಿಗಳು;ಕ್ಯಾರೆ ಎನ್ನದ ಚಿತ್ರದುರ್ಗ ಜಿಲ್ಲಾಡಳಿತ

ಆದರೆ, ಪೊಲೀಸರು ಮತಾಂತರ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ