Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ: ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ಮಂಗಳಮುಖಿ ಬದುಕಿಗೆ ಕಳ್ಳರಿಂದ ಕೊಳ್ಳಿ

ಕೊಳಹಾಳ್ ಗ್ರಾಮದ ಬಳಿ ಮಂಗಳಮುಖಿ (ತೃತೀಯ ಲಿಂಗಿ) ಅರುಂಧತಿ ಮತ್ತಿತರೆ ಆರು ಜನರು ಸೇರಿ ಕುರಿ-ಮೇಕೆ ಸಾಕಣೆ ಆರಂಭಿಸಿದ್ದರು. ಕಳೆದ ನಾಲ್ಕು ವರ್ಷದಿಂದ ಸ್ವಾವಲಂಬಿಯಾಗಿ ಬದುಕುತ್ತಿದ್ದರು. ನಾಲ್ಕು ದಿನದ ಹಿಂದೆ ಅರುಂಧತಿ ಚಿಕ್ಕಮಗಳೂರಿಗೆ ತೆರಳಿದ್ದರು. ವಾಪಸ್ ಬರುವುದರೊಳಗೆ ಶೆಡ್ ನಲ್ಲಿದ್ದ ಕುರಿ ಮತ್ತು ಮೇಕೆಗಳನ್ನು ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ.

ಚಿತ್ರದುರ್ಗ: ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ಮಂಗಳಮುಖಿ ಬದುಕಿಗೆ ಕಳ್ಳರಿಂದ ಕೊಳ್ಳಿ
ಚಿತ್ರದುರ್ಗ: ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ಮಂಗಳಮುಖಿ ಬದುಕಿಗೆ ಕಳ್ಳರಿಂದ ಕೊಳ್ಳಿ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: Ganapathi Sharma

Updated on: Oct 30, 2023 | 10:25 PM

ಚಿತ್ರದುರ್ಗ, ಅಕ್ಟೋಬರ್ 30: ತೃತೀಯ ಲಿಂಗಿಗಳನ್ನು ಬಹುತೇಕರು ತಿರಸ್ಕಾರ ಭಾವನೆಯಿಂದ ನೋಡುತ್ತಾರೆ. ಈ ಮಧ್ಯೆ, ಅದೊಂದು ಗುಂಪು ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆದು ಗಮನ ಸೆಳೆದಿತ್ತು. ಆದ್ರೆ, ಸ್ವಾವಲಂಬನೆಯ ಬದುಕಿಗೂ ಕಳ್ಳರು ಕೊಳ್ಳಿಯಿಟ್ಟ ಖೇದಕರ ಘಟನೆ ಚಿತ್ರದುರ್ಗ ತಾಲೂಕಿನ ಕೊಳಹಾಳ್ ಗ್ರಾಮದ ಬಳಿ ನಡೆದಿದೆ. ಕುರಿ-ಮೇಕೆ ಸಾಕಣೆ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ಮಂಗಳಮುಖಿ ಬದುಕಿಗೆ ಕಳ್ಳರು (Thieves) ಕೊಳ್ಳಿಯಿಟ್ಟಿದ್ದಾರೆ. ಇದರಿಂದಾಗಿ ಕಂಗಾಲಾದ ತೃತೀಯ ಲಿಂಗಿಗಳೀಗ ಪೊಲೀಸರ ಮೊರೆ ಹೋಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದಾರೆ.

ಕೊಳಹಾಳ್ ಗ್ರಾಮದ ಬಳಿ ಮಂಗಳಮುಖಿ (ತೃತೀಯ ಲಿಂಗಿ) ಅರುಂಧತಿ ಮತ್ತಿತರೆ ಆರು ಜನರು ಸೇರಿ ಕುರಿ-ಮೇಕೆ ಸಾಕಣೆ ಆರಂಭಿಸಿದ್ದರು. ಕಳೆದ ನಾಲ್ಕು ವರ್ಷದಿಂದ ಸ್ವಾವಲಂಬಿಯಾಗಿ ಬದುಕುತ್ತಿದ್ದರು. ನಾಲ್ಕು ದಿನದ ಹಿಂದೆ ಅರುಂಧತಿ ಚಿಕ್ಕಮಗಳೂರಿಗೆ ತೆರಳಿದ್ದರು. ವಾಪಸ್ ಬರುವುದರೊಳಗೆ ಶೆಡ್ ನಲ್ಲಿದ್ದ ಕುರಿ ಮತ್ತು ಮೇಕೆಗಳನ್ನು ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ. ಪರಿಣಾಮ ಅರುಂಧತಿಯ ಬದುಕು ಮತ್ತೆ ಬೀದಿಗೆ ಬಂದಂತಾಗಿದೆ. ಈ ಬಗ್ಗೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದ್ರೆ, ಈವರೆಗೆ ಆರೋಪಿಗಳು ಪತ್ತೆ ಆಗಿಲ್ಲ. ನ್ಯಾಯವೂ ಸಿಕ್ಕಿಲ್ಲ. ಹೀಗಾದರೆ ನಾವು ಮತ್ತೆ ಬೆಗ್ಗಿಂಗ್ ಮತ್ತು ಸೆಕ್ಸ್ ವರ್ಕ್ ಗೆ ಇಳಿಯಬೇಕೇ ಎಂದು ಅರುಂಧತಿ ನೋವಿನಿಂದ ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ಅರುಂಧತಿಗೆ ಬೆಂಗಳೂರಿನ ಲಿಂಗತ್ವ ಮತ್ತು ಲೈಂಗಿಕ ವೈವಿಧ್ಯತೆಗಾಗಿ ಚಳುವಳಿ ಸಂಘಟನೆ ಸಾಥ್ ನೀಡಿದೆ. ಸಂಘಟನೆಯ ಮುಖ್ಯಸ್ಥೆ ವೈಶಾಲಿ ಮತ್ತಿತರರು ಅರುಂಧತಿ ಪರ ನಿಂತಿ ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಅವ್ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಲಿಂಗತ್ವ ಮತ್ತು ಲೈಂಗಿಕ ವೈವಿಧ್ಯತೆಗಾಗಿ ಚಳುವಳಿಯ ಮುಖ್ಯಸ್ಥೆ ವೈಶಾಲಿ, ಅನೇಕರು ವೇದಿಕೆಗಳನ್ನು ನಮ್ಮ ಪರ ಭಾಷಣ ಮಾಡುತ್ತಾರೆ. ಆದ್ರೆ, ಸ್ವಾವಲಂಬಿ, ಸ್ವಾಭಿಮಾನಿ ಬದುಕು ನಡೆಸುತ್ತಿದ್ದ ಅರುಂಧತಿ ಬದುಕು ಬೀದಿಗೆ ಬಂದಿದೆ. ಸುಮಾರು 8ಲಕ್ಷ ಮೌಲ್ಯದ ಕುರಿ-ಮೇಕೆಯನ್ನು ಕಳ್ಳತನ ಮಾಡಲಾಗಿದೆ. ಈ ಕೃತ್ಯದ ಹಿಂದೆ ಶೋಷಣೆ ಮನೋಸ್ಥಿತಿ ಇದ್ದೇ ಇದೆ. ಈ ಸಂದರ್ಭದಲ್ಲಿ ಯಾರೂ ಸಹ ಅರುಂಧತಿಯ ನೆರವಿಗೆ ಬಂದಿಲ್ಲ ಎಂದು ನೋವು ತೋಡಿಕೊಂಡರು.

ಇದನ್ನೂ ಓದಿ: 30 ಟಿಎಂಸಿ ಸಂಗ್ರಹ ಸಾಮರ್ಥ್ಯದ ಆ ಜಲಾಶಯದಲ್ಲಿ 22 ಟಿಎಂಸಿ ನೀರಿದೆ, ಬರಗಾಲದ ರೈತಾಪಿ ವರ್ಗ ಫುಲ್ ಖುಷ್​!

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಸ್ವಾವಲಂಬಿ ಬದುಕು ನಡೆಸುತ್ತಿದ್ಧ ಅರುಂಧತಿ ಬದುಕಿಗೆ ಕಳ್ಳರು ಕೊಳ್ಳಿ ಇಟ್ಟಿದ್ದಾರೆ. ಚಿತ್ರದುರ್ಗ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ಶೀಘ್ರ ಗತಿಯಲ್ಲಿ ಕಳ್ಳರನ್ನು ಪತ್ತೆ ಹಚ್ಚಬೇಕಿದೆ. ಸ್ವಾಭಿಮಾನಿ, ಸ್ವಾವಲಂಬಿ ಬದುಕು ನಡೆಸಿ ಮಾದರಿಯಾಗಿದ್ದ ಅರುಂಧತಿಗೆ ನ್ಯಾಯ ಒದಗಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ