ಚಿತ್ರದುರ್ಗ: ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮದುವೆ ಬಸ್ ಪಲ್ಟಿ, ಇಬ್ಬರು ದುರ್ಮರಣ; ಹಲವರ ಸ್ಥಿತಿ ಗಂಭೀರ
ಹೊಸದುರ್ಗ(Hosadurga) ತಾಲೂಕಿನ ಉಗಣೆಕಟ್ಟೆ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮದುವೆಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿದ್ದು, ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರದುರ್ಗ, ಡಿ.09: ಜಿಲ್ಲೆಯ ಹೊಸದುರ್ಗ(Hosadurga) ತಾಲೂಕಿನ ಉಗಣೆಕಟ್ಟೆ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮದುವೆಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿದ್ದು, ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸದುರ್ಗದಿಂದ ದಾವಣಗೆರೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಹಂಪ್ ಗೊತ್ತಾಗದೇ ಬೈಕ್ ಸ್ಕಿಡ್; ಸವಾರರಿಬ್ಬರು ಸ್ಥಳದಲ್ಲೇ ಸಾವು
ಬೆಂಗಳೂರು ಗ್ರಾಮಾಂತರ: ರಸ್ತೆಯಲ್ಲಿದ್ದ ಹಂಪ್ ಗಮನಿಸದೇ ವೇಗವಾಗಿ ಬಂದ ಬೈಕ್ಸವಾರರು ಸ್ಕಿಡ್ ಆಗಿ ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕಲ್ ತಾಲೂಕಿನ ಮಾದಪಟ್ಟಣ ಬಳಿ ನಡೆದಿದೆ. ಕಾರ್ಮಿಕ ಫೋಕೀರ್ ಚರಣ್ಪ್ರಧಾನ್(29), ಬೀರ್ ಸಿಂಗ್ ನಾಯಕ್ ಮೃತ ವ್ಯಕ್ತಿಗಳು. ಕಂಪನಿ ಕೆಲಸ ಮುಗಿಸಿ ಜಿಗಣಿಯಿಂದ ಇಂಡ್ಲವಾಡಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಇದನ್ನೂ ಓದಿ:ಮರಕ್ಕೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ; ಇಬ್ಬರ ಸಾವು, 25 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ
ಹಂಪ್ ಗಮನಿಸದೇ ಬ್ರೇಕ್ ಹಾಕಿದ್ದ ಸವಾರ
ಮಾದಪಟ್ಟಣ ಬಳಿ ರಸ್ತೆಯಲ್ಲಿದ್ದ ಹಂಪ್ ಗಮನಿಸದೇ ಬೈಕ್ ಚಲಿಸುತ್ತಿದ್ದ ಪ್ರಧಾನ್ ಸಡನ್ ಬ್ರೇಕ್ ಹಾಕಿದ್ದಾನೆ. ಈ ವೇಳೆ ಹಿಂಬದಿ ಸವಾರ ಬೀರ್ ಸಿಂಗ್ ಸೇರಿ ಇಬ್ಬರು ಮೇಲಕ್ಕೆ ಹಾರಿ ಬಸ್ಗೆ ತಲೆಬಡಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚರಣ್ ಪ್ರಧಾನ್ L&t ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಶಕ್ತಿ ಪ್ರೊಸೆಸಿಂಗ್ ಕಂಪನಿಯಲ್ಲಿ ಸಹಾಯಕ ಹುದ್ದೆಯಲ್ಲಿ ಬೀರ್ ಸಿಂಗ್ ಇದ್ದರು. ಮೃತಪಟ್ಟ ಇಬ್ಬರು ಬೈಕ್ ಸವಾರರು ಮೂಲತಃ ಒರಿಸ್ಸಾ ಮೂಲದವರಾಗಿದ್ದಾರೆ. ಇನ್ನು ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:49 pm, Sat, 9 December 23