ಬಿಜೆಪಿ ವಿರುದ್ಧ ಗೂಳಿಹಟ್ಟಿ ಮತ್ತೆ ವಾಗ್ದಾಳಿ; ಹೆಡ್ಗೆವಾರ್ ಸ್ಮಾರಕದೊಳಗೆ ನಾನು ಹೋಗಿದ್ದ ವಿಡಿಯೋ ರಿಲೀಸ್ ಮಾಡಿ ಎಂದು ಸವಾಲ್
ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮಾಡಿದ್ದ ಆರೋಪಕ್ಕೆ ಬಿಜೆಪಿ ನಾಯಕರು ನೀಡಿದ್ದ ಆಕ್ಷೇಪದ ಹೇಳಿಕೆಗಳಿಗೆ ಆಡಿಯೋ ಮೂಲಕ ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಮಾಜಿ ಶಾಸಕ ಪಿ ರಾಜೀವ್, ಚಲವಾದಿ ನಾರಾಯಣಸ್ವಾಮಿ, ಮತ್ತು ಸುರೇಶ್ ಕುಮಾರ್‌ಗೆ ವಾಟ್ಸಾಪ್ ಆಡಿಯೋ ಮೂಲಕ ಸವಾಲು ಹಾಕಿದ್ದಾರೆ.
ಚಿತ್ರದುರ್ಗ, ಡಿ.09: ಆರ್ಎಸ್ಎಸ್ ಸಂಸ್ಥಾಪಕ ಹೆಡಗೇವಾರ್ (KB Hedgewar) ಅವರ ಮ್ಯೂಸಿಯಂ ಪ್ರವೇಶಕ್ಕೆ ದಲಿತ (Dalit) ಅನ್ನುವ ಕಾರಣಕ್ಕೆ ನನ್ನನ್ನು ನಿರಾಕರಿಸಿದ್ದಾರೆ ಎಂದು ಇತ್ತೀಚೆಗೆ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (Goolihatti Shekhar) ಆರೋಪ ಮಾಡಿದರು. ಇದರ ಬೆನ್ನಲ್ಲೇ ಈಗ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೆಡ್ಗೆವಾರ್ ಸ್ಮಾರಕದೊಳಗೆ ನಾನು ಹೋಗಿದ್ದ ವಿಡಿಯೋ ರಿಲೀಸ್ ಮಾಡಿ ಎಂದು ಸವಾಲು ಹಾಕಿದ್ದಾರೆ. ವಿಡಿಯೋ ರಿಲೀಸ್ ಮಾಡಿದರೆ ನಿಮ್ಮ ಮನೆಗಳಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿರುತ್ತೇನೆ ಎಂದಿದ್ದಾರೆ.
ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮಾಡಿದ್ದ ಆರೋಪಕ್ಕೆ ಬಿಜೆಪಿ ನಾಯಕರು ನೀಡಿದ್ದ ಆಕ್ಷೇಪದ ಹೇಳಿಕೆಗಳಿಗೆ ಆಡಿಯೋ ಮೂಲಕ ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಮಾಜಿ ಶಾಸಕ ಪಿ ರಾಜೀವ್, ಚಲವಾದಿ ನಾರಾಯಣಸ್ವಾಮಿ, ಮತ್ತು ಸುರೇಶ್ ಕುಮಾರ್‌ಗೆ ವಾಟ್ಸಾಪ್ ಆಡಿಯೋ ಮೂಲಕ ಸವಾಲು ಹಾಕಿದ್ದಾರೆ.
ಹೆಡ್ಗೇವಾರ್ ಸ್ಮಾರಕದೊಳಗೆ ಹೋಗಿದ್ದ ವಿಡಿಯೋ ರಿಲೀಸ್ ಮಾಡಿ. ನಿಮ್ಮ ಮನೆಗಳಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಬಿಜೆಪಿ ವಿರುದ್ಧ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯ ಇರುತ್ತೆ ಅಲ್ವಾ ರಿಲೀಸ್ ಮಾಡಿ. ರಿಲೀಸ್ ಮಾಡಿದ್ರೆ ನಿಮ್ಮ ಮನೆ ಗೇಟ್ಕೀಪರ್ ಆಗಿ ಕೆಲಸ ಮಾಡ್ತೇನೆ. ಕೆಲವು ತಿಂಗಳ ಹಿಂದೆ ನಾನು ಈ ವಿಷಯವನ್ನು ಹೇಳಿದ್ದರೆ ಇನ್ನಷ್ಟು ಸೀಟ್ ಕಳೆದುಕೊಳ್ತಿದ್ದರು ಎಂದು ಆಡಿಯೋ ಸಂದೇಶ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ನಂಜನಗೂಡು ತಾಲೂಕಿನಲ್ಲಿ ಅತಿ ಹೆಚ್ಚು ಕುಷ್ಠ ರೋಗಿಗಳು ಪತ್ತೆ; ಆರೋಗ್ಯ ಇಲಾಖೆ ಹೈ ಅಲರ್ಟ್
ದಲಿತನೆಂಬ ಕಾರಣಕ್ಕೆ ಪ್ರವೇಶ ನಿರಾಕರಣೆ ಆರೋಪ ವಿಚಾರಕ್ಕೆ ಸಂಬಂಧಿಸಿ ಗೂಳಿಹಟ್ಟಿ ಶೇಖರ್ ಆರೋಪಕ್ಕೆ ಬಿಜೆಪಿ ನಾಯಕರು ಕಿಡಿ ಕಾರಿದ್ದರು. ಈ ವಿಚಾರ ಸಂಬಂಧ ನಾನು ರಾತ್ರಿಯೆಲ್ಲಾ ಕುಡಿಯುತ್ತೇನೆ ರಾಜೀವ್ ಅಣ್ಣ. ನಮ್ಮಂಥ ಕುಡುಕರಿಂದ ನೀನು ಪೆನ್ಷನ್ ತೆಗೆದುಕೊಳ್ತಿದ್ದೀಯಾ. ಸರ್ಕಾರ ಪ್ರಿಂಟ್ ಹಾಕಲ್ಲ, ಎಣ್ಣೆ ದುಡ್ಡೇ ಸರ್ಕಾರಕ್ಕೆ ಆದಾಯ. ನಮ್ಮ ಆರ್.ಅಶೋಕಣ್ಣ, ಸುರೇಶ್ ಕುಮಾರ್ ಬಹಳ ಹಿರಿಯರು. ನಿನ್ನೆ ಮೊನ್ನೆ ನನ್ನ ಹೇಳಿಕೆ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಜನರಲ್ ಕ್ಷೇತ್ರದಲ್ಲಿ ಗೆದ್ದು 38 ವರ್ಷಕ್ಕೆ ಮಂತ್ರಿ ಆಗಿದ್ದೆ. ಪಿ.ರಾಜೀವಣ್ಣ ನಿನ್ನಂತೆಯೇ ಮೀಸಲು ಕ್ಷೇತ್ರದಲ್ಲಿ ಗೆದ್ದಿಲ್ಲ ನಾನು. 35 ವರ್ಷಕ್ಕೆ ನಾನು ಸಾಯಬೇಕಿತ್ತು, 55ವರ್ಷ ಬದುಕಿದ್ದೇ ಗ್ರೇಟ್. ಕೊಲೆ ಆಗಬೇಕಿತ್ತು ಇಲ್ಲ, ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ನಾನು ಈಗ 55ವರ್ಷ ಬದುಕಿದ್ದೇ ಗ್ರೇಟ್ ಎನ್ನುವ ಗೂಳಿಹಟ್ಟಿ ಶೇಖರ್ ಆಡಿಯೋ ವೈರಲ್ ಆಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ