AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ: ಋತುಚಕ್ರದ ವೇಳೆ ಹಟ್ಟಿಯಿಂದ ಹೊರ ಉಳಿದ ಮಹಿಳೆಯರನ್ನು ಮನೆ ಒಳಗೆ ಬಿಟ್ಟು, ಮೌಢ್ಯ ಆಚರಣೆ ನಿಲ್ಲಿಸುವಂತೆ ಗ್ರಾಮಸ್ಥರಿಗೆ ಶಾಸಕಿ ಪೂರ್ಣಿಮಾ ತರಾಟೆ

ಊರ ಹೊರಗೆ ಬಯಲಲ್ಲಿ, ಮುರಿದ ಗುಡಿಸಿಲಲ್ಲಿ ಇರುವುದು ಅಪಾಯಕಾರಿ. ಅಂತೆಯೇ ಹೆಣ್ಣು ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಆಚರಣೆ ಸರಿಯಲ್ಲ. ಈ ಮೌಢ್ಯ ಆಚರಣೆ ಇಂದೇ ಕೊನೆಗಾಣಬೇಕು ಎಂದು ಶಾಸಕಿ ಪೂರ್ಣಿಮಾ ಗ್ರಾಮಸ್ಥರಿಗೆ ಎಚ್ಚರಿಕೆ‌ ನೀಡಿದ್ದಾರೆ.

ಚಿತ್ರದುರ್ಗ: ಋತುಚಕ್ರದ ವೇಳೆ ಹಟ್ಟಿಯಿಂದ ಹೊರ ಉಳಿದ ಮಹಿಳೆಯರನ್ನು ಮನೆ ಒಳಗೆ ಬಿಟ್ಟು, ಮೌಢ್ಯ ಆಚರಣೆ ನಿಲ್ಲಿಸುವಂತೆ ಗ್ರಾಮಸ್ಥರಿಗೆ ಶಾಸಕಿ ಪೂರ್ಣಿಮಾ ತರಾಟೆ
ಶಾಸಕಿ ಪೂರ್ಣಿಮಾ
TV9 Web
| Edited By: |

Updated on:Feb 08, 2023 | 7:11 PM

Share

ಚಿತ್ರದುರ್ಗ : ಬುಡಕಟ್ಟು ಸಂಸ್ಕೃತಿಯ ಗೊಲ್ಲ ಸಮುದಾಯದ ಕೆಲ ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಅಮಾನವೀಯ ಮೌಢ್ಯ ಆಚರಣೆಯೊಂದು ಆಚರಣೆಯಲ್ಲಿದೆ. ಋತುಚಕ್ರ ಸೇರಿದಂತೆ ಇತರೆ ಸಂದರ್ಭದಲ್ಲಿ ಕೆಲ ದಿನ ಕಾಲ ಮಹಿಳೆಯರು ಹಟ್ಟಿಯಿಂದ ಹೊರಗಿರುವ ಅಮಾನವೀಯ ಆಚರಣೆ ಆಚರಿಸಲ್ಪಡುತ್ತಿದೆ. ಹಟ್ಟಿಯ ಹೊರ ವಲಯದಲ್ಲಿನ ಗುಡಿಸಲು, ಬಯಲು ಪ್ರದೇಶಗಳಲ್ಲೇ ಮಹಿಳೆಯರು ಆ ದಿನಗಳು ಕಳೆಯುವವರೆಗ ಇರಬೇಕಾಗುತ್ತದೆ.

ನಿನ್ನೆ ಮಧ್ಯರಾತ್ರಿ ವೇಳೆ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾರ್ಯಕ್ರಮವೊಂದರಿಂದ ಮನೆಗೆ ತೆರಳುತ್ತಿರುವಾಗ ಹಿರಿಯೂರು ತಾಲೂಕಿನ ಬಡಗೊಲ್ಲರಹಟ್ಟಿ ಬಳಿ ಮೌಢ್ಯ ಆಚರಣೆ ಕಂಡು ಬಂದಿದೆ. ತಕ್ಷಣ ಕಾರು ನಿಲ್ಲಿಸಿದ ಶಾಸಕಿ ಪೂರ್ಣಿಮಾ‌ ಹಟ್ಟಿ ಹೊರಗೆ ಬಯಲಲ್ಲಿದ್ದ ಮಹಿಳೆಯರನ್ನು ಮಾತನಾಡಿಸಿದ್ದಾರೆ. ಮೌಢ್ಯ ಆಚರಣದ ಆಚರಿಸದಂತೆ ಮನವೊಲಿಸಿದ್ದಾರೆ. ಹಟ್ಟಿಯ ಜನರು ಸಹ ಜಮಾಯಿಸಿದ್ದು ಖುದ್ದು ಶಾಸಕಿ ಪೂರ್ಣಿಮಾ ಅವರೇ ಋತು ಚಕ್ರದ ಕಾರಣಕ್ಕೆ ಹಟ್ಟಿಯ ಹೊರಗಿದ್ದ ಮಹಿಳೆಯರನ್ನು ಮನೆಗೆ ಕರೆ ತಂದು ಬಿಟ್ಟಿದ್ದಾರೆ.

ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ ಶಾಸಕಿ

ನಿನ್ನೆ ಮಧ್ಯರಾತ್ರಿ 12ಗಂಟೆ ಸುಮಾರಿಗೆ ಈ ಜಾಗೃತಿ ಕಾರ್ಯ‌ ನಡೆದಿದೆ. ಆಗಲೂ ಕೆಲವರು ಋತುಚಕ್ರವಾಗಿ ಹಟ್ಟಿ ಹೊರಗಿದ್ದವರಿಗೆ ಮೈಮೇಲೆ ನೀರು ಸುರಿದು ಗ್ರಾಮಕ್ಕೆ ಕರೆದುಕೊಂಡಿದ್ದಾರೆ. ಊರ ಹೊರಗೆ ಬಯಲಲ್ಲಿ, ಮುರಿದ ಗುಡಿಸಿಲಲ್ಲಿ ಇರುವುದು ಅಪಾಯಕಾರಿ. ಅಂತೆಯೇ ಹೆಣ್ಣು ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಆಚರಣೆ ಸರಿಯಲ್ಲ. ಈ ಮೌಢ್ಯ ಆಚರಣೆ ಇಂದೇ ಕೊನೆಗಾಣಬೇಕು ಎಂದು ಶಾಸಕಿ ಪೂರ್ಣಿಮಾ ಗ್ರಾಮಸ್ಥರಿಗೆ ಎಚ್ಚರಿಕೆ‌ ನೀಡಿದ್ದಾರೆ.

ಗೊಲ್ಲ ಸಮುದಾಯದವರೇ ಆಗಿರುವ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತಿಗೆ ಗ್ರಾಮದ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ. ಮಹಿಳೆಯರು ಸಹ ಶಾಸಕಿ ಪೂರ್ಣಿಮಾ‌ ಮಾತಿನಿಂದಾಗಿ ಜಾಗೃತ‌ಗೊಂಡಿದ್ದು ಇನ್ನು ಮುಂದೆ ಮೌಢ್ಯ ಆಚರಣೆ ಕೈ ಬಿಡುತ್ತೇವೆ ಎಂದು ಹೇಳಿದ್ದಾರೆ. ನಿನ್ನೆ ಮದ್ಯರಾತ್ರಿ ನಡೆದ ಘಟನೆಯನ್ನು ಶಾಸಕಿ ಪೂರ್ಣಿಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಶಾಸಕಿ ಕಾರ್ಯಕ್ಕೆ ಮೆಚ್ಚುಗೆ

ಸಾಮಾಜಿಕ ಜಾಲತಾಣದಲ್ಲಿ ಅನೇಕರು ಶಾಸಕಿ ಪೂರ್ಣಿಮಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜಕೀಯಮಾತ್ರವಲ್ಲದೇ ಸರಿ ರಾತ್ರಿಯಲ್ಲೂ ಸಾಮಾಜಿಕ ಬದಲಾವಣೆಗಾಗಿ ಶ್ರಮಿಸೋ ನಿಮ್ಮ ಮಾದರಿನಡೆ ಅಭಿನಂದನಾರ್ಹ ಎಂದು ಅಭಿಲಾಷ ಪಂಡ್ರಳ್ಳಿ ಪ್ರತಿಕ್ರಿಯಿಸಿದ್ದಾರೆ.

ಈ ಸಮುದಾಯದಲ್ಲಿ ಇನ್ನೂ ಮನೆಮಾಡಿರುವ ಮೂಡನಂಬಿಕೆಗಳ ಕುರಿತು ಜಾಗೃತಿ ಮೂಡಿಸಿ ಮೇಡಂ ಇಡೀ ಜಿಲ್ಲೆಯಲ್ಲಿ ಯಾದವ ಸಮುದಾಯ ನಿಮ್ಮ ಮಾತು ಕೇಳುತ್ತದೆ. ಕಾರಣ, ನಮ್ಮ ಸಮುದಾಯದ ಹೆಣ್ಣು ಮಗಳು ಶಾಸಕಿಯಾಗಿದ್ದಾರೆ ಎಂಬ ಹೆಮ್ಮೆ. ಆದ್ದರಿಂದ ನಿಮ್ಮ ಇಂತಹ ಕಾರ್ಯಗಳು ನಿಜಕ್ಕೂ ಇತಿಹಾಸದ ಪುಟ ಸೇರುತ್ತವೆ. ಸಮುದಾಯ ಜಾಗೃತಿ ಕೆಲಸ ಮುಂದುವರೆಯಲಿ ಎಂದು ಜಡೆಕುಂಟೆ  ಮಂಜು ಪ್ರತಿಕ್ರಿಯಿಸಿದ್ದರೆ ಇನ್ನೂ ಕೆಲವರು ಕೆಲ ಹಟ್ಟಿಗಳಲ್ಲಿ ಇಂದಿಗೂ ಈ ಆಚರಣೆ ನಡೆಯುತ್ತಿದೆ. ಎರಡು ದಿನ ನಿಲ್ಲಿಸುತ್ತಾರೆ. ಮತ್ತೆ ಅದೇ ಮೌಢ್ಯ ಆಚರಣೆ ಮುಂದುವರೆಸುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಟಿವಿ9 ಈ ಬಗ್ಗೆ ಏಳೆಂಟು ವರ್ಷಗಳ ಹಿಂದೆಯೇ ‘ಹೆಣ್ಣಾಗಿದ್ದೇ ತಪ್ಪಾ?’ ಶೀರ್ಷಿಕೆ ಅಡಿಯಲ್ಲಿ ಅಭಿಯಾನ ನಡೆಸಿತ್ತು. ಎಚ್ಚೆತ್ತ ಸರ್ಕಾರ ಮೌಢ್ಯಾಚರಣೆ ಬಗ್ಗೆ ಗೊಲ್ಲರಹಟ್ಟಿಗಳಲ್ಲಿ ಜಾಗೃತಿ ಅಭಿಯಾನ ನಡೆಸಿತ್ತು. ಶಾಸಕರು, ಸಚಿವರು, ಮುಖ್ಯಮಂತ್ರಿಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದು ಮೌಢ್ಯ ಆಚರಣೆಗೆ ಬ್ರೇಕ್‌ ಹಾಕಲು ಅಧಿಕಾರಿಗಳಿಗೆ ಸೂಚಿಸಿದ್ದನ್ನು ಸ್ಮರಿಸಬಹುದು.

ವರದಿ: ಬಸವರಾಜ ಮುದನೂರ್, ಟಿವಿ9 ಚಿತ್ರದುರ್ಗ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:53 pm, Wed, 8 February 23

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?