ಹಿರಿಯೂರಿನ ಐಮಂಗಲದಲ್ಲಿ ಅಪಘಾತ: ಯಲಹಂಕದ 10ಕ್ಕೂ ಹೆಚ್ಚು ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ
ಬೆಂಗಳೂರಿಂದ ಗೋವಾಗೆ ಪ್ರವಾಸ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಐಮಂಗಲ ಬಳಿ ನಿಯಂತ್ರಣ ತಪ್ಪಿ ಮಿನಿ ಬಸ್ ಪಲ್ಟಿಯಾಗಿದ್ದು 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಐಮಂಗಲ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ ಪಲ್ಟಿಯಾಗಿದ್ದು 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಬೆಂಗಳೂರಿಂದ ಗೋವಾಗೆ ಪ್ರವಾಸ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಾಯಾಳುಗಳು ಬೆಂಗಳೂರಿನ ಯಲಹಂಕದ ನಿವಾಸಿಗಳು. ಸದ್ಯ ಸ್ಥಳಕ್ಕೆ ಐಮಂಗಲ PSI ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ಗುಂಪುಗಳ ನಡುವೆ ಕಾದಾಟ
ಹಾಸನ: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಗ್ರಾಮದಲ್ಲಿ ಹಾಡು ಹಗಲೇ ನಡು ರಸ್ತೆಯಲ್ಲಿ ಎರಡು ಗುಂಪುಗಳ ನಡುವೆ ಕಾದಾಟವಾಗಿದೆ. ಬಾರ್ ಸಮೀಪ ನಿಂತಿದ್ದ ರೌಡಿ ಶೀಟರ್ ಮೇಲೆ ಗುಂಪೊಂದು ಅಟ್ಯಾಕ್ ಮಾಡಿದೆ. ಕುಮಾರ ಅಲಿಯಾಸ್ ಕಪ್ಪೆ ಕುಮಾರನ ಮೇಲೆ ಅಟ್ಯಾಕ್ ಮಾಡಲಾಗಿದೆ. ಲಾಂಗ್ ಹಿಡಿದು ಕಪ್ಪೆ ಕುಮಾರನ ಎರಡು ಕಾಲು ಕಡಿದಿದ್ದಾರೆ. ಕುಮಾರನ ಮೇಲೆ ಲಾಂಗ್ ಬೀಸಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಯಾಳು ಕುಮಾರನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಜೊತೆಗೆ ಇದ್ದ ಸ್ನೇಹಿತರ ನಡುವಿವ ವೈಷಮ್ಯದಿಂದ ಈ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ. ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: Endangered Animals: ಮನುಷ್ಯನ ಅಭಿವೃದ್ಧಿಯಿಂದ ಅಳಿವಿನಂಚಿನಲ್ಲಿದೆ ಈ ಪ್ರಾಣಿಗಳು, ಇಲ್ಲಿದೆ ಫೋಟೋ
ಕಾರು ಅಪಘಾತ ಶಾಸಕ ಅರವಿಂದ್ ಬೆಲ್ಲದ್ ಚಿಕ್ಕಪ್ಪ ಶಿವಣ್ಣ ಬೆಲ್ಲದ್(82) ಸಾವು
ಧಾರವಾಡದ ಎಸ್ಪಿ ಕಚೇರಿ ಎದುರು ಕಾರು ಅಪಘಾತ ಸಂಭವಿಸಿದ್ದು ಶಾಸಕ ಅರವಿಂದ್ ಬೆಲ್ಲದ್ ಚಿಕ್ಕಪ್ಪ ಶಿವಣ್ಣ ಬೆಲ್ಲದ್(82) ಮೃತಪಟ್ಟಿದ್ದಾರೆ. ತಡರಾತ್ರಿ ಧಾರವಾಡ ಎಸ್ಪಿ ಕಚೇರಿ ಎದುರು ರಸ್ತೆ ಡಿವೈಡರ್‌ಗೆ ಕಾರು ಡಿಕ್ಕಿಯಾಗಿದೆ. ಈ ವೇಳೆ ಶಿವಣ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್ ಸಹೋದರರಾಗಿದ್ದ ಶಿವಣ್ಣ, ವಿದ್ಯಾವರ್ಧಕ ಸಂಘದ ಹಿಂದಿನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಗೂ ಲಿಂಗಾಯತ ಸಮಾಜದ ಮುಖಂಡರಾಗಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:20 am, Thu, 6 October 22