ನಾನು ಖಾಯಂ ಮುಖ್ಯಮಂತ್ರಿ, ಯಾರೇನಂದ್ರೂ ನನ್ನ ಪದವಿಗೆ ಧಕ್ಕೆ ಬಾರದು: ಮುಖ್ಯಮಂತ್ರಿ ಚಂದ್ರು

ಪಂಚಮಸಾಲಿ ಮಾತ್ರ ಅಲ್ಲ 2ಎ ಗೆ ಅರ್ಹತೆ ಇಲ್ಲದವರು ಯಾರೇ ಬಂದರೂ ವಿರೋಧಿಸುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ನಾನು ಖಾಯಂ ಮುಖ್ಯಮಂತ್ರಿ, ಯಾರೇನಂದ್ರೂ ನನ್ನ ಪದವಿಗೆ ಧಕ್ಕೆ ಬಾರದು: ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು
Follow us
TV9 Web
| Updated By: guruganesh bhat

Updated on: Aug 23, 2021 | 4:08 PM

ಚಿತ್ರದುರ್ಗ: ಇತ್ತೀಚಿಗಷ್ಟೇ ಜಾತಿ ಆಧಾರಿತ ಮೀಸಲಾತಿಗಿಂತ ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಆಧರಿಸಿ ಮೀಸಲಾತಿ ನೀಡುವಂತೆ ಆಗ್ರಹಿಸಿದ್ದ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ‘ ನಾನು ಖಾಯಂ ಮುಖ್ಯಮಂತ್ರಿ, ಯಾರು ಏನೇ ಹೇಳಿದರೂ ನನ್ನ ಪದವಿಗೆ ಧಕ್ಕೆ ಆಗುವುದಿಲ್ಲ ಎಂದಿದ್ದಾರೆ. ಈಮೂಲಕ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಆಗ್ರಹದ ಕುರಿತು  ಮಾಜಿ ಸಚಿವ ವಿಜಯಾನಂದ ಕಾಶಪ್ಪ‌ನವರ್​ಗೆ ಮುಖ್ಯಮಂತ್ರಿ ಚಂದ್ರು ತಿರುಗೇಟು ನೀಡಿದರು. ಅವರ ಹಕ್ಕನ್ನು ಅವರು ಕೇಳುತ್ತಿದ್ದಾರೆ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ. ವಿಜಯಾನಂದ ಕಾಶಪ್ಪನವರ್ ಅಗೌರವವಾಗಿ ಮಾತನಾಡಿದ್ದಾರೆ ಎಂದು ನಾನು ಮಾತನಾಡುವುದಿಲ್ಲ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ನಮಗೆ ಅನ್ಯಾಯವಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ವ್ಯಾಖ್ಯಾನಿಸಿದರು. 

ತಳ ಸಮುದಾಯಗಳಿಗಾದ ಅನ್ಯಾಯವನ್ನು ಅವರು ಗಮನಿಸಬೇಕಿದೆ. ನಮ್ಮ ಅನ್ನವನ್ನು ಬೇರೆಯವರು ತೆಗೆದುಕೊಂಡರೆ ನಾವೆಲ್ಲಿಗೆ ಹೋಗಬೇಕು. ಸಾಮಾಜಿಕ, ಶೈಕ್ಷಣಿಕ ಮಾನದಂಡದ ಮೇಲೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ಬರುವುದಿಲ್ಲ. ಸರ್ಕಾರ ನ್ಯಾಯಯುತವಾಗಿ ಯೋಚಿಸಬೇಕು. ಪಂಚಮಸಾಲಿ ಮಾತ್ರ ಅಲ್ಲ 2ಎ ಗೆ ಅರ್ಹತೆ ಇಲ್ಲದವರು ಯಾರೇ ಬಂದರೂ ವಿರೋಧಿಸುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ: ಸರ್ಕಾರವನ್ನು ಎಚ್ಚರಿಸಲು ಬೃಹತ್ ಅಭಿಯಾನ: ಬಸವ ಜಯಮೃತ್ಯುಂಜಯಶ್ರೀ ಮೈಸೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಬೇಡಿಕೆ ವಿಚಾರವಾಗಿ ಮೈಸೂರಿನಲ್ಲಿ ಬಸವ ಜಯಮೃತ್ಯುಂಜಯಶ್ರೀ ಸುದ್ದಿಗೋಷ್ಠಿ ನಡೆಸಿದ್ದಾರೆ. ಸರ್ಕಾರ ಕೊಟ್ಟ ಗಡುವು ಮುಗಿಯುತ್ತಿದೆ. ಹೀಗಾಗಿ ಸರ್ಕಾರಕ್ಕೆ ಎಚ್ಚರಿಸಲು ಬೃಹತ್ ರಾಜ್ಯ ಅಭಿಯಾನ ನಡೆಸುತ್ತೇವೆ. ಪ್ರತಿಜ್ಞಾ ಪಂಚಾಯತ್ ಘೋಷವಾಕ್ಯದೊಂದಿಗೆ ಅಭಿಯಾನ ನಡೆಸಲಿದ್ದೇವೆ. ಮಲೆಮಹದೇಶ್ವರ ಬೆಟ್ಟದಲ್ಲಿ ಅಭಿಯಾನ ಉದ್ಘಾಟಿಸಿ ಆರಂಭ ಆಗಲಿದೆ ಎಂದು ಬಸವ ಜಯಮೃತ್ಯುಂಜಯ ಶ್ರೀ ತಿಳಿಸಿದ್ದಾರೆ.

ಹೋರಾಟದಿಂದ ಹಿಂದೆ ಸರಿಯದಿರುವುದು ಇದರ ಉದ್ದೇಶ. ಯುವಕರನ್ನು ಹೆಚ್ಚಾಗಿ ಇದರಲ್ಲಿ ಅಳವಡಿಸಿಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಈ ಬೇಡಿಕೆಯಿಂದ ಹೊರಗೆ ಬರಬಾರದು. ಆ ರೀತಿ ಈ ಪ್ರತಿಜ್ಞೆಯನ್ನ ತೆಗೆದುಕೊಳ್ಳುತ್ತೇವೆ. ನಮ್ಮಲ್ಲಿ ಸುಮಾರು 80 ಲಕ್ಷ ಹಿಂದುಳಿದ ವರ್ಗದ ಜನರಿದ್ದಾರೆ. ಹೀಗಾಗಿ ನಮಗೆ 2A ಮೀಸಲಾತಿಯನ್ನು ಕೊಡಲೇಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಮಗೆ 3A ಮೀಸಲಾತಿ ಕೊಟ್ಟಿದ್ದಾರೆ. ಬದಲಾಗಿ ನಮಗೆ 2A ಮೀಸಲಾತಿ ಕೊಡಲೇಬೇಕು. ಸರ್ಕಾರ ನಮ್ಮ ಲಿಂಗಾಯತ ಗೌಡ, ದೀಕ್ಷಾ ಲಿಂಗಾಯತ, ಪಂಚಮಸಾಲಿ, ಹೀಗೆ ಅನೇಕ‌ ಸಮಾಜ ಒಗ್ಗೂಡಿ ಎಲ್ಲರಿಗೂ 2A ಮೀಸಲಾತಿ‌ ಕೊಡಬೇಕು ಎಂದು ಸ್ವಾಮೀಜಿ ಕೇಳಿದ್ದಾರೆ.

ಈಗಾಗಲೇ ಬೆಂಗಳೂರಲ್ಲಿ ಬೃಹತ್ ಹೋರಾಟ ಮಾಡಿದ್ದೇವೆ. ಅದು ಮತ್ತೊಮ್ಮೆ ನಡೆಯದಂತೆ ಸರ್ಕಾರ‌ ನಡೆದುಕೊಳ್ಳುವ ವಿಶ್ವಾಸ ಇದೆ. ಈ ಹಿಂದೆ ಕಾನೂನು ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ನಮಗೆ ಮೀಸಲಾತಿ ಭರವಸೆ ನೀಡಿದ್ದರು. ಆದರೆ ಇಂದು ಅವರೇ ಸಿಎಂ ಆಗಿದ್ದಾರೆ. ಅವರು ನಮಗೆ 2A ಮೀಸಲಾತಿ ಕೊಡುವ ವಿಶ್ವಾಸ ಇದೆ. ಸುಪ್ರೀಂ ಕೋರ್ಟ್ ಅನ್ವಯ ಮೀಸಲಾತಿ ಶೇಕಡಾ 50 ಮೀರಬಾರದು. ಶೇಕಡಾ 50ರ ಒಳಗೆ ನಮಗೆ ಮೀಸಲಾತಿ ಕಲ್ಪಿಸಿಕೊಡಿ ಎಂದಷ್ಟೇ ನಾವು ಕೇಳುತ್ತಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಇದನ್ನೂ ಓದಿ: 

ಜಾತಿ ಆಧಾರಿತ ಮೀಸಲಾತಿ ನಿಲ್ಲಿಸಿ ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಆಧರಿಸಿ ಮೀಸಲಾತಿ ಒದಗಿಸಿ: ಮುಖ್ಯಮಂತ್ರಿ ಚಂದ್ರು ಒತ್ತಾಯ

ಪ್ರಬಲ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಡಿ; ಜಾತಿ ಗಣತಿ ಆಧರಿಸಿ ಬಜೆಟ್ ಮಂಡಿಸಿ: ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮನವಿ

(Mukhyamantri Chandru says about reservation to Panchamasali Community he is the Permanent CM no one should threaten his degree)

ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್