ಜಾತಿ ಆಧಾರಿತ ಮೀಸಲಾತಿ ನಿಲ್ಲಿಸಿ ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಆಧರಿಸಿ ಮೀಸಲಾತಿ ಒದಗಿಸಿ: ಮುಖ್ಯಮಂತ್ರಿ ಚಂದ್ರು ಒತ್ತಾಯ

ಈಗಾಗಲೇ ನಡೆದಿರುವ ಸಾಮಾಜಿಕ, ಶೈಕ್ಷಣಿಕ ಗಣತಿಯ ವರದಿ ಮಂಡನೆ ಆಗಲಿ. ಅದರ ಆಧಾರದ ಮೇಲೆ ಸರ್ಕಾರ ಮೀಸಲಾತಿ ನೀಡಬೇಕು ಎಂದು ಅವರು ಆಗ್ರಹಿಸಿದರು.

ಜಾತಿ ಆಧಾರಿತ ಮೀಸಲಾತಿ ನಿಲ್ಲಿಸಿ ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಆಧರಿಸಿ ಮೀಸಲಾತಿ ಒದಗಿಸಿ: ಮುಖ್ಯಮಂತ್ರಿ ಚಂದ್ರು ಒತ್ತಾಯ
ಮುಖ್ಯಮಂತ್ರಿ ಚಂದ್ರು
Follow us
TV9 Web
| Updated By: sandhya thejappa

Updated on:Aug 22, 2021 | 10:27 AM

ತುಮಕೂರು: 2 ಎ ಗೆ ಯಾರು ಬರಬಾರದು. ಬಂದರೆ ಸದ್ಯ ಇರುವವರಿಗೆ ತೊಂದರೆ ಯಾಗಲಿದೆ ಅಂತಾ ಮುಖ್ಯ ಮಂತ್ರಿ ಚಂದ್ರು ತಿಳಿಸಿದ್ದಾರೆ. ಸರ್ಕಾರ ಕೂಡ 2ಎ ಯಾರನ್ನೂ ಸೇರಿಸಬಾರದು. ಸದ್ಯ ಇರೋರಿಗೆ ಸಮರ್ಪಕವಾಗಿ ಮೀಸಲಾತಿ ಸಿಗುತ್ತಿಲ್ಲ. ಹೀಗಾಗಿ ಮತ್ತಷ್ಟು ಬಂದರೆ ತೊಂದರೆ ಯಾಗಲಿದೆ ಅಂತಾ ಹೇಳಿದ್ದಾರೆ. ಅಲ್ಲದೇ ಎಲ್ಲರಿಗೂ ಸಮಸ್ಯೆ ಇರುತ್ತೆ ಅಂತವರನ್ನ ಹುಡುಕಿ ಬೇಕಾದರೆ ವಿಶೇಷ ಅನುದಾನ ನೀಡಲಿ. ನಿಗಮ ಮಾಡಲಿ ಇದನ್ನ ಹೊರತುಪಡಿಸಿ 2 ಎ ಸೇರಿಸಬಾರದು ಅಂತಾ ಒತ್ತಾಯಿಸಿದ್ದಾರೆ.ಅಲ್ಲದೇ ಕಾಂತರಾಜ್ ವರದಿಯನ್ನ ಜಾರಿಗೊಳಿಸಬೇಕು. ಮೀಸಲಾತಿಗೆ ಅವೈಜ್ಞಾನಿಕವಾಗಿ ಸೇರ್ಪಡೆಯನ್ನ ನಿಲ್ಲಿಸಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮೀಸಲಾತಿ ನೀಡಬೇಕು ಅಂತಾ ಒತ್ತಾಯಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್ , ‘ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ರಾಜ್ಯಾದ್ಯಂತ ಸಭೆ ಮಾಡುತಿದ್ದೇವೆ. ಇದೀಗ ತುಮಕೂರಿನಲ್ಲಿ ಎರಡನೇ ಸಭೆ ನಡೆದಿದೆ. 2ಎ ಗೆ ಯಾವುದೇ ಬಲಿಷ್ಠ ಸಮುದಾಯ ಬರಬಾರದು ಎಂಬುದು ನಮ್ಮ ಒಕ್ಕೊರಲ ಒತ್ತಾಯವಾಗಿದೆ. ಇದರಿಂದ102 ಜಾತಿ ಮತ್ತು ಪ್ರವರ್ಗ 1 ರಲ್ಲಿ 95 ಜಾತಿಗಳಿಗೆ ಅನ್ಯಾಯ ಆಗಲಿದೆ. ಅತಿ ಹಿಂದುಳಿದ ಅನೇಕ ಅಸಹಾಯಕ ಸಮುದಾಯಗಳಿಗೆ ಇನ್ನೂ ಕೂಡ 1% ಮೀಸಲಾತಿ ತಲುಪಿಲ್ಲ. ದೊಡ್ಡ ಸಮುದಾಯ ಬಂದು ಇಲ್ಲಿ ಸೇರಿಕೊಂಡರೆ ಈ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಶಾಸನ ಸಭೆ ಮತ್ತು ಲೋಕ‌ಸಭೆಯಲ್ಲಿ ಕೇವಲ ಎಸ್ಸಿ ಎಸ್ಟಿಗೆ ಮಾತ್ರ ಮೀಸಲಾತಿ ಕೊಟ್ಟಿದ್ದಾರೆ. ಹಿಂದುಳಿದ ವರ್ಗಗಳಿಗೂ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮೀಸಲಾತಿ ಕೊಡಬೇಕು ಎಂಬ ಒತ್ತಾಯ ಇದೆ. ಪಂಚಮ ಸಾಲಿಗರಿಗೆ 2ಎ ಮೀಸಲಾತಿ ಕೊಡಬಾರದು ಎಂದು ನಾವು ಆಗ್ರಹಿಸುತ್ತೇವೆ. ಇದರಿಂದ ಹಿಂದುಳಿದ ಅಸಹಾಯ ಕುಟುಂಬದವರಿಗೆ ಅನ್ಯಾಯವಾಗುತ್ತದೆ. 2015 ರಲ್ಲೇ ಜಾತಿ ಗಣತಿ ವರದಿಯಾಗಿತ್ತು. ಅಂದಿನ ಕಾಂಗ್ರೆಸ್ ಸರ್ಕಾರ ಆಗಲಿ ಇಂದಿನ ಬಿಜೆಪಿ ಸರ್ಕಾರವಾಗಲಿ ಅದನ್ನು ಬಹಿರಂಗ ಪಡಿಸಿಲ್ಲ. ಎಂದು ಶೀಘ್ರ ವರದಿ ಮಂಡಿಸುವಂತೆ ಸಭೆಯಲ್ಲಿ ಒತ್ತಾಯ ಮಾಡಲಾಗಿದೆ’ ಎಂದು ತಿಳಿಸಿದರು.

ಇದನ್ನೂ ಓದಿ: 

Tv9 Kannada Digital Exclusive: ತಾಲಿಬಾನಿಗಳು ನಮ್ಮ ಟಿವಿಯನ್ನು ಕಿತ್ತುಕೊಂಡರು: ಅಫ್ಘಾನಿಸ್ತಾನದಲ್ಲಿ ಕನ್ನಡ ನಾಡಿನ ಯೋಧರ ಕಥೆ

ಪ್ರಬಲ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಡಿ; ಜಾತಿ ಗಣತಿ ಆಧರಿಸಿ ಬಜೆಟ್ ಮಂಡಿಸಿ: ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮನವಿ

(Mukhyamantri Chandru urges stop caste based reservation but give economic stage based reservation)

Published On - 6:40 pm, Sat, 21 August 21

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್