ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ; ಎ2 ಆರೋಪಿ ವಾರ್ಡನ್ ರಶ್ಮಿ ಜೈಲಿನಿಂದ ಬಿಡುಗಡೆ
ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್ನ ಎ2 ಆರೋಪಿ ಆಗಿರುವ ಲೇಡಿ ವಾರ್ಡನ್ ರಶ್ಮಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಡಿ.21ರಂದು ಹೈಕೋರ್ಟ್(High Court)ನಿಂದ ಬೇಲ್ ಮಂಜೂರಾಗಿತ್ತು. ಇಂದು ಜೈಲಿನಿಂದ ಹೊರಗಡೆ ಬಂದಿದ್ದಾರೆ.
ಚಿತ್ರದುರ್ಗ, ಡಿ.27: ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್ನ ಎ2 ಆರೋಪಿ ಆಗಿರುವ ಲೇಡಿ ವಾರ್ಡನ್ ರಶ್ಮಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಡಿ.21ರಂದು ಹೈಕೋರ್ಟ್(High Court)ನಿಂದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ರವರ ಪೀಠದಿಂದ ಬೇಲ್ ಮಂಜೂರಾಗಿತ್ತು. ಈ ಹಿನ್ನಲೆ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಾಖಲೆಗಳನ್ನು ಪರಿಶೀಲಿಸಿ ಇಂದು ಬಿಡುಗಡೆಯಾಗಿದ್ದಾರೆ.
ಚಾರ್ಜ್ಶೀಟ್ನಲ್ಲಿ ಎರಡನೇ ಆರೋಪಿ ಆಗಿರುವ ಲೇಡಿ ವಾರ್ಡನ್
ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯಕ್ಕೆ ವಾರ್ಡನ್ ರಶ್ಮಿ ಸಹಕಾರ ನೀಡಿದ್ದರು. ಈ ಹಿನ್ನಲೆ ಚಾರ್ಜ್ಶೀಟ್ನಲ್ಲಿ ಎರಡನೇ ಆರೋಪಿ ಆಗಿರುವ ಲೇಡಿ ವಾರ್ಡನ್ ವಿರುದ್ಧ, ಬೆಚ್ಚಿ ಬೀಳಿಸುವ ಆರೋಪಗಳು ಮಾಡಲಾಗಿತ್ತು. ಈ ಪೈಕಿ, ಮುರುಘಾ ಶ್ರೀಗಳ ಬಳಿ ಬಾಲಕಿಯರನ್ನ ಕರೆದೊಯ್ಯುವ ಕೆಲಸವನ್ನ ಇದೇ ವಾರ್ಡನ್ ಮಾಡುತ್ತಿದ್ದಳು ಎನ್ನಲಾಗಿತ್ತು. ಯಾರನ್ನ ಕಳಿಸಬೇಕು, ಯಾವಾಗ ಕಳಿಸಬೇಕು, ಹೇಗೆ ಕಳಿಸಬೇಕು ಎನ್ನುವ ಎಲ್ಲ ವಿಚಾರವನ್ನೂ ಈಕೆಯೇ ನೋಡಿಕೊಳ್ಳುತ್ತಿದ್ದು, ಇದಕ್ಕೆ ತಿರುಗಿ ಬೀಳುವ ಬಾಲಕಿಯರ ಮೇಲೆ, ಇಲ್ಲದ ನೆಪವೊಡ್ಡಿ ಶಿಕ್ಷೆಯನ್ನೂ ನೀಡುತ್ತಿದ್ದಳು ಎನ್ನುವ ಸಂಗತಿಯನ್ನ ಬಾಲಕಿಯರು ಹೇಳಿದ್ದರು.
ಇದನ್ನೂ ಓದಿ:ಲೈಂಗಿಕ ದೌರ್ಜನ್ಯಕ್ಕೆ ಸಹಕಾರ: ಮುರುಘಾ ಮಠದ ವಾರ್ಡನ್ ರಶ್ಮಿಗೆ ಜಾಮೀನು
ಇನ್ನು ಪ್ರಮುಖ ಆರೋಪಿಯಾಗಿರುವ ಮುರುಘಾ ಶ್ರೀ ಖಾಸಗಿ ಕೋಣೆಗೆ ಆರೋಪಿ ನಂಬರ್ 2 ಆಗಿರುವ ಇದೇ ಹಾಸ್ಟೆಲ್ ವಾರ್ಡನ್ ಮಕ್ಕಳನ್ನ ಕರೆದುಕೊಂಡು ಹೋಗುತ್ತಿದ್ದರು. ಈ ಹಿನ್ನಲೆ ಇದಕ್ಕೆ ಪೂರಕವಾದ ಸಾಕ್ಷ್ಯಧಾರಗಳು ಲಭಿಸಿವೆ ಎಂದು ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:45 pm, Wed, 27 December 23