ಅಪರೂಪ: ಹೊಳಲ್ಕೆರೆಯಲ್ಲಿ ಒಬ್ಬಂಟಿಯಾಗಿ ಜೀವಿಸುತ್ತಿದ್ದ ವ್ಯಕ್ತಿ ಸಾವು; ಮೃತರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆ

ಅಪರೂಪ: ಹೊಳಲ್ಕೆರೆಯಲ್ಲಿ ಒಬ್ಬಂಟಿಯಾಗಿ ಜೀವಿಸುತ್ತಿದ್ದ ವ್ಯಕ್ತಿ ಸಾವು; ಮೃತರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆ

TV9 Web
| Updated By: ಸಾಧು ಶ್ರೀನಾಥ್​

Updated on: Jun 30, 2023 | 10:32 AM

ಭಕ್ತರಿಂದ ಬಂದ ಕಾಣಿಕೆ ಹಣವೇ ಸುಮಾರು 50 ಸಾವಿರ ರೂಪಾಯಿಗಿಂತ ಹೆಚ್ಚಿದೆ. ಕೃಷಿ ಮತ್ತಿತರೆ ಆದಾಯದಿಂದ ಬಂದ 30 ಲಕ್ಷಕ್ಕೂ ಅಧಿಕ ಹಣವೂ ಪತ್ತೆಯಾಗಿದೆ. 2 ದಿನಗಳ ಹಿಂದೆ ಭಕ್ತರು ಶಾಸ್ತ್ರಿಗಳ ಮನೆಯನ್ನು ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ.

ಚಿತ್ರದುರ್ಗ: ಅಪರೂಪದ ಪ್ರಕರಣದಲ್ಲಿ ಹೊಳಲ್ಕೆರೆಯಲ್ಲಿ ಮೃತ ಅರ್ಚಕರ ಮನೆಯಲ್ಲಿ (house) ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿರುವ ಮನೆಯ ವಿವಿಧೆಡೆ ಇರಿಸಿದ್ದ 30 ಲಕ್ಷ ರೂಪಾಯಿಗೂ ಅಧಿಕ ಹಣ ಸಿಕ್ಕಿದೆ. ಹೊಳಲ್ಕೆರೆಯಲ್ಲಿ ವಾರದ ಹಿಂದೆ ಗಂಗಾಧರ ಶಾಸ್ತ್ರಿ (70) ಮೃತಪಟ್ಟಿದ್ದರು (Death). ಗಂಗಾಧರ ಶಾಸ್ತ್ರಿ ಒಂಟಿಯಾಗಿ ಬದುಕು ಸವೆಸಿದ್ದರು. ಶಾಸ್ತ್ರಿಗಳು ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತಿದ್ದರು. ಗಂಗಾಧರ ಶಾಸ್ತ್ರಿ 16 ಎಕರೆ‌ ಜಮೀನಿದ್ದು, 4 ಎಕರೆ ತೆಂಗಿನ ತೋಟ, ಗದ್ದೆ ಹೊಂದಿದ್ದರು.

ಭಕ್ತರಿಂದ ಬಂದ ಕಾಣಿಕೆ ಹಣವೇ ಸುಮಾರು 50 ಸಾವಿರ ರೂಪಾಯಿಗಿಂತ ಹೆಚ್ಚಿದೆ. ಕೃಷಿ ಮತ್ತಿತರೆ ಆದಾಯದಿಂದ ಬಂದ 30 ಲಕ್ಷಕ್ಕೂ ಅಧಿಕ ಹಣವೂ ಪತ್ತೆಯಾಗಿದೆ. 2 ದಿನಗಳ ಹಿಂದೆ ಭಕ್ತರು ಶಾಸ್ತ್ರಿಗಳ ಮನೆಯನ್ನು ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ. ಶಾಸ್ತ್ರಿಗಳ ಮನೆಯಲ್ಲಿ ಹಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮತ್ತು ಶಾಸ್ತ್ರಿಗಳಿಗೆ ಯಾರೂ ವಾರಸುದಾರರು ಇಲ್ಲದೆ ಹಿನ್ನೆಲೆಯಲ್ಲಿ ಮುಂದಿನ ಶುಕ್ರವಾರ (ಜುಲೈ 7ಕ್ಕೆ) ಭಕ್ತರ ಸಭೆ ಕರೆದು, ಸಮಿತಿ ರಚನೆಗೆ ಸ್ಥಳೀಯರು ನಿರ್ಧಾರ ಮಾಡಿದ್ದಾರೆ. ಗಂಗಾಧರ ಶಾಸ್ತ್ರಿಗಳಿಗೆ ಅವರದೇ ಜಮೀನಿನಲ್ಲಿ ಗದ್ದುಗೆ ನಿರ್ಮಿಸಲು ಸಹ ಸ್ಥಳೀಯರು ನಿರ್ಧರಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ವರದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ