ಚಿತ್ರದುರ್ಗ: ಕೋಟೆನಾಡಿನಿಂದ ನಟ ಶಶಿಕುಮಾರ್ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಚಿತ್ರದುರ್ಗ ಜಿಲ್ಲೆಯ 2 ವಿಧಾನಸಭೆ ಕ್ಷೇತ್ರಗಳ ಮೇಲೆ ಶಶಿಕುಮಾರ್ ಕಣ್ಣಿಟ್ಟಿದ್ದು, ಇದರ ಭಾಗವಾಗಿಯೇ ಮೊಳಕಾಲ್ಮೂರು, ಚಳ್ಳಕೆರೆ ವಿಧಾನಸಭೆ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎರಡೂ ಕ್ಷೇತ್ರಗಳು ಪರಿಶಿಷ್ಟ ವರ್ಗಕ್ಕೆ ಮೀಸಲಾಗಿವೆ. ಈ ಹಿನ್ನೆಲೆಯಲ್ಲಿ ಚಳ್ಳಕೆರೆ ಹಾಗೂ ಮೊಳಕಾಲ್ಮೂರಿಗೆ ನಟ ಭೇಟಿನೀಡುತ್ತಿದ್ದಾರೆ.
ಶಶಿಕುಮಾರ್ ನಿನ್ನೆ (ಅಕ್ಟೋಬರ್ 25) ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದರು. ಹಾಗೆಯೇ ಮೊಳಕಾಲ್ಮೂರಿನ ಸಾಯಿಬಾಬ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅವರಿಗೆ ಅಭಿಮಾನಿಗಳು, ಬೆಂಬಲಿಗರು ಸಾಥ್ ನೀಡಿದ್ದಾರೆ. ಇದೇ ವೇಳೆ ಚಳ್ಳಕೆರೆ ಅಥವಾ ಮೊಳಕಾಲ್ಮೂರಿನಿಂದ ಸ್ಪರ್ಧಿಸುವ ಇಂಗಿತವನ್ನು ಶಶಿಕುಮಾರ್ ವ್ಯಕ್ತಪಡಿಸಿದ್ದಾರೆ. ಶಶಿಕುಮಾರ್, ಚಿತ್ರದುರ್ಗದ ಮಾಜಿ ಸಂಸದರಾಗಿದ್ದು, 2008ರಲ್ಲಿ ಚಳ್ಳಕೆರೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪಮತಗಳಿಂದ ಸೋತಿದ್ದರು.
ಇದನ್ನೂ ಓದಿ:
ಗ್ರಾಮ ಪಂಚಾಯತಿಗಳಿಂದಲೇ 47 ಕೋಟಿ ರೂ. ಬಿಲ್ ಬಾಕಿ; ಹೆಸ್ಕಾಮ್ ಬಿಲ್ ಕಟ್ಟದ ಹಿನ್ನೆಲೆ ಬೀದಿ ದೀಪದ ವಿದ್ಯುತ್ ಕಟ್
ಸುಪ್ರೀಂಕೋರ್ಟ್ ಆದೇಶ ಬಂದರೆ ಬಿಬಿಎಂಪಿ ಚುನಾವಣೆ; ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ
Published On - 9:57 am, Tue, 26 October 21