ಮುರುಘಾಮಠದಿಂದ ಬಸವರಾಜನ್‌ಗೆ ಗೇಟ್‌ಪಾಸ್, ನ್ಯಾ. ವಸ್ತ್ರದ್‌ಮಠ್ ನೇಮಕಕ್ಕೆ ನಿರ್ಧಾರ
ಎಸ್.ಕೆ.ಬಸವರಾಜನ್ ಇದುವರೆಗಿನ ಕಾರ್ಯದರ್ಶಿಯಾಗಿದ್ದರು. ಬಸವರಾಜನ್ ಸ್ಥಾನಕ್ಕೆ ಎಸ್.ಬಿ.ವಸ್ತ್ರದ್‌ಮಠ್ ನೇಮಕಕ್ಕೆ ಇದೀಗ ವೇದಿಕೆ ಸಿದ್ಧವಾಗಿದೆ.
ಚಿತ್ರದುರ್ಗ: ಲೈಂಗಿಕ ಪ್ರಕರಣಗಳ ಚಟುವಟಿಕೆ ಬೆನ್ನಲ್ಲೇ ಮುರುಘಾಶ್ರೀಗಳು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಮುರುಘಾಮಠದಿಂದ (Sri Murugha Matha) ಎಸ್.ಕೆ. ಬಸವರಾಜನ್‌ಗೆ (SK Basavaraj) ಗೇಟ್‌ಪಾಸ್ ನೀಡಲು ನಿರ್ಧರಿಸಲಾಗಿದ್ದು, ಮುರುಘಾಮಠದ ಎಸ್.ಜೆ.ಎಂ. ವಿದ್ಯಾಪೀಠ ಸೇವೆಯಿಂದ ಅವರನ್ನು ಮುಕ್ತಗೊಳಿಸಲಾಗಿದೆ. ಅವರ ಜಾಗದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದದ ಕಾರ್ಯದರ್ಶಿಯನ್ನಾಗಿ ನಿವೃತ್ತ ನ್ಯಾಯಾಧೀಶ ಎಸ್.ಬಿ. ವಸ್ತ್ರದ್‌ಮಠ್ (retired judge SB Vastrad) ನೇಮಕಕ್ಕೆ ನಿರ್ಧಾರ ಮಾಡಲಾಗಿದೆ. ಎಸ್.ಕೆ.ಬಸವರಾಜನ್ ಇದುವರೆಗಿನ ಕಾರ್ಯದರ್ಶಿಯಾಗಿದ್ದರು. ಬಸವರಾಜನ್ ಸ್ಥಾನಕ್ಕೆ ಎಸ್.ಬಿ.ವಸ್ತ್ರದ್‌ಮಠ್ ನೇಮಕಕ್ಕೆ ಇದೀಗ ವೇದಿಕೆ ಸಿದ್ಧವಾಗಿದೆ.
ಪೋಕ್ಸೋ ಪ್ರಕರಣದ 2ನೇ ಆರೋಪಿ ವಿಚಾರಣೆ:
ಮುರುಘಾಶ್ರೀಗಳ ವಿರುದ್ಧ ಎ1 ಆರೋಪಿಯಾಗಿ ದಾಖಲಾಗಿರುವ ಪ್ರಕರಣದಲ್ಲಿ ಲೇಡಿ ವಾರ್ಡನ್ ವಿಚಾರಣೆ ನಡೆದಿದೆ. ವಿಚಾರಣೆ ಕುರಿತಾಗಿ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಮಾತನಾಡಿದ್ದು, ಪೋಕ್ಸೋ ಕೇಸ್‌ನಲ್ಲಿ ಎರಡನೇ ಆರೋಪಿಯಾಗಿರುವ ಲೇಡಿ ವಾರ್ಡನ್ ವಿಚಾರಣೆ ನಡೆಸಿದ್ದೇವೆ. ವಿಚಾರಣೆಗೆ ಅಗತ್ಯವಿದ್ದಲ್ಲಿ ಎಲ್ಲಾ ಆರೋಪಿಗಳನ್ನೂ ವಿಚಾರಣೆ ಮಾಡಲಾಗುವುದು ಎಂದು ಎಸ್ಪಿ ಪರಶುರಾಮ್ ಮಾಹಿತಿ ನೀಡಿದ್ದಾರೆ.
ಮುರುಘಾಮಠದ ಎಸ್.ಕೆ. ಬಸವರಾಜನ್ಗೂ ಬಂಧನದ ಭೀತಿ
ಮುರುಘಾಮಠದ ಲೈಂಗಿಕ ಪ್ರಕರಣಗಳ ಹಿನ್ನೆಲೆಯಲ್ಲಿ ಮುರುಘಾಮಠದ ಎಸ್.ಕೆ. ಬಸವರಾಜನ್ಗೂ ಬಂಧನದ ಭೀತಿ ಎದುರಾಗಿದೆ. ಹಾಗಾಗಿ ಜಾಮೀನು ಕೋರಿ ಎಸ್.ಕೆ. ಬಸವರಾಜನ್ ಪರ ವಕೀಲರು ಚಿತ್ರದುರ್ಗ ಜಿಲ್ಲಾ 1ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹಾಸ್ಟೆಲ್ ಲೇಡಿ ವಾರ್ಡನ್ ಪ್ರಕರಣದಲ್ಲಿ ಬಸವರಾಜನ್‌ಗೆ ಸಂಕಷ್ಟ ಎದುರಾಗಿದೆ. ಮುರುಘಾಮಠದ ಆಡಳಿತಾಧಿಕಾರಿಯಾಗಿ ಎಸ್.ಕೆ.ಬಸವರಾಜನ್ ಅವರ ವಿರುದ್ಧ ಬಲಾತ್ಕಾರ ಯತ್ನ, ಬೆದರಿಕೆ ಆರೋಪ ಕೇಳಿಬಂದಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಶಾಸಕರೂ ಆದ ಬಸವರಾಜನ್ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಕೇಳಿಬಂದಿದ್ದು, ಕೋರ್ಟ್ಗೆ ನ್ಯಾಯಾಧೀಶರು ಆಗಮಿಸುತ್ತಿದ್ದಂತೆ ನ್ಯಾಯಾಧೀಶರ ಎದುರು ಸಿಆರ್ಪಿಸಿ 164 ಅಡಿ ಸಂತ್ರಸ್ತೆ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಸಂತ್ರಸ್ತೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಕೋರ್ಟ್ಗೆ ಹಾಜರಾಗಿದ್ದಾರೆ.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ದಂಪತಿಗೆ ಜಾಮೀನು
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ದಂಪತಿಗೆ ಜಾಮೀನು ದೊರೆತಿದೆ. ಎಸ್.ಕೆ.ಬಸವರಾಜನ್ ವಿರುದ್ಧ ಅತ್ಯಾಚಾರ ಆರೋಪದಡಿ ದೂರು ದಾಖಲಾಗಿತ್ತು. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಹಾಸ್ಟೆಲ್ ಮಹಿಳಾ ವಾರ್ಡನ್ ದೂರು ದಾಖಲಿಸಿದ್ದರು.
Published On - 3:41 pm, Thu, 1 September 22