ಚಿತ್ರದುರ್ಗ: ಮುರುಘಾಶ್ರೀಗಳ ಪೀಠಾರೋಹಣ ತೃತೀಯ ದಶಮಾನೋತ್ಸವ ಹಿನ್ನೆಲೆಯಲ್ಲಿ ಕೋಟೆನಾಡಿನ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾಶರಣರಿಗೆ ಮುರುಘಾಶ್ರೀ ಮಾದರಿಯ ಬೆಳ್ಳಿ ಪುತ್ಥಳಿ ಉಡುಗೊರೆ ನೀಡಲು ಮುರುಘಾಶ್ರೀಗಳ ಶಿಷ್ಯವೃಂದ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮುರುಘಾಶ್ರೀಗಳ ಪೀಠಾರೋಹಣ ತೃತೀಯ ದಶಮಾನೋತ್ಸವ ಹಿನ್ನೆಲೆಯಲ್ಲಿ ಅಕ್ಟೋಬರ್ 8ರಿಂದ 18ರ ವರೆಗೆ ಅಂದ್ರೆ 10 ದಿನಗಳಿಂದ ಶರಣ ಸಂಸ್ಕೃತಿ ಉತ್ಸವ ನಡೆಯುತ್ತಿದ್ದು ಇಂದು ಉತ್ಸವದ ಕೊನೆಯ ದಿನವಾಗಿದೆ. ಹೀಗಾಗಿ ಗುರುವಂದನೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಮುರುಘಾಶ್ರೀಗಳಿಗೆ ಉಡುಗೊರೆ ನೀಡಲು ಭಕ್ತರು, ಶಿಷ್ಯವೃಂದ ಮುಂದಾಗಿದ್ದು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ತಮ್ಮದೇ ರೂಪದ ಬೆಳ್ಳಿ ಪುತ್ಥಳಿ ನೀಡಿ ಗೌರವಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇಂದು ಸಂಜೆ ಮಠದ ಅನುಭವ ಮಂಟಪದಲ್ಲಿ ಗುರುವಂದನೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಡಾ.ಶಿವಮೂರ್ತಿ ಮುರುಘಾಶರಣರಿಗೆ 21 ಇಂಚು ಎತ್ತರವಿರುವ, 20 ಕೆಜಿ ಬೆಳ್ಳಿಯ ಮುರುಘಾಶ್ರೀ ಮಾದರಿ ಬೆಳ್ಳಿ ಪುತ್ಥಳಿ ಉಡುಗೊರೆಯಾಗಿ ನೀಡಲಿದ್ದಾರೆ. ನಾಯಕನಹಟ್ಟಿ ಗ್ರಾಮದ ಶಿಲ್ಪಿ ಮಹೇಶ್ ಆಚಾರ್ ಈ ಬೆಳ್ಳಿ ಪುತ್ಥಳಿಯನ್ನು ನಿರ್ಮಿಸಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿಗೆ ‘ಬಸವ ಭೂಷಣ’ ಪ್ರಶಸ್ತಿ
ಇನ್ನು ಶರಣಸಂಸ್ಕೃತಿ ಉತ್ಸವ ಅಂಗವಾಗಿ ಮುರುಘಾಮಠದಲ್ಲಿಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಿಎಂ ಬಸರಾಜ ಬೊಮ್ಮಾಯಿ ಹಾಗೂ ಬಿಎಸ್ ಯಡಿಯೂರಪ್ಪರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿಗೆ ‘ಬಸವ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಿದ್ದು ಮಾಜಿ ಸಿಎಂ B.S.ಯಡಿಯೂರಪ್ಪಗೆ ‘ಶರಣಶ್ರೀ’ ಪ್ರಶಸ್ತಿ ನೀಡಲಿದ್ದಾರೆ.
ಇದನ್ನೂ ಓದಿ: Video: ಕೇರಳ ಮಳೆಯ ಭೀಕರತೆ; ನೋಡನೋಡುತ್ತಿದ್ದಂತೆ ನದಿಗೆ ಕುಸಿದುಬಿತ್ತು ಇಡೀ ಮನೆ