Video: ಕೇರಳ ಮಳೆಯ ಭೀಕರತೆ; ನೋಡನೋಡುತ್ತಿದ್ದಂತೆ ನದಿಗೆ ಕುಸಿದುಬಿತ್ತು ಇಡೀ ಮನೆ

ಕೇರಳದಲ್ಲಿ ಐದಾರು ದಿನಗಳಿಂದಲೂ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಶನಿವಾರದಿಂದ ಇಲ್ಲಿಯವರೆಗೆ 24 ಜನರು ಮೃತಪಟ್ಟಿದ್ದಾರೆ. 11 ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಣೆಯಾಗಿದೆ.

Video: ಕೇರಳ ಮಳೆಯ ಭೀಕರತೆ; ನೋಡನೋಡುತ್ತಿದ್ದಂತೆ ನದಿಗೆ ಕುಸಿದುಬಿತ್ತು ಇಡೀ ಮನೆ
ಕೇರಳದಲ್ಲಿನದಿಗೆ ಬಿದ್ದ ಮನೆ
Follow us
TV9 Web
| Updated By: Lakshmi Hegde

Updated on: Oct 18, 2021 | 10:59 AM

ಕೇರಳದಲ್ಲಂತೂ ಮಳೆ, ಪ್ರವಾಹದಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಅಲ್ಲಿನ ಬಹುತೇಕ ಜಿಲ್ಲೆಗಳ ಜನರು ಜೀವ ಕೈಯಲ್ಲಿ ಹಿಡಿದು ಕಾಲಕಳೆಯುವಂತಾಗಿದೆ.  ಪ್ರವಾಹ ಮನೆಗಳಿಗೆ ನುಗ್ಗುತ್ತಿದೆ..ಈ ಮಧ್ಯೆ ಮನೆಯೊಂದು ರಭಸವಾದ ನೀರಿನಲ್ಲಿ ಕೊಚ್ಚಿಕೊಂಡು ಹೋದ ಭಯಾನಕ ವಿಡಿಯೋ ವೈರಲ್​ ಆಗಿದೆ. ಕೊಟ್ಟಾಯಂನ ಮುಂಡಕಾಯಂ ಎಂಬಲ್ಲಿ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿದವರು ನಿಜಕ್ಕೂ ತಮಗೆ ಭಯವಾಗುತ್ತಿದೆ ಎಂದಿದ್ದಾರೆ. 

ಭಾರಿಮಳೆಯಿಂದ ಕೆಂಪುಬಣ್ಣಕ್ಕೆ ತಿರುಗಿ, ರಭಸವಾಗಿ ಹರಿಯುತ್ತಿರುವ ನದಿಯೊಂದು ಒಂದು ಮನೆಯನ್ನು ಕೊಚ್ಚಿಕೊಂಡು ಹೋಗಿರುವ ವಿಡಿಯೋ ಇದು. ಅಲ್ಲೆಲ್ಲ ಜನರು ನೋಡುತ್ತ ನಿಂತಿದ್ದಾರೆ. ಅವರ ಕಣ್ಣೆದುರಲ್ಲೇ ಮನೆ ನದಿಗೆ ಉರುಳಿ ಬಿದ್ದು, ಕೊಚ್ಚಿಕೊಂಡು ಹೋಗುತ್ತದೆ. ಅದರ ಗೋಡೆಗಳು ಕುಸಿಯುವುದಿಲ್ಲ. ಬದಲಿಗೆ ಇಡೀ ಮನೆಯೇ ಬುಡಸಮೇತ ಬೀಳುವ ದೃಶ್ಯ ಎಂಥವರಿಗಾದರೂ ಹೆದರಿಕೆ ಹುಟ್ಟಿಸುವಂತಿದೆ.

ಕೇರಳದಲ್ಲಿ ಐದಾರು ದಿನಗಳಿಂದಲೂ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಶನಿವಾರದಿಂದ ಇಲ್ಲಿಯವರೆಗೆ 24 ಜನರು ಮೃತಪಟ್ಟಿದ್ದಾರೆ. 11 ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಣೆಯಾಗಿದೆ. ಅದರಲ್ಲಿ 13 ಮೃತದೇಹಗಳು ಪತ್ತೆಯಾಗಿದ್ದು ಕೊಟ್ಟಾಯಂ ಜಿಲ್ಲೆಯಲ್ಲಿ. ಕೊಟ್ಟಾಯಂ ಮತ್ತು ಇಡುಕ್ಕಿಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದೆ. ಇನ್ನು ತಿರುವನಂತಪುರಂನಲ್ಲೂ ಒಂದು ಮನೆ ಕುಸಿದುಬಿದ್ದಿದೆ. ಆ ಮನೆಯಲ್ಲಿ ಆರು ಮಂದಿ ಇದ್ದು, ಎಲ್ಲರೂ ಅವಶೇಷಗಳಡಿ ಸಿಲುಕಿದ್ದರು. ಅದೃಷ್ಟವಶಾತ್​ ಎಲ್ಲರನ್ನೂ ಪ್ರಾಣಾಪಾಯದಿಂದ ಪಾರುಮಾಡಲಾಗಿದೆ.  ಈ ಮನೆಯಲ್ಲಿ 80 ವರ್ಷದ ಮಹಿಳೆ ಲೀಲಾ ಎಂಬುವರು ಅಡುಗೆ ಮನೆ ಸಮೀಪ ಮಲಗಿದ್ದರು. ಮನೆ ಕುಸಿಯುತ್ತಿರುವುದು ಮೊದಲು ಅವರಿಗೇ ಗೊತ್ತಾಗಿದ್ದು. ಇವರ ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರೆಲ್ಲ ಬಂದು ಇವರನ್ನೆಲ್ಲ ಕಾಪಾಡಿದ್ದಾರೆ.

ಇದನ್ನೂ ಓದಿ: ಸೂರತ್​ನ ಪ್ಯಾಕೇಜಿಂಗ್ ಪ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ಇಬ್ಬರು ಸಾವು, 125 ಮಂದಿಗೆ ಗಾಯ

Sri Reddy: ‘ಆತ ಸಲಿಂಗಕಾಮಿ, ಅಂಥ ವ್ಯಕ್ತಿ ಜತೆ ಸಮಂತಾ ಸಂಬಂಧ ಬೆಳೆಸಲ್ಲ’; ನಟಿ ಶ್ರೀರೆಡ್ಡಿ ಶಾಕಿಂಗ್​ ಹೇಳಿಕೆ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್