ಹಿರೇಹಳ್ಳಿ ಟೋಲ್‌ಗೇಟ್ ಸಿಬ್ಬಂದಿಯಿಂದ ಗೂಂಡಾಗಿರಿ; ಇಬ್ಬರು ಸವಾರರು ಆಸ್ಪತ್ರೆಗೆ ದಾಖಲು

ಹಿರೇಹಳ್ಳಿ ಟೋಲ್‌ಗೇಟ್‌ನಲ್ಲಿ ವಾಹನ ಬಿಡುಗಡೆ ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು ಮತ್ತು ಟೋಲ್‌ಗೇಟ್ ಸಿಬ್ಬಂದಿ ನಡುವೆ ವಾಗ್ವಾದ ಶುರುವಾಗಿತ್ತು. ಈ ವೇಳೆ ಮಾತಿಗೆಮಾತು ಬೆಳೆದು ಟೋಲ್‌ಗೇಟ್‌ ಸಿಬ್ಬಂದಿ ವಾಹನ ಸವಾರರ ಮೇಲೆ ಹಲ್ಲೆ ನಡೆಸಿದ್ದಾರೆ.

ಹಿರೇಹಳ್ಳಿ ಟೋಲ್‌ಗೇಟ್ ಸಿಬ್ಬಂದಿಯಿಂದ ಗೂಂಡಾಗಿರಿ; ಇಬ್ಬರು ಸವಾರರು ಆಸ್ಪತ್ರೆಗೆ ದಾಖಲು
ಹಿರೇಹಳ್ಳಿ ಟೋಲ್‌ಗೇಟ್ ಸಿಬ್ಬಂದಿಯಿಂದ ಗೂಂಡಾಗಿರಿ; ಇಬ್ಬರು ಸವಾರರು ಆಸ್ಪತ್ರೆಗೆ ದಾಖಲು
TV9kannada Web Team

| Edited By: Ayesha Banu

Sep 30, 2021 | 8:49 AM

ಚಿತ್ರದುರ್ಗ: ಇಬ್ಬರು ವಾಹನ ಸವಾರರ ಮೇಲೆ ಸಿಬ್ಬಂದಿಯಿಂದ ಹಲ್ಲೆ ನಡೆದಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಟೋಲ್‌ಗೇಟ್ ಸಿಬ್ಬಂದಿಯಿಂದ ಗೂಂಡಾಗಿರಿ ನಡೆದಿದೆ. ಟೋಲ್‌ಗೇಟ್ ಸಿಬ್ಬಂದಿ ವಾಹನ ಸವಾರರ ಮೇಲೆ ಹಲ್ಲೆ ನಡೆಸಿದ್ದಾರೆ.

ಹಿರೇಹಳ್ಳಿ ಟೋಲ್‌ಗೇಟ್‌ನಲ್ಲಿ ವಾಹನ ಬಿಡುಗಡೆ ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು ಮತ್ತು ಟೋಲ್‌ಗೇಟ್ ಸಿಬ್ಬಂದಿ ನಡುವೆ ವಾಗ್ವಾದ ಶುರುವಾಗಿತ್ತು. ಈ ವೇಳೆ ಮಾತಿಗೆಮಾತು ಬೆಳೆದು ಟೋಲ್‌ಗೇಟ್‌ ಸಿಬ್ಬಂದಿ ವಾಹನ ಸವಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಚಳ್ಳಕೆರೆಯ ಶಿವರಾಜು, ರಾಜೇಶ್‌ಗೆ ಗಾಯಗಳಾಗಿದ್ದು ಗಾಯಾಳುಗಳಿಗೆ ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆ ನಡೆಸುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಂಗಳೂರಿನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಎದುರೇ ನೈತಿಕ ಪೊಲೀಸ್ ಗಿರಿ ಪೊಲೀಸ್ ಇನ್ಸ್ಪೆಕ್ಟರ್ ಎದುರೇ ನೈತಿಕ ಪೊಲೀಸ್ ಗಿರಿ ನಡೆದಿದೆ. ಮಂಗಳೂರಿನ ಸುರತ್ಕಲ್ ಟೋಲ್‌ಗೇಟ್ ಬಳಿ ಭಾನುವಾರ ಸಂಜೆ ಹಿಂದೂ ಸಂಘಟನೆ ಯುವಕರು ಹಾಗೂ ಅನ್ಯಕೋಮಿನ ಯುವಕ, ಯುವತಿಯರ ನಡುವೆ ಮಾತಿನ ಚಕಮಕಿಯಾಗಿದ್ದು 5 ಜನರನ್ನು ಬಂಧಿಸಲಾಗಿದೆ.

ಮಂಗಳೂರಿನ ಮೆಡಿಕಲ್ ಕಾಲೇಜೊಂದರ ಹಿಂದೂ-ಮುಸ್ಲಿಂ ಯುವಕ-ಯುವತಿಯರ ಒಟ್ಟು 6 ಜನ ಸ್ನೇಹಿತರು ವೀಕೆಂಡ್ ಎಂದು ಮಲ್ಪೆ ಬೀಚ್ಗೆ ಹೋಗಿ ವಾಪಸ್ ಬರುವಾಗ ಮಂಗಳೂರಿನ ಸುರತ್ಕಲ್ ಟೋಲ್‌ಗೇಟ್ ಬಳಿ ಹಿಂದೂ ಸಂಘಟನೆ ಗುಂಪೊಂದು ಅನ್ಯಕೋಮಿನ ಯುವಕ, ಯುವತಿಯರ ಕಾರನ್ನು ನಿಲ್ಲಿಸಿ ಪ್ರಶ್ನಿಸಲು ಮುಂದಾಗಿದ್ದಾರೆ. ಯುವತಿಯರಿಗೆ ಮುಸ್ಲಿಂ ಯುವಕರ ಜೊತೆ ಏಕೆ ಸುತ್ತಾಡುತ್ತಿದ್ದೀರಿ ಎಂದು ಪ್ರಶ್ನಿಸಿ ನಿಂದಿಸಿದ್ದಾರೆ. ಈ ವೇಳೆ ಹಿಂದೂ ಸಂಘಟನೆ ಯುವಕರು ಮತ್ತು ಮುಸ್ಲಿಂ ಯುವಕರ ನಡುವೆ ಜಗಳ ಶುರುವಾಗಿ ಅನ್ಯಕೋಮಿನ ಯುವಕ, ಯುವತಿಯರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ.

ಇದನ್ನೂ ಓದಿ: ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ನಂತರ ಭಕ್ತರು ಹೊರಗಡೆ ಕಟ್ಟೆ ಮೇಲೆ ಕೆಲ ಹೊತ್ತು ಕುಳಿತುಕೊಳ್ಳಬೇಕು, ಏಕೆ?

ನಾನು ಸರ್ಕಾರಿ ಅಧಿಕಾರಿ.. ಟೋಲ್ ಕಟ್ಟಲ್ಲ ಎಂದಿದ್ದಕ್ಕೆ ಜನರಿಂದ ಸಿಕ್ತು ಧರ್ಮದೇಟು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada