
ಚಿತ್ರದುರ್ಗ, (ಅಕ್ಟೋಬರ್ 13): ಜಿಲ್ಲೆಯ ಹೊಸಯಳನಾಡು ಗ್ರಾಮದ ಆಶಾ (30) ಎಂಬ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. 30 ವರ್ಷದ ಆಶಾ ನೇಣು ಬಿಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಹಿಂದೆ ಹಲವು ಅನುಮಾನುಗಳು ವ್ಯಕ್ತವಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಆರೋಪ ಮಾಡಿವೆ. ಆಶಾ ನೇಣು ಬಿಗಿದ್ದ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಆಕೆಯ ಪತಿ ಗಾಬರಿಯಲ್ಲಿ ಹಿರಿಯೂರು ಆಸ್ಪತ್ರೆಗೆ ಕರೆ ತಂದಿದ್ದಾನೆ. ಯಾವಾಗ ಆಕೆ ಪ್ರಾಣ ಬಿಟ್ಟಿದ್ದಾಳೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ಪತಿ ಅಲ್ಲಿಂದ ಪರಾರಿ ಆಗಿದ್ದಾನೆ ಎಂದು ವರದಿಯಾಗಿದೆ.
ಚಿತ್ರದುರ್ಗ ಜಿಲ್ಲೆ ಹೊಸಯಳನಾಡು ಗ್ರಾಮದ ಆಶಾ, ಶಾಲೆಗೆ ಹೋಗುವಾಗ ಬಸ್ ಚಾಲಕ ಇಮ್ರಾನ್ ಪರಿಚಯ ಆಗಿತ್ತು. ಅದೇ ಪರಿಚಯ ಪ್ರೀತಿಗೆ ತಿರುಗಿದ್ದು, ಮನೆಯವರ ವಿರೋಧದ ನಡುವೆ ಇಬ್ಬರು ಮದುವೆ ಆಗಿದ್ರು. ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಆಶಾ, ಇಮ್ರಾನ್ ದಂಪತಿಗೆ ಎರಡೂವರೆ ವರ್ಷದ ಮಗು ಇದೆ. ಹೀಗೆ ಸುಖವಾಗಿದ್ದ ಸಂಚಾರ ಛಿದ್ರವಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ಆಶಾ ಸಾವಿನ ಮನೆ ಸೇರಿದ್ದು, ವರದಕ್ಷಿಣೆಗಾಗಿ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆಶಾ ಪೋಷಕರು ಆರೋಪಿಸಿದ್ದಾರೆ. ಒಂದೂವರೆ ತಿಂಗಳ ಹಿಂದಷ್ಟೇ 1 ಲಕ್ಷ ಹಣ ಕೊಟ್ಟಿದ್ದೆವು. ಇಷ್ಟಾದ್ರೂ ಸುಮ್ಮನಾಗಿಲ್ಲ. ಈಗ ನೇಣುಬಿಗಿದು, ಆತ್ಮಹತ್ಯೆ ಕತೆ ಕಟ್ಟಿ ಎಸ್ಕೇಪ್ ಆಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಹಿಂದೂ ಸಂಘಟನೆಗಳು ಇದೊಂದು ಲವ್ ಜಿಹಾದ್ ಅಂತಾ ಆರೋಪಿಸಿದ್ದು, ತನಿಖೆ ನಡೆಸಿ ಎಂದು ಹಿರಿಯೂರು ನಗರ ಠಾಣೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಪೋಷಕರು ಹಾಗೂ ಹಿಂದೂಪರ ಸಂಘಟನೆಗಳ ಆರೋಪ ಮೇರೆಗೆ ಮುದ್ದಾದ ಮಗುವಿನ ತಾಯಿ ಆಗಿದ್ದ ಆಶಾ, ಸಾವನ್ನಪ್ಪಿದ್ದು ಹೇಗೆ ಎನ್ನುವ ಬಗ್ಗೆ ಹಿರಿಯೂರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆಶಾ ಅ.12ರಂದು ಅನುಮಾನಾಸ್ಪವಾಗಿ ಮೃತಪಟ್ಟಿದ್ದು ಈ ಬಗ್ಗೆ ಆಕೆಯ ತಂದೆ ನಾಗರಾಜ್, ಇಮ್ರಾನ್ ಹಾಗೂ ಕುಟುಂಬ ಸದಸ್ಯರ ವಿರುದ್ಧ ದೂರು ನೀಡಿದ್ದಾರೆ. ಹಿರಿಯೂರು ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ, ವರದಕ್ಷಿಣೆ ಕಿರುಕುಳ, ಅನುಮಾನಾಸ್ಪದ ಸಾವು ಎಂದು ಕೇಸ್ ದಾಖಲಿಸಿದ್ದು,ಈ ಈಗಾಗಲೇ ಪತಿ ಇಮ್ರಾನ್ನನ್ನು ಹಿರಿಯೂರು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದವರಿಗೆ ಬಂಧನಕ್ಕೆ ಬಲೆ ಬೀಸಿದ್ದಾರೆ.ಇನ್ನು ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಆರೋಪ ಮಾಡಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತೇವೆ. ಸೂಕ್ತ ಸಾಕ್ಷ್ಯಾಧಾರ ಕಲೆಹಾಕಿ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
Published On - 9:07 pm, Tue, 13 October 26