ವಿ.ವಿ.ಸಾಗರ ಡ್ಯಾಂನಲ್ಲಿ ದುಸ್ಸಾಹಸ, ಟಿಕ್ ಟಾಕ್ ವಿಡಿಯೋ ವೈರಲ್

ವಿ.ವಿ.ಸಾಗರ ಡ್ಯಾಂನಲ್ಲಿ ದುಸ್ಸಾಹಸ, ಟಿಕ್ ಟಾಕ್ ವಿಡಿಯೋ ವೈರಲ್

ಚಿತ್ರದುರ್ಗ: ಟಿಕ್ ಟಾಕ್ ಗೋಜಿಗೆ ಬಿದ್ದು ಅನೇಕ ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆದ್ರೆ ಇದೆಲ್ಲ ತಿಳಿದಿದ್ದರು ಸಹ ಟಿಕ್ ಟಾಕ್ ಪ್ರಿಯರು ಮಾತ್ರ ಎಚ್ಚೆತ್ತುಕೊಂಡಿಲ್ಲ. ಇಲ್ಲೊಬ್ಬ ಟಿಕ್ ಟಾಕ್ ಗೋಜಿಗೆ ಬಿದ್ದ ಯುವಕ ವಿ.ವಿ.ಸಾಗರ ಡ್ಯಾಂನಲ್ಲಿ ದುಸ್ಸಾಹಸಕ್ಕೆ ಪ್ರಯತ್ನ ಮಾಡಿದ್ದಾನೆ.

ವಾಣಿ ವಿಲಾಸಪುರ ಗ್ರಾಮದ ಬಳಿ ಇರುವ ಮಾರಿಕಣಿವೆ ಜಲಾಶಯದ ಕಟ್ಟೆ ಮೇಲಿಂದ ತುಂಬಿದ ಜಲಾಶಯಕ್ಕೆ ಹಾರಿದ್ದಾನೆ. ಅದೃಷ್ಟವಶಾತ್ ಈಜಿ ದಡ ಸೇರಿದ್ದಾನೆ. ಯುವಕನ ದುಸ್ಸಾಹಸದ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿರುವ ಯುವಕನ ಗುರುತು ಪತ್ತೆ ಆಗಿಲ್ಲ.

Click on your DTH Provider to Add TV9 Kannada