ಮಂಡ್ಯ: ಪೌರ ಕಾರ್ಮಿಕರೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ. ನಾರಾಯಣ (35) ಎಂಬಾತ ನೇಣಿಗೆ ಶರಣಾಗಿದ್ದು, ಮದ್ದೂರು ಪುರಸಭೆಯ ಮುಖ್ಯಾಧಿಕಾರಿ ಮುರುಗೇಶ್ ಹಾಗೂ ಆರೋಗ್ಯ ನಿರೀಕ್ಷಕ ಝಾಸಿಂ ಖಾನ್ ವಿರುದ್ಧ ಡೆತ್ ನೋಟ್‌ನಲ್ಲಿ ಆರೋಪಿಸಿದ್ದಾರೆ.
ಈ ಪೌರ ಕಾರ್ಮಿಕ ನಾರಾಯಣ ಮ್ಯಾನ್ ಹೋಲ್‌ಗೆ ಇಳಿದು ಬರಿಗೈಲಿ ಸ್ವಚ್ಛತೆ ಮಾಡಿದ್ದರು. ಸುರಕ್ಷತೆಯಿಲ್ಲದೆ ಕ್ಲೀನಿಂಗ್ ಮಾಡಿಸಿದ್ದ ಹಿನ್ನೆಲೆ ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ಷೇಪ ವ್ಯಕ್ತವಾಗಿತ್ತು. ತಾನೇ ಸ್ವಯಂ ಆಗಿ ಇಳಿದಿದ್ದಾಗಿ ಹೇಳುವಂತೆ ನಾರಾಯಣಗೆ ಅಧಿಕಾರಿಗಳು ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ನಾರಾಯಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸದ್ಯ ಮೃತರ ಸಂಬಂಧಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸಾಲಾಭಾದೆ ತಾಳಲಾರದೇ ರೈತ ಆತ್ಮಹತ್ಯೆ
ಸಾಲಾಭಾದೆ ಹಿನ್ನೆಲೆ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹೆಚ್.ಕೊತ್ತೂರು ಗ್ರಾಮದಲ್ಲಿ ನಡೆದಿದೆ. ಅಮರನಾರಾಯಣ (50) ವರ್ಷದ ರೈತ 2 ಎಕರೆಯಲ್ಲಿ ಟೊಮೇಟೊ ಬೆಳೆದಿದ್ದರು. ಆದರೆ ಬೆಳೆದ ಬೆಳೆಗೆ ಬಲೆ ಇಲ್ಲದೆ ಕಂ ಕಂಗಾಲಾಗಿದ್ದ ರೈತ ಸುಮಾರು ಮೂರು ಲಕ್ಷದ ವರೆಗೂ ಕೈಸಾಲ ಮಾಡಿಕೊಂಡಿದ್ದರು.
ಇದನ್ನೂ ಓದಿ
ವಿಜಯಪುರದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ; ಸ್ವತಃ ಗೋದಿ ಕಟಾವು ಮಾಡಿ ಯಂತ್ರ ಚಲಾಯಿಸಿದ ಸಚಿವ ಬಿ.ಸಿ ಪಾಟೀಲ್
ಬೆಳೆದು ನಿಂತ ಬೆಳೆಗೆ ಹಕ್ಕಿ ಕಾಟ; ಬೀದರ್ ಜಿಲ್ಲೆಯ ರೈತರಿಗೆ ಹೊಸ ಸಂಕಷ್ಟ