ವಿಜಯಪುರ: ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಬಳಿಕ ಸೋತ ಅಭ್ಯರ್ಥಿ ಮನೆ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಗೆದ್ದ ಅಭ್ಯರ್ಥಿ ಹಾಗೂ ಬೆಂಬಲಿಗರ ವಿರುದ್ಧ ಗಲಾಟೆ ಶುರುವಾಗಿ ಮಾರಾಮಾರಿ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಡುಮಕನಾಳ ಗ್ರಾಮದಲ್ಲಿ ಸೋತ ಅಭ್ಯರ್ಥಿ ಶಿವಪ್ಪ ಕನಾಳ ಮನೆ ಮುಂದೆ ಗೆದ್ದ ಅಭ್ಯರ್ಥಿಗಳಾದ ಚಂದ್ರಕಾಂತ ನಂದಗೊಂಡ, ಅಪ್ಪುಗೌಡ, ಲಕ್ಷ್ಮಣ ಘೋರ್ಪಡೆ ಬೆಂಬಲಿಗರು ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದರು. ಈ ವೇಳೆ ನಮ್ಮ ಮನೆಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಸೋತ ಅಭ್ಯರ್ಥಿ ಶಿವಪ್ಪ ಹಾಗೂ ಆತನ ಕುಟುಂಬಸ್ಥರಾದ ರಾಯಪ್ಪ ಶ್ರೀಶೈಲ್, ಪುತಳಾಬಾಯಿ, ಭೀಮಕ್ಕ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗಾಯಾಳುಗಳನ್ನ ಚಡಚಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶಿವಪ್ಪ ಕನಾಳ, ನಂದರಗಿ ಗ್ರಾಮ ಪಂಚಾಯಿತಿಯ 2ನೇ ವಾರ್ಡ್ಗೆ ಸ್ಪರ್ಧಿಸಿದ್ದರು. ಶಿವಪ್ಪನ ವಿರುದ್ಧ ಗೆದ್ದ ಚಂದ್ರಕಾಂತ ನಂದಗೊಂಡ ಹಾಗೂ ಆತನ ಬೆಂಬಲಿಗರು ಶಿವಪ್ಪನ ಮನೆಮುಂದೆ ಪಟಾಕಿ ಹಚ್ಚಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿ ರಸ್ತೆಯಲ್ಲಿ ಮಾರಾಮಾರಿಯಾಗಿದೆ.
ಮಹಿಳೆ ಮೇಲೆ ದೌರ್ಜನ್ಯ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ದ FIR
Published On - 9:33 am, Thu, 31 December 20