ನ್ಯೂ ಇಯರ್ ಸೆಲಬ್ರೇಷನ್​ಗೆ ನಿರ್ಬಂಧ: ಯಾವ ಯಾವ ಜಿಲ್ಲೆಗಳಲ್ಲಿ ಯಾವ ರೀತಿಯ ಸ್ಟ್ರಿಕ್ಟ್ ರೂಲ್ಸ್.. ಇಲ್ಲಿದೆ ಡಿಟೇಲ್ಸ್

ಕೊರೊನಾ ಅಬ್ಬರ ಕಡಿಮೆಯಾಯ್ತು ಅಂತಾ ಅಂದುಕೊಳ್ಳುವಷ್ಟರಲ್ಲಿ.. ವೇಷ ಬದಲಿಸಿ ದೇಶಕ್ಕೆ.. ರಾಜ್ಯಕ್ಕೆ ಕೊರೊನಾ ಎಂಟ್ರಿ ಕೊಟ್ಟಿದೆ. ಹೀಗಾಗಿ ಈ ವರ್ಷ ಹೊಸ ವರ್ಷಾಚರಣೆ ಕಳೆಗುಂದಿದೆ. ಕೇವಲ ಕಳೆಗುಂದಿರೋದು ಮಾತ್ರವೇ ಅಲ್ಲ.. ಹೊಸ ವರ್ಷಾಚರಣೆಗೆ ಹಲವು ಜಿಲ್ಲೆಗಳಲ್ಲಿ ನಿರ್ಬಂಧ ಹೇರಲಾಗಿದೆ. ಅದ್ರ ಡಿಟೇಲ್ಸ್ ಇಲ್ಲಿದೆ.

ನ್ಯೂ ಇಯರ್ ಸೆಲಬ್ರೇಷನ್​ಗೆ ನಿರ್ಬಂಧ: ಯಾವ ಯಾವ ಜಿಲ್ಲೆಗಳಲ್ಲಿ ಯಾವ ರೀತಿಯ ಸ್ಟ್ರಿಕ್ಟ್ ರೂಲ್ಸ್.. ಇಲ್ಲಿದೆ ಡಿಟೇಲ್ಸ್
Ayesha Banu

|

Dec 31, 2020 | 10:02 AM

ಕೊರೊನಾ ಅನ್ನೋ ಮಹಾಮಾರಿ ಮಾಡಿರೋ ಅನಾಹುತಗಳು ಒಂದೆರಡಲ್ಲ.. ಮಾರ್ಚ್​ನಿಂದ ಮೂರು ತಿಂಗಳು ದೇಶದಲ್ಲಿ ಲಾಕ್​ಡೌನ್ ಮಾಡಲಾಗಿತ್ತು. ಹಲವು ಮನೆಗಳನ್ನ ಸೀಲ್​ಡೌನ್ ಮಾಡಲಾಗಿತ್ತು. ಕೆಲವು ಪ್ರದೇಶಗಳು ಕಂಟೇನ್ಮೆಂಟ್ ಜೋನ್​ಗಳಾಗಿದ್ವು. ಇದ್ರಿಂದ ಆರ್ಥಿಕತೆ ಭಾರಿ ಹೊಡೆತ ತಿಂದಿತ್ತು. ಇಂತಾ ಕೊರೊನಾ ಮಾರಿಯ ಅಬ್ಬರ ಕಡಿಮೆಯಾಯ್ತು ಅನ್ನೋ ಹೊತ್ತಲ್ಲೇ..

ಬ್ರಿಟನ್​ನಲ್ಲಿ ಬಣ್ಣ ಬದಲಿಸಿಕೊಂಡು ಮತ್ತೊಮ್ಮೆ ಎಂಟ್ರಿ ಕೊಟ್ಟಿರೋದ್ರಿಂದ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದಿದೆ. ಜೊತೆಗೆ ಮತ್ತೆ ನೈಟ್​ ಕರ್ಫ್ಯೂ. ಸೀಲ್​ಡೌನ್ ಅನ್ನೋ ಶಬ್ದಗಳು ಕಿವಿಗೆ ಬೀಳ್ತಿವೆ. ಮಹಾಮಾರಿಯ ಅಬ್ಬರ ಹೆಚ್ಚಾಗಿದ್ದ 2020 ಮುಗೀತು.. ಹೀಗಾಗಿ 2021ನ್ನ ಸಡಗರ-ಸಂಭ್ರಮದಿಂದ ಸ್ವಾಗತಿಸೋಣ ಅಂತಾ ಕಾದು ಕುಳಿತಿದ್ದ ಜನರ ಆಸೆಗೆ ಮಾರಿ ತಣ್ಣೀರು ಎರಚಿದೆ.

ಹೊಸ ವರ್ಷದ ಸಂಭ್ರಮಾಚರಣೆಗೆ ತಣ್ಣೀರೆರಚಿದೆ ಮಹಾಮಾರಿ! ಕಾವೇರಿ ನದಿ ತೀರದ ಹಲವು ರೆಸಾರ್ಟ್​ಗಳಲ್ಲಿ ಅನುಮತಿ ಪಡೆದು ಪ್ರತಿವರ್ಷ ಹೊಸ ವರ್ಷಾಚರಣೆ ಜೋರಾಗಿ ನಡೀತಿತ್ತು. ಆದ್ರೆ, ವೇಷ ಬದಲಿಸಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿರೋ ಕೊರೊನಾ ನಿಯಂತ್ರಣದ ಉದ್ದೇಶದಿಂದ ಈ ವರ್ಷ ಸಂಭ್ರಮಾಚರಣೆಗೆ ಮಂಡ್ಯ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ, ಶ್ರೀರಂಗಪಟ್ಟಣದ ಕೆಆರ್​ಎಸ್ ಹಿನ್ನೀರು, ಕಾವೇರಿ ನದಿಯ ಬಲಮುರಿ ಎಡ ಮುರಿಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇಂದು ಮತ್ತು ನಾಳೆ ಎರಡು ದಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ರಾಮನಗರ ಜಿಲ್ಲಾಡಳಿತ ನ್ಯೂ ಇಯರ್ ಸೆಲೆಬ್ರೇಷನ್‌ನಿಂದ ಕೊರೊನಾ ಹೆಚ್ಚಾಗದಂತೆ ತಡೆಯಲು ಕಟ್ಟುನಿಟ್ಟಿನ ‌ನಿಯಮಗಳನ್ನ ಜಾರಿಗೆ ತಂದಿದೆ. ನಿನ್ನೆಯಿಂದ ಜನವರಿ 2 ರವರೆಗೂ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು, ಜಿಲ್ಲೆಯ ಕಣ್ವ ಜಲಾಶಯ, ಮಂಚನಬೆಲೆ ಜಲಾಶಯ, ಸಾವನದುರ್ಗ, ಸಂಗಮ, ಮೇಕೆದಾಟು, ಚುಂಚಿ ಫಾಲ್ಸ್​ನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಜೊತೆಗೆ ಸಾಮೂಹಿಕ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದೆ.

ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳಲ್ಲೂ ಸಂಭ್ರಮಾಚರಣೆಗೆ ತುಮಕೂರು ಜಿಲ್ಲಾಡಳಿತ ತಡೆಯೊಡ್ಡಿದೆ. ತುಮಕೂರಿನ ಪ್ರಸಿದ್ಧ ಪ್ರವಾಸಿ ತಾಣ ದೇವರಾಯನ ದುರ್ಗ ಹಾಗೂ ನಾಮದಚಿಲುಮೆ ಪ್ರವೇಶಕ್ಕೆ ಇಂದು ಬೆಳಗ್ಗೆ 8  ಗಂಟೆಯಿಂದ ಜನವರಿ 2ರ ಬೆಳಗ್ಗೆ 8 ಗಂಟೆವರೆಗೆ ನಿಷೇಧ ಹೆರಲಾಗಿದೆ.

ನಂದಿ ಬೆಟ್ಟದಲ್ಲಿ ಪಾರ್ಟಿ ಪ್ಲ್ಯಾನ್ ಮಾಡಿದ್ರೆ ಕ್ಯಾನ್ಸಲ್ ಮಾಡಿ! ಬೆಂಗಳೂರಿಗರು ನ್ಯೂ ಇಯರ್ ಸೆಲಬ್ರೇಟ್ ಮಾಡಲು ಎಂಜಿ ರೋಡ್​, ಬ್ರಿಗೇಡ್ ರೋಡ್ ಬಿಟ್ರೆ, ನಂದಿ ಬೆಟ್ಟವನ್ನ ಆಯ್ದುಕೊಳ್ತಿದ್ರು. ಆದ್ರೆ, ಈ ಬಾರಿ ನಂದಿ ಹಿಲ್ಸ್​ನಲ್ಲಿ ನೀವು ಪಾರ್ಟಿ ಮಾಡೋ ಪ್ಲ್ಯಾನ್ ಹಾಕಿಕೊಂಡಿದ್ರೆ, ಈಗಲೇ ಕ್ಯಾನ್ಸಲ್ ಮಾಡಿ. ಯಾಕಂದ್ರೆ, ನಂದಿಗಿರಿಧಾಮದಲ್ಲಿ ನಿನ್ನೆ ಬೆಳಗ್ಗೆ 6ಗಂಟೆಯಿಂದ ಜನವರಿ 2ರ ಬೆಳಗ್ಗೆ 6 ಗಂಟೆವರೆಗೆ ಅಂದ್ರೆ ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದು ಸಮರ್ಪಕವಾಗಿ ಜಾರಿಗೊಳಿಸಲು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಲಿದ್ದು, ಈಗಾಗಲೇ ಹೋಟೆಲ್, ರೆಸ್ಟೋರೆಂಟ್, ಡಾಬಾ, ರೆಸಾರ್ಟ್​ಗಳ ಮಾಲೀಕರ ಸಭೆ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕರಾವಳಿಯ ಕಡಲ ತೀರಗಳಲ್ಲಿ ಸಂಭ್ರಮಾಚರಣೆ ನಿಷೇಧ! ಹೊಸ ವರ್ಷವನ್ನ ಕಡಲ ತೀರದಲ್ಲಿ ಆಚರಿಸೋರಿಗೇನೂ ಕಡಿಮೆ ಇಲ್ಲ. ಆದ್ರೆ, ಈ ಬಾರಿ ರಾಜ್ಯದ ಕರಾವಳಿಯಲ್ಲೂ ನಿಷೇಧಾಜ್ಞೆ ಜಾರಿಯಾಗಿದ್ದು, ಬಹುತೇಕ ಕಡಲ ತೀರಗಳಲ್ಲಿ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರ, ಹೊನ್ನಾವರ, ಗೋಕರ್ಣ ಮತ್ತು ಕಾರವಾರ ಬೀಚ್ ಸೇರಿ ಕರಾವಳಿ ಭಾಗದ 5 ತಾಲೂಕುಗಳಲ್ಲಿ ಸೆಕ್ಷನ್ 144 ಜಾರಿಮಾಡಿದೆ.

ಇಂದು ಸಂಜೆ ನಾಲ್ಕು ಗಂಟೆಯಿಂದ ಜನವರಿ 1 ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತೆ. ಇದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಮೊಗವೀರಪಟ್ಣ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಮತ್ತು ಸುರತ್ಕಲ್ ಬೀಚ್‍ ಸೇರಿ ಎಲ್ಲಾ ಕಡಲ ತೀರದಲ್ಲಿ ಇಂದು ಮಧ್ಯಾಹ್ನ 12 ರಿಂದ ಜನವರಿ 2ರ ಮಧ್ಯಾಹ್ನ 12ಗಂಟೆವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಉಡುಪಿ ಜಿಲ್ಲೆಯಲ್ಲೂ ಸಹ ಬೀಚ್​ಗಳ ಜೊತೆಗೆ ಬಾರ್, ಕ್ಲಬ್, ಪಬ್, ಬೀಚ್ ರೆಸಾರ್ಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ನಡೆಸಬಾರದು ಅಂತಾ ರಾಜ್ಯ ಸರ್ಕಾರ ಆದೇಶಿಸಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರದ ಆದೇಶದನ್ವಯ ಹೊಸ ವರ್ಷಾಚರಣೆಗೆ ಹಲವು ನಿರ್ಬಂಧಗಳನ್ನ ಹೇರಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು.. ವೇಷ ಬದಲಿಸಿ ಎಂಟ್ರಿ ಕೊಟ್ಟಿರೋ ಕೊರೊನಾ ಹರಡದಂತೆ ತಡೆಯೋ ನಿಟ್ಟಿನಲ್ಲಿ ಹೊಸವರ್ಷವನ್ನ ತಮ್ಮ ತಮ್ಮ ಮನೆಯಲ್ಲೇ ಆಚರಿಸಲು ಸೂಚಿಸಿವೆ. ಹೊಸ ವರ್ಷ ಈ ವರ್ಷವಲ್ಲದಿದ್ರೆ ಮುಂದಿನ ವರ್ಷವೂ ಬರಲಿದೆ.

ಆದ್ರೆ, ಜೀವ ಅನ್ನೋದು ಒಂದು ಬಾರಿ ಹೋದ್ರೆ ಮತ್ತೆ ಬರಲ್ಲ. ಜೀವ ಇದ್ರೆ ಜೀವನ ಅನ್ನೋದನ್ನ ಎಲ್ಲರೂ ಗಮನದಲ್ಲಿಟ್ಟುಕೊಂಡು ಜನ ಸರ್ಕಾರದ ಜೊತೆ ಸಹಕರಿಸಿದ್ರೆ, ಮಾರಕ ಮಹಾಮಾರಿ ವಿರುದ್ಧದ ಮನುಕುಲದ ಹೋರಾಟದಲ್ಲಿ ಗೆಲುವು ಸಾಧಿಸಬಹುದು ಅನ್ನೋದನ್ನ ಜನ ಗಮನದಲ್ಲಿಟ್ಟುಕೊಳ್ಳಬೇಕು.

ಹೊಸ ವರ್ಷ 2021ರ ಫಲಾಫಲ: ಯಾವ ರಾಶಿಯವರಿಗೆ ಏನು ಲಾಭ? ವಿವರಿಸಿದ್ದಾರೆ ಎಸ್‌.ಕೆ.ಜೈನ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada