AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂ ಇಯರ್ ಸೆಲಬ್ರೇಷನ್: ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧಾಜ್ಞೆ.. ನಾಳೆ ಬೆಳಗ್ಗೆ 6 ಗಂಟೆವರೆಗೂ ಮಿಸುಕಾಡೋಂಗಿಲ್ಲ

ನ್ಯೂ ಇಯರ್‌ಗೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿ ಜೊತೆಗೆ ಮತ್ತಷ್ಟು ಹೊಸ ರೂಲ್ಸ್​ಗಳು ಕೂಡಾ ಬಂದಿದೆ. ಅದ್ರಲ್ಲೂ ಬೆಂಗಳೂರಿನಲ್ಲಿ ನ್ಯೂ ಇಯರ್​ಗೆ ಜನ ಸೇರದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಸಣ್ಣ ಸಣ್ಣ ಗಲ್ಲಿಯಿಂದ ಹಿಡಿದು ಸ್ಟಾರ್ ಹೋಟೆಲ್, ರೆಸ್ಟೋರೆಂಟ್‌ಗಳವರೆಗೂ ಖಾಕಿ ಹದ್ದಿನ ಕಣ್ಣಿಡಲಿದೆ.

ನ್ಯೂ ಇಯರ್ ಸೆಲಬ್ರೇಷನ್: ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧಾಜ್ಞೆ.. ನಾಳೆ ಬೆಳಗ್ಗೆ 6 ಗಂಟೆವರೆಗೂ ಮಿಸುಕಾಡೋಂಗಿಲ್ಲ
ಆಯೇಷಾ ಬಾನು
|

Updated on:Dec 31, 2020 | 10:02 AM

Share

ಬೆಂಗಳೂರು: 2021, ಈ ವರ್ಷವನ್ನ ಬರೋಮಾಡಿಕೊಳ್ಳೋಕೆ ಜನ ಕಾತುರರಾಗಿದ್ದಾರೆ. 2020ನೇ ವರ್ಷದಲ್ಲಿ ಅಂದ್ರೆ ಈ ವರ್ಷದಲ್ಲಿ ಕಾಡಿದ್ದ ಕೊರೊನಾದ ನೋವನ್ನ ಮರೆಯೋಕೆ ಸಜ್ಜಾಗಿದ್ದಾರೆ. ಆದ್ರೆ, ಬಿಟ್ಟರೂ ಬಿಡದು ಈ ಹೆಮ್ಮಾರಿ ಅನ್ನುವಂತೆ ಹೊಸ ರೂಪ ತಾಳಿ ಅಟ್ಟಹಾಸ ಮೆರೀತಿದೆ.

ಬೆಂಗಳೂರಿಗೂ ಬ್ರಿಟನ್ ಭೂತ ವಕ್ಕರಿಸಿಯೇ ಬಿಟ್ಟಿದೆ. ಹಾಗಾಗಿ ಸರ್ಕಾರ ನ್ಯೂ ಇಯರ್​ಗೆ ಹೊಸ ಗೈಡ್​ಲೈನ್ಸ್ ಬಿಡುಗಡೆ ಮಾಡಿದೆ. ಆ ಗೈಡ್​ಲೈನ್ಸ್ ಪ್ರಕಾರ ಹೋಟೆಲ್​, ಪಬ್-ಬಾರ್-ರೆಸ್ಟೋರೆಂಟ್​ಗೆ ಎಷ್ಟೊತ್ತಿಗೆ ಓಪನ್​ ಮಾಡ್ಬೇಕು, ಎಷ್ಟು ಜನ ಇರ್ಬೇಕು, ಹೇಗೆ ನಡೆಸಬೇಕು ಅಂತಾ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ನ್ಯೂ ಇಯರ್.. ನ್ಯೂ ರೂಲ್ಸ್..! ಇಂದು(ಡಿ.31) ಮಧ್ಯಾಹ್ನ 12ರಿಂದ ಜನವರಿ 1ರ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ಇರಲಿದ್ದು, ಈ ವೇಳೆ ಬೆಂಗಳೂರಿನಲ್ಲಿ 5ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಹಾಗೇನೇ ನ್ಯೂ ಇಯರ್​ಗೆ ಬ್ಯಾಂಡ್, ಮ್ಯೂಸಿಕ್ ಕಾರ್ಯಕ್ರಮಗಳನ್ನ ಆಯೋಜಿಸುವಂತಿಲ್ಲ. ಹೊಸ ವರ್ಷಾಚರಣೆ ವೇಳೆ ಡಿಜೆ ವ್ಯವಸ್ಥೆಗೂ ಸರ್ಕಾರ ಅವಕಾಶ ನೀಡಿಲ್ಲ.

ಆದ್ರೆ ರೆಸ್ಟೋರೆಂಟ್​ಗಳಲ್ಲಿ ಅಡ್ವಾನ್ಸ್ ಬುಕಿಂಗ್​ನವರಿಗೆ ಅವಕಾಶ ನೀಡಿದ್ದು, ಅಡ್ವಾನ್ಸ್ ಬುಕಿಂಗ್ ಮಾಡಿದ್ರೆ ಶೇಕಡಾ 50 ರಷ್ಟು ಮಾತ್ರ ಗ್ರಾಹಕರಿಗೆ ಪರ್ಮಿಷನ್ ಕೊಡಬೇಕು.. ಈ ನಿಯಮ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್​ಸ್ಟ್ರೀಟ್​ರಸ್ತೆಯಲ್ಲಿನ ರೆಸ್ಟೊರೆಂಟ್​ಗೆ ಅನ್ವಯಿಸಲಿದೆ. ರೆಸ್ಟೊರೆಂಟ್​ಗೆ ಬಂದ ಗ್ರಾಹಕರು ಒಳಗೇ ಇರಬೇಕಿದ್ದು, ರಸ್ತೆ ಬಂದ್ರೆ ಖಾಕಿ ನಿಮ್ಮನ್ನ ಲಾಕ್​ ಮಾಡುತ್ತೆ.. ಇನ್ನು ರಾತ್ರಿ 11 ಗಂಟೆಗೆ ಬಾರ್-ವೈನ್​ಶಾಪ್ ಕಂಪ್ಲೀಟ್ ಕ್ಲೋಸ್ ಆಗಲಿದೆ.

ಇದಿಷ್ಟೇ ಅಲ್ಲ ಇನ್ನು ಕೆಲ ಖಡಕ್‌ ರೂಲ್ಸ್‌ಗಳನ್ನ ಪೊಲೀಸ್ ಇಲಾಖೆ ರಿಲೀಸ್ ಮಾಡಿದೆ. ಬಾರ್, ರೆಸ್ಟೋರೆಂಟ್‌, ಪಬ್‌ಗಳ ಪ್ರವೇಶ ದ್ವಾರ, ನಿರ್ಗಮನ ದ್ವಾರ, ಒಳಗಡೆ, ಪಾರ್ಕಿಂಗ್ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾವನ್ನ ಅಳವಡಿಸಿರಬೇಕು. ಸಿಸಿ ಕ್ಯಾಮರಾಗಳು 24 ಗಂಟೆಯೂ ಆನ್‌ನಲ್ಲಿರಬೇಕು. ಕನಿಷ್ಠ 1 ತಿಂಗಳ ಡೇಟಾ ಕಡ್ಡಾಯವಾಗಿ ಇಡಬೇಕು. ಪಬ್, ಪಾರ್ಕಿಂಗ್‌ನಲ್ಲಿ ಲೈಟಿಂಗ್ ವ್ಯವಸ್ಥೆ ಇರಬೇಕು. ಪಬ್‌ನ ಪ್ರಮುಖ ಸ್ಥಳಗಳಲ್ಲಿ ಅಲಾರಂ ಅಳವಡಿಸಬೇಕು. ಪ್ರಮುಖ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು.

ಒಟ್ನಲ್ಲಿ ಪೊಲೀಸರು ಜನರಿಗಾಗಿಯೇ ಇಷ್ಟೆಲ್ಲ ರೂಲ್ಸ್ ಮಾಡಿದ್ದಾರೆ. ಆದ್ರೆ ಇದನ್ನ ಫಾಲೋ ಮಾಡೋದು ಎಲ್ಲರ ಕರ್ತವ್ಯ. ನೀವೇನಾದ್ರೂ ರೂಲ್ಸ್ ಬ್ರೇಕ್ ಮಾಡಿದ್ರೆ, ಪೊಲೀಸರು ನಿಮ್ಮ ಗ್ರಹಚಾರ ಬಿಡಿಸೋದು ಗ್ಯಾರಂಟಿ.

ನ್ಯೂ ಇಯರ್ ಸೆಲಬ್ರೇಷನ್: ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧಾಜ್ಞೆ.. ನಾಳೆ ಬೆಳಗ್ಗೆ 6 ಗಂಟೆವರೆಗೂ ಮಿಸುಕಾಡೋಂಗಿಲ್ಲ

Published On - 7:49 am, Thu, 31 December 20