ವೃದ್ಧಾಶ್ರಮಗಳಿಗೆ ಒದಗಿಸುವ ಅನುದಾನ 25 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಳ: ಸಿಎಂ ಬೊಮ್ಮಾಯಿ ಘೋಷಣೆ

TV9 Digital Desk

| Edited By: guruganesh bhat

Updated on:Oct 01, 2021 | 5:09 PM

ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಭಾಗವಹಿಸಿದ ಅವರು ಈ ಘೋಷಣೆ ಮಾಡಿದರು.

ವೃದ್ಧಾಶ್ರಮಗಳಿಗೆ ಒದಗಿಸುವ ಅನುದಾನ 25 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಳ: ಸಿಎಂ ಬೊಮ್ಮಾಯಿ ಘೋಷಣೆ
ಬಸವರಾಜ ಬೊಮ್ಮಾಯಿ

Follow us on

ಬೆಂಗಳೂರು: ವೃದ್ಧಾಶ್ರಮಗಳಿಗೆ ಸರ್ಕಾರದಿಂದ ಒದಗಿಸುವ ಅನುದಾನವನ್ನು25 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಳ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಭಾಗವಹಿಸಿದ ಅವರು ಈ ಘೋಷಣೆ ಮಾಡಿದರು. 14567 ಹಿರಿಯ ನಾಗರಿಕರ ಸಹಾಯವಾಣಿಯಾಗಿದೆ. ಸರ್ಕಾರದ ಸೌಲಭ್ಯ, ಪಿಂಚಣೆ, ಪೋಷಕರ ಪಾಲನೆ ಪೋಷಣೆ ಅವರ ಯೋಗಕ್ಷೇಮದ ಬಗ್ಗೆ ಈ ಸಂಖ್ಯೆಯ ಮೂಲಕ ವಿಚಾರಿಸಬಹುದು. 35 ವೃದ್ಧಾಶ್ರಮಗಳನ್ನು ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದಿಂದ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ವಯಸ್ಸಿನಿಂದ ಅನುಭವದಿಂದ ನಡವಳಿಕೆಯಿಂದ ನಿರ್ಧಾರವಾಗುತ್ತದೆ. ಮಾನಸಿಕವಾಗಿ ನಾವೂ ಗಟ್ಟಿಯಿದ್ದರೆ ಹಿರಿತನ ನಿರ್ಧಾರವಾಗುತ್ತದೆ. ಸಮಾಜಕ್ಕೆ ಇನ್ನೂ ಕೊಡುಗೆ ಕೊಡಬಹುದು ಅನ್ನುವ ಮನಸಿದ್ದರೆ ನಮ್ಮ ಹಿರಿತನವನ್ನು ಯಶಸ್ವಿಯಾಗಿ ಕಳೆಯಬಹುದು. ಕುಟುಂಬ, ಸರ್ಕಾರ, ವ್ಯವಸ್ಥೆ, ಸಮಾಜ ಹಿರಿಯರ ಜೊತೆಗಿರಬೇಕು. ಹಿರಿಯರಾಗಿದ್ದ ಸಿ.ಎಂ.ಉದಾಸಿಯವರು ಇತ್ತೀಚೆಗೆ ನಿಧನರಾದರು. ಅವರ ವಯಸ್ಸು ಕೇಳಿದ್ರೆ, ಏ ತಮ್ಮ ಹಾಗೆಲ್ಲ ಕೇಳಬಾರದು ಅಂತಿದ್ದರು. ನಾನು ಮಾಜಿ ಯುವಕ, ನೀನು ಭಾವಿ ಮುದುಕ ಎಂದು ಹೇಳುತ್ತಿದ್ದರು. ಅದು ಒಳ್ಳೆಯ ಮನಸ್ಥಿತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆನಪುಗಳನ್ನು ಮೆಲುಕುಹಾಕಿದರು.

ಹಿರಿಯ ವಯಸ್ಸಿನಲ್ಲಿ ಹಾಸ್ಯ ಬಹಳ ಮುಖ್ಯ. ಅತ್ಯಂತ ಸ್ಥಿತಪ್ರಜ್ಞೆಯಿಂದಿದ್ದರೆ ಜೀವನವೇ ಯಶಸ್ಸಿನ ಗುಟ್ಟು. ಸಂತೃಪ್ತಿಯ ಭಾವ, ಆತ್ಮ ಚೈತನ್ಯ ಎಲ್ಲರಿಗೂ ಬಹಳ ಮುಖ್ಯ. ಕರ್ನಾಟಕದಲ್ಲಿ 45 ಲಕ್ಷ ಜನ ಹಿರಿಯ ನಾಗರಿಕರಿದ್ದಾರೆ. ಅವರೆಲ್ಲ ಆರೋಗ್ಯವಾಗಿರಬೇಕು ಎನ್ನುವುದು ನನ್ನ ಆಶಯ. ಪ್ರತಿಯೊಬ್ಬರಲ್ಲೂ ಚಿಕ್ಕ ಮಕ್ಕಳ ಭಾವವಿದೆ. ಹಿರಿಯರಿಗೆ ನಾವು ಗೌರವ ಕೊಡಬೇಕು, ನೆರವಾಗಬೇಕು. ಸಮಾಜದಲ್ಲಿ ಎಲ್ಲವನ್ನೂ ಪಡೆದುಕೊಂಡು ಮುದುಕರಾಗುತ್ತೇವೆ. ಅನುಭವದ ಭಂಡಾರವನ್ನು ಒಳ್ಳೆಯದಕ್ಕೆ ಧಾರೆ ಎರೆಯಬೇಕು. ರಾಜ್ಯ ಸರ್ಕಾರ ಸಂವೇದನಾಶೀಲತೆಯಿಂದ ಸ್ಪಂದಿಸುತ್ತದೆ. ಹಿರಿಯರಿಗಾಗಿ ಸರ್ಕಾರ ಕಾರ್ಯಕ್ರಮ ಆಯೋಜಿಸುತ್ತದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: 

Dasara 2021: ಮೈಸೂರು ದಸರಾ ಎಷ್ಟೊಂದು ಸುಂದರಾ..ಇಲ್ಲಿದೆ 7 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾಪಟ್ಟಿ

ಅಕ್ಟೋಬರ್ 8ರಿಂದ 18ರವರೆಗೆ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada