Dasara 2021: ಮೈಸೂರು ದಸರಾ ಎಷ್ಟೊಂದು ಸುಂದರಾ..ಇಲ್ಲಿದೆ 7 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾಪಟ್ಟಿ

Mysuru Dasara 2021: ಅಕ್ಟೋಬರ್ 7 ಗುರುವಾರ ಸಂಜೆ ಮುಖ್ಯಮಂತ್ರಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭವೂ ಅಂದೇ ಜರುಗಲಿದೆ.

Dasara 2021: ಮೈಸೂರು ದಸರಾ ಎಷ್ಟೊಂದು ಸುಂದರಾ..ಇಲ್ಲಿದೆ 7 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾಪಟ್ಟಿ
ದಸರಾ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2021 ಕ್ಕೆ 7 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಸಿದ್ಧಗೊಂಡಿದೆ. ಅರಮನೆ ಮುಂಭಾಗದಲ್ಲಿ 7 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅಲ್ಲದೇ ಈಬಾರಿ ಹೊಸದಾಗಿ ನಂಜನಗೂಡಿನ ದೇವಾಲಯದ ಆವರಣದಲ್ಲಿಯೂ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದೇ ರೀತಿ ಕಲಾಮಂದಿರದಲ್ಲಿ ಒಂದು ದಿನ ನಡೆಯಲಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 7 ಗುರುವಾರ ಸಂಜೆ ಮುಖ್ಯಮಂತ್ರಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭವೂ ಅಂದೇ ಜರುಗಲಿದೆ.

ಅರಮನೆ ಮುಂಭಾಗದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪಟ್ಟಿ
ಅಕ್ಟೋಬರ್ 7ರಂದು ರಾತ್ರಿ 7:30ಕ್ಕೆ ಬೆಂಗಳೂರು ಪ್ರಭಾತ್ ಕಲಾವಿದರಿಂದ ಕರ್ನಾಟಕ ವೈಭವ ನೃತ್ಯ ರೂಪಕ.

ಅಕ್ಟೋಬರ್ 8ರಂದು ಜನಪದ ಕಾವ್ಯ ಗಾಯನ, ವಯೊಲಿನ್ ಕನ್ನಡ ಡಿಂಡಿಮ ಕಾರ್ಯಕ್ರಮ: ಶಿವಮೊಗ್ಗ ಹಾಗೂ ಮಳವಳ್ಳಿ ಕಲಾವಿದರಿಗೆ ಅವಕಾಶ.

ಅಕ್ಟೋಬರ್ 9ರಂದು ನಾದಬ್ರಹ್ಮ ಹಂಸಲೇಖರಿಂದ ದೇಶಿ ಸಂಸ್ಕೃತಿ ಹಬ್ಬ.
ಮೈಸೂರು ಕಲಾವಿದರಿಂದ ಸಂಗೀತ ದರ್ಬಾರ್.

ಅಕ್ಟೋಬರ್ 10ರಂದು ಮಿಶ್ರವಾದ್ಯ ಗಾಯನ, ಗಜಲ್ ಹಾಗೂ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮ.
ಬೆಂಗಳೂರು, ಮೈಸೂರು ಹಾಗೂ ತೀರ್ಥಹಳ್ಳಿ ಕಲಾವಿದರಿಂದ ಕಾರ್ಯಕ್ರಮಗಳು.

ಅಕ್ಟೋಬರ್ 11ರಂದು ಪ್ರತಿಷ್ಠಿತ ಪೊಲೀಸ್ ಬ್ಯಾಂಡ್ ವಾದ್ಯ.
ಬಾಗಲಕೋಟೆ ಹಾಗೂ ರಾಯಚೂರು ಕಲಾವಿದರಿಂದ ನೃತ್ಯರೂಪಕ ಹಾಗೂ ದಾಸವಾಣಿ.

ಅಕ್ಟೋಬರ್ 12ರಂದು ಕಾರ್ಯಕ್ರಮ ನಡೆಸಿಕೊಡಲಿರುವ ಅದಿತಿ ಪ್ರಹ್ಲಾದ್.
ಪಂಡಿತ್ ಪ್ರವೀಣ್ ಗೋಡ್ಖಿಂಡಿ ಮತ್ತು ಷಡಜ್ ಗೋಡ್ಖಿಂಡಿಯಿಂದ ಕೊಳಲುವಾದನ ಜುಗಲ್ ಬಂದಿ.
ಮುದ್ದುಮೋಹನ್ ತಂಡದಿಂದ ಹಿಂದೂಸ್ತಾನಿ ಸಂಗೀತ.

ಅಕ್ಟೋಬರ್ 13ರಂದು ಬಿ.ಜಯಶ್ರೀ ತಂಡದಿಂದ ರಂಗಗೀತೆಗಳು.
ಶ್ರೀಧರ್ ಜೈನ್ ತಂಡದಿಂದ ನೃತ್ಯರೂಪಕ.
ಪಂಡಿತ್ ಜಯತೀರ್ಥ ಮೇವುಂಡಿಯಿಂದ ಹಿಂದೂಸ್ತಾನಿ ಗಾಯನ.

ಇದನ್ನೂ ಓದಿ: 

SM Krishna: ಮೈಸೂರು ದಸರಾ ಉದ್ಘಾಟನೆಗೆ ಆಮಂತ್ರಿಸಿದ ಹಿನ್ನೆಲೆ; ಪತ್ರದ ಮುಖೇನ ಧನ್ಯವಾದ ತಿಳಿಸಿದ ಎಸ್.ಎಂ ಕೃಷ್ಣ

ಕಳೆಗಟ್ಟಿದ ಅರಮನೆ ನಗರಿ: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಜ್ಜು; ಅಂಬಾರಿ ಕಟ್ಟಿ ತಾಲೀಮು, ಮಾವುತರಿಗೆ ಉಪಹಾರ

Read Full Article

Click on your DTH Provider to Add TV9 Kannada