ದೆಹಲಿ: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಗೋದಾವರಿ, ಕೃಷ್ಣಾ, ಪೆನ್ನಾರ್ ನದಿ (River) ಜೋಡಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸಿಎಂ, ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ನಮ್ಮ ಪಾಲಿನ ನೀರು ಹಂಚಿಕೆಯಾಗುವವರೆಗೆ ವಿರೋಧವಿದೆ. ಎಲ್ಲಿಯವರೆಗೆ ನಮ್ಮ ಪಾಲಿನ ನೀರಿನ ಬಗ್ಗೆ ಹಂಚಿಕೆ ಅಂತಿಮವಾಗುದಿಲ್ಲವೋ, ಅಲ್ಲಿಯವರೆಗೆ ನಮ್ಮ ವಿರೋಧ ಇರುತ್ತದೆ. ಈ ಬಗ್ಗೆ ನಿರ್ಮಲಾ ಸೀತಾರಾಮನ್ ಜತೆಯೂ ಚರ್ಚಿಸಿದ್ದೇನೆ. ಅದಕ್ಕೆ ಅವರು ಎರಡು ರಾಜ್ಯಗಳು ಒಪ್ಪಿದರೆ ಮಾತ್ರ ಇದು ಸಾಧ್ಯ ಎಂದಿದ್ದಾರೆ ಅಂತ ತಿಳಿಸಿದರು.
ಮುಂದುವರಿದು ಮಾತನಾಡಿದ ಬೊಮ್ಮಾಯಿ, ಅಂತಾರಾಜ್ಯ ಜಲ ವಿವಾದಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಕೃಷ್ಣಾ ನ್ಯಾಯಾಧಿಕರಣದ ಆದೇಶ ಅಧಿಸೂಚನೆಗೆ ಮನವಿ ಮಾಡಲಾಗಿದೆ. ಸುಪ್ರೀಂಕೋರ್ಟ್ನಲ್ಲಿ ಅಧಿಸೂಚನೆ ಹೊರಡಿಸುವ ಬಗ್ಗೆ ವಿಚಾರಣೆಗೆ ನ್ಯಾಯಾಧೀಶರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಓಪನ್ ಕೋರ್ಟ್ನಲ್ಲಿ ಮೆನ್ಷನ್ಗೆ ನಿರ್ಧಾರ ಮಾಡಲಾಗುವುದು. ಮೇಕೆದಾಟು ವಿಚಾರವಾಗಿ ನಮ್ಮ ನಿಲುವು ಸ್ಪಷ್ಟ. ತಮಿಳುನಾಡಿನ ಗುಂಡಾರು ವೈಗಾರ್ ಯೋಜನೆಗೆ ವಿರೋಧವಿದೆ. ಹೈಡ್ರೋ ಪರರ್ ಯೋಜನೆಗೂ ವಿರೋಧ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಮಹದಾಯಿ ಬಗ್ಗೆ ಚರ್ಚೆಯಾಗಿದೆ. ಕೋರ್ಟ್ನಲ್ಲಿ ಬೇಗ ವಿಚಾರಣೆ ನಡೆಯಬೇಕಿದೆ. ಡಿಪಿಆರ್ ನೀಡಿದ್ದೇವೆ, ಕೆಲವು ಸ್ಪಷ್ಟನೆ ಕೇಳಿದ್ದರು. ನೀಡಿದ್ದೇವೆ ಎಂದು ತಿಳಿಸಿದ ಸಿಎಂ ಬೊಮ್ಮಾಯಿ, ಕೆನಾಲ್ ರೆಡಿಯಾಗಿದೆ, ತಿರುವಿಗೆ ಅವಕಾಶ ಸಿಗಲಿದೆ ಎಂದು ಅಭಿಪ್ರಾಯಟ್ಟರು.
ಅಮಿತ್ ಶಾ ಅವರನ್ನು ಅಲ್ಪ ಸಮಯದಲ್ಲಿ ಭೇಟಿ ಮಾಡಿದ್ದೇನೆ. ಅಗ್ರೆಸ್ಸಿವ್ ಆಗಿ ಕೆಲಸ ಮಾಡುವಂತೆ ಹೇಳಿದ್ದಾರೆ. ಬಜೆಟ್ ಮತ್ತು ಕೆಲಸ ವಿಚಾರದಲ್ಲಿ ಅಗ್ರೆಸ್ಸಿವ್ ಇರಲಿ ಎಂದಿದ್ದಾರೆ. ಸಂಪುಟ ವಿಸ್ತರಣೆ ಸಂಬಂಧ ನಡ್ಡಾ ಅವರನ್ನು ಭೇಟಿ ಮಾಡುವಂತೆ ಹೇಳಿದ್ದಾರೆ. ಇಂದು ನಡ್ಡಾ ಅವರನ್ನು ಭೇಟಿಯಾಗುತ್ತೇನೆ. ನಡ್ಡಾ ಅವರನ್ನು ಭೇಟಿ ಮಾಡಿದ ಮೇಲೆ ಗೊತ್ತಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ
ಸ್ಯಾಂಡಲ್ವುಡ್ನಲ್ಲಿ ಸಖತ್ ಬ್ಯುಸಿ ಆದ ಧರ್ಮಣ್ಣಗೆ ಹುಟ್ಟು ಹಬ್ಬದ ಸಂಭ್ರಮ
ದಂಡುಪಾಳ್ಯ ಸಿನಿಮಾ ಎಫೆಕ್ಟ್! ದಂಡುಪಾಳ್ಯದವರಿಗೆ ಮನೆ ಬಾಡಿಗೆ ನೀಡಲು ನಗರ ಪೊಲೀಸರ ಬಳಿ ಸಲಹೆ ಕೇಳಿದ ಮನೆ ಮಾಲೀಕ