ಬೆಂಗಳೂರು: ರಾತ್ರಿ ಕರ್ಫ್ಯೂ ಇನ್ನೂ 15 ದಿವಸ ಮುಂದುವರಿಸುತ್ತೇವೆ. ಚಿತ್ರಮಂದಿರಗಳಲ್ಲೂ ಶೇಕಡಾ 50 ಜನರಿಗೆ ಮಾತ್ರ ಅವಕಾಶ ಇರಲಿದೆ. ಇನ್ನೂ 15 ದಿವಸ ಶೇಕಡಾ 50 ಜನರಿಗೆ ಮಾತ್ರ ಅವಕಾಶ ಇರಲಿದೆ. ಪಬ್‌ಗಳಿಗೂ ಈಗಿರುವ ನಿಯಮವೇ ಅನ್ವಯವಾಗುತ್ತೆ. ಗಡಿಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸುವಂತೆ ಸೂಚಿನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಿನಿಮಾ ಥಿಯೇಟರ್ಸ್ ಹಾಗೂ ಪಬ್ಗಳಿಗೆ ಈಗಿರುವ ನಿಯಮವೇ ಮುಂದಿನ ಆಗಸ್ಟ್ 14 ರವರೆಗೂ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಕೇರಳದಲ್ಲಿ ಕಳೆದ ವಾರದಿಂದ ಕೊವಿಡ್ ಸ್ಪೋಟವಾಗಿದೆ. ಹೀಗಾಗಿ ಡಿಸಿ ಮತ್ತು ಎಸ್ಪಿ ವಿಶೇಷ ಜಾಗ್ರತೆವಹಿಸಬೇಕು. ಹೆಲ್ತ್ ಯೂನಿಟ್ಸ್ ಹೆಚ್ಚಿಗೆ ಮಾಡಿಕೊಳ್ಳಬೇಕು. ಆರೋಗ್ಯ ಮೂಲಸೌಕರ್ಯ ಹೆಚ್ಚಾಗಬೇಕು. ಕೇಂದ್ರದ ಆರೋಗ್ಯ ಸಚಿವರನ್ನು ಲಸಿಕೆ ಹೆಚ್ಚಿಸುವಂತೆ ಕೇಳಿದ್ದೇನೆ. 60 ಲಕ್ಷ ಡೋಸ್ ಲಸಿಕೆ ಕೊಡ್ತಿದ್ರು. ಅದನ್ನು ಒಂದೂವರೆ ಕೋಟಿಗೆ ಹೆಚ್ಚಿಸುವಂತೆ ಕೇಳಿದ್ದೇನೆ. ಈ ತಿಂಗಳು ಒಂದು ಕೋಟಿ ಮುಂದಿನ ತಿಂಗಳಿನಿಂದ ಒಂದೂವರೆ ಕೋಟಿ ಲಸಿಕೆ ಕೊಡ್ತೀವಿ ಎಂದು ಹೇಳಿದ್ದಾರೆ. ಗಡಿ ಭಾಗದಲ್ಲಿ ಒಂದು ಡೋಸ್ ಕೊವಿಡ್ ಲಸಿಕೆ ಆಗಿದ್ದರೂ ಬಿಡುತ್ತಿದ್ದೆವು. ಇನ್ನುಮುಂದೆ ಎರಡೂ ಡೋಸ್ ಲಸಿಕೆ ಆದರೆ ಮಾತ್ರ ಬಿಡಲಾಗುತ್ತದೆ ಎಂದು ಹೇಳಿದ್ದಾರೆ.
ಕೊರೊನಾ 3ನೇ ಅಲೆ ಆತಂಕ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹೈ ಅಲರ್ಟ್ ಸೂಚನೆ ನೀಡಿದೆ. ಕೇರಳ ಸೇರಿದಂತೆ ಮಹಾರಾಷ್ಟ್ರದಲ್ಲೂ ಕೊವಿಡ್19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕೂಡ ಕೊರೊನಾ ಕೇಸ್ಗಳು ಮೂರಂಕಿಗೆ ಕಡಿಮೆ ಇಳಿಕೆಯಾಗಿಲ್ಲ. ಇನ್ನೂ ನೂರಕ್ಕಿಂತ ಅಧಿಕ ಕೇಸ್ಗಳು ದಿನನಿತ್ಯ ದಾಖಲಾಗುತ್ತಿದೆ. ಈ ಸಂಬಂಧ ರಾಜ್ಯದ 8 ಜಿಲ್ಲಾಡಳಿತಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಭೆ ನಡೆಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಸ್ಪಿ, ಜಿಲ್ಲಾ ಪಂಚಾಯತ್ ಸಿಇಒಗಳು ಹಾಜರಾಗಿದ್ದಾರೆ. ಬಿಬಿಎಂಪಿ ಸೇರಿ ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಉಡುಪಿ ಸೇರಿ 8 ಜಿಲ್ಲಾಡಳಿತಗಳ ಜತೆ ಸಭೆ ನಡೆಸಲಾಗಿದೆ.
ಇದನ್ನೂ ಓದಿ: ಕೊರೊನಾ 3ನೇ ಅಲೆ ಆತಂಕ: ಕೊವಿಡ್ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಳಕ್ಕೆ ಬಸವರಾಜ ಬೊಮ್ಮಾಯಿ ಸೂಚನೆ
Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 1,987 ಕೊರೊನಾ ಕೇಸ್ ಪತ್ತೆ; 37 ಮಂದಿ ಸಾವು
(CM Basavaraj Bommai on Coronavirus Covid19 Third Wave Cinema Theatres Pub Night Curfew in Karnataka)
Published On - 8:30 pm, Sat, 31 July 21