ಕರುನಾಡಿನಲ್ಲಿ ಕಂಟ್ರೋಲ್ ತಪ್ಪಿದ ಕೊರೊನಾ.. ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಮೀಟಿಂಗ್

|

Updated on: Mar 29, 2021 | 8:57 AM

ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ತಪ್ಪಿದೆ. ವೈರಸ್ ಕಟ್ಟಿ ಹಾಕಲು ಈಗಿರುವ ಕಠಿಣ ಕ್ರಮಗಳು ಸಾಲದು ಎಂದು ಒಪ್ಪಿಕೊಂಡಿರುವ ಆರೋಗ್ಯ ಸಚಿವರು, ಟಫ್ ರೂಲ್ಸ್ ಜಾರಿ ಮಾಡುವ ಮುನ್ಸೂಚನೆ ನೀಡಿದ್ದಾರೆ. ಇಂದು ಸಿಎಂ ಸಮ್ಮುಖದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದ್ದು, ಸೀಲ್​ಡೌನ್ -ಸಿನಿಮಾ ಥಿಯೇಟರ್‌ಗಳಿಗೆ ಮಾರ್ಗಸೂಚಿ ಕುರಿತ ಹಲವು ಮಹತ್ವದ ನಿರ್ಧಾರ ಹೊರಬೀಳಲಿದೆ.

ಕರುನಾಡಿನಲ್ಲಿ ಕಂಟ್ರೋಲ್ ತಪ್ಪಿದ ಕೊರೊನಾ.. ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಮೀಟಿಂಗ್
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
Follow us on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಬುಲೆಟ್ ಟ್ರೈನ್ ಸ್ಪೀಡ್ ಪಡೆದುಕೊಂಡಿದೆ. ನಿನ್ನೆ ರಾಜ್ಯದಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪ್ರತಿ ದಿನ 2 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್‌ಗಳು ದಾಖಲಾಗುವ ಮೂಲಕ ಆತಂಕ ಹೆಚ್ಚಾಗ್ತಿದೆ. ಕೊರೊನಾ ಸಕ್ರಿಯ ಪ್ರಕರಣಗಳ ಬಗ್ಗೆ ತಜ್ಞ ವೈದ್ಯರು ಕಳವಳ ವ್ಯಕ್ತಪಡಿಸಿದ್ದು, ಮುಂದಿನ 4 ವಾರ ರಾಜ್ಯಕ್ಕೆ ನಿರ್ಣಾಯಕ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾರ್ಚ್ 20 ರಂದು 9,044 ಇದ್ದ ಸಕ್ರಿಯ ಕೇಸ್‌ಗಳು ಇದೀಗ 21 ಸಾವಿರ ಗಡಿ ದಾಟಿದೆ. ಪ್ರಸ್ತುತ ಕೈಗೊಂಡಿರುವ ಕ್ರಮಗಳನ್ನು ಮತ್ತಷ್ಟು ಕಠಿಣವಾಗಿ ಜಾರಿಗೊಳಿಸಲು ಆರೋಗ್ಯ ಇಲಾಖೆ ಚಿಂತಿಸಿದೆ. ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಳಗೊಂಡಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಇಂದು ಸಿಎಂ ಸಭೆ ಕರೆದಿದ್ದಾರೆ. ಆರೋಗ್ಯ ಇಲಾಖೆ ಸಚಿವರು ಸೇರಿದಂತೆ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಅಶೋಕ್, ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯಕ್ಕೆ ಎದುರಾಗಿರುವ ಕೊರೊನಾ ಕಂಟಕ ಕುರಿತು ಸಿಎಂ ಸಮ್ಮುಖದಲ್ಲಿ ದೀರ್ಘ ಸಭೆ ನಡೆಯಲಿದ್ದು, ಇಂದಿನ ಸಭೆಯಲ್ಲಿ ಮಹತ್ವದ ನಿರ್ಧಾರಗಳು ಹೊರಬೀಳಲಿವೆ.

ಬೆಂಗಳೂರಿನಲ್ಲಿ ಸೀಲ್‌ಡೌನ್ ಜಾರಿಯಾಗುತ್ತಾ?
ರಾಜ್ಯಕ್ಕೆ ಕೊರೊನಾ ಎರಡನೇ ಅಲೆ ಕಾಲಿಟ್ಟಾಗಿದೆ. ರೂಪಾಂತರಿ ವೈರಸ್ ಹೈ ಸ್ಪ್ರೀಡ್‌ನಲ್ಲಿ ಸ್ಪ್ರೆಡ್ ಆಗ್ತಿದೆ. ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕೊರೊನಾ ಕಂಟ್ರೋಲ್ ಮಾಡೋದಕ್ಕೆ ಸಾಧ್ಯವಾಗ್ತಿಲ್ಲ. ಹೀಗಾಗಿ ಇಂದು ಸಿಎಂ ಆರೋಗ್ಯ ಇಲಾಖೆ ಜೊತೆ ಸಭೆ ನಡೆಸಿ ಹಲವು ಕಠಿಣ ಕ್ರಮಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ. ನೆರೆಯ ಮಹಾರಾಷ್ಟ್ರದಲ್ಲಿ ಪ್ರತಿನಿತ್ಯ 38 ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದು, ಹಲವು ನಗರಗಳನ್ನು ಸೀಲ್​ಡೌನ್ ಮಾಡಲಾಗಿದೆ. ಅದೇ ಮಾದರಿಯಲ್ಲಿ ರಾಜಧಾನಿಯ ಕೆಲ ವಾರ್ಡ್‌ಗಳನ್ನು ಸೀಲ್‌ಡೌನ್ ಮಾಡುವ ಬಹುತೇಕ ಸಾಧ್ಯತೆ ಇದೆ. ಕ್ಲಸ್ಟರ್ ಮಾದರಿಯ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಸಿನಿಮಾ ಥಿಯೇಟರ್‌ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಜನ ಗುಂಪು ಸೇರುವುದನ್ನು ತಪ್ಪಿಸಲು ಈಗಾಗಲೇ ಹಬ್ಬಗಳಿಗೆ ನಿಷೇಧ ಹೇರಿರುವ ಸರ್ಕಾರ, ಸಿನಿಮಾ ಥಿಯೇಟರ್‌ಗಳಲ್ಲಿ ಶೇಕಡಾ 50ರಷ್ಟು ಸೀಟ್ ಅಕ್ಯುಪೆನ್ಸಿ ಹೇರುವ ಸಾಧ್ಯತೆ ಇದೆ.

ಕೊರೊನಾಗೆ ಕಡಿವಾಣ ಹಾಕಲು, ಕೊವಿಡ್ ಕಟ್ಟುಪಾಡುಗಳು ಮತ್ತಷ್ಟು ಬಿಗಿಯಾಗಲಿದ್ದು, ಇಂದಿನ ಸಭೆಯಲ್ಲಿ ಶಾಕಿಂಗ್​ ನಿರ್ಧಾರಗಳು ಹೊರಬೀಳಲಿವೆ. ಇಂದು ನಡೆಯೋ ಸಭೆ ಮಹತ್ವದ್ದಾಗಿದ್ದು.‌ ತಾಂತ್ರಿಕ ಸಲಹಾ ಸಮಿತಿ ನೀಡಿರೋ ಸೂಚನೆಗಳನ್ನ ಸರ್ಕಾರ‌‌ ಯಾವ ರೀತಿ ಪರಿಗಣಿಸುತ್ತೆ, ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತೆ ಕಾದು ನೋಡಬೇಕಿದೆ.

ಇದನ್ನೂ ಓದಿ: ಬೆಂಗಳೂರಿನ ಪಬ್​ನಲ್ಲಿ 16 ಸಿಬ್ಬಂದಿಗೆ ಕೊರೊನಾ ಪಾಸಿಟಿವ್; ದೇಶದ ವಿವಿಧೆಡೆ ಸೋಂಕು ಗಣನೀಯ ಹೆಚ್ಚಳ

Published On - 8:55 am, Mon, 29 March 21