ಇ ಮೇಲ್ ಮೂಲಕ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದ ಸಿಡಿ ಲೇಡಿ.. ವಿವರ ಇಲ್ಲಿದೆ
ಎಸ್ಐಟಿಯಿಂದ ಸಿಡಿ ಯುವತಿಯ ಪೋಷಕರ ವಿಚಾರಣೆ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಯುವತಿ ಇ ಮೇಲ್ ಮೂಲಕ ಪತ್ರ ಕಳಿಸಿದ್ದಾರೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಲೇಡಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ. ಎಸ್ಐಟಿಯಿಂದ ಸಿಡಿ ಯುವತಿಯ ಪೋಷಕರ ವಿಚಾರಣೆ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಯುವತಿ ಇ ಮೇಲ್ ಮೂಲಕ ಪತ್ರ ಕಳಿಸಿದ್ದಾರೆ.
ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್ಐಟಿ ತನಿಖೆಯಾಗಬೇಕು. ನನ್ನ ತಂದೆ ತಾಯಿಯಿಂದ ಬಲವಂತವಾಗಿ ಹೇಳಿಕೆ ಕೊಡಿಸಿಕೊಳ್ಳಲಾಗಿದೆ. ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ನನ್ನ ಪೋಷಕರಿಗೆ ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಕೇಸ್ನಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು ಅಂತಾ ಪತ್ರದಲ್ಲಿ ಸಿಡಿ ಲೇಡಿ ಮನವಿ ಮಾಡಿಕೊಂಡಿದ್ದಾರೆ. ಇ ಮೇಲ್ ಮೂಲಕ ನಿನ್ನೆಯೇ ಪತ್ರವನ್ನ ರವಾನೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ನಮ್ಮ ಕುಟುಂಬಕ್ಕೆ ಬೆದರಿಕೆ ಹಾಕಿಸಿದ್ದಾರೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಯುವತಿ ಬರೆದಿರುವ ಪತ್ರದಲ್ಲಿ, ರಮೇಶ್ ಜಾರಕಿಹೊಳಿ ಜತೆ ಸೇರಿಕೊಂಡು SIT ಅಧಿಕಾರಿಗಳು ನನಗೂ, ನಮ್ಮ ಕುಟುಂಬಕ್ಕೂ ಯಾವುದೇ ರಕ್ಷಣೆ ನೀಡಿಲ್ಲ. SIT ಮುಖಾಂತರ ನಮ್ಮ ಕುಟುಂಬಕ್ಕೆ ಬೆದರಿಕೆ ಹಾಕಿಸಿದ್ದಾರೆ. ರಮೇಶ್ ತಮ್ಮ ಪ್ರಭಾವ ಬಳಸಿ ಸಾಕ್ಷ್ಯನಾಶ ಮಾಡುತ್ತಿದ್ದಾರೆ. ಅವರು ನನಗೆ ಬಹಿರಂಗವಾಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ ಬೇಕಾದರೂ ನಮ್ಮನ್ನು ಕೊಲ್ಲಬಹುದು. SIT ರಮೇಶ್ ಜಾರಕಿಹೊಳಿ ಹೇಳಿದಂತೆ ಕಾರ್ಯನಿರ್ವಹಿಸ್ತಿದೆ. ಕರ್ನಾಟಕ ಸರ್ಕಾರವೂ ಸಹ ರಮೇಶ್‌ರನ್ನು ರಕ್ಷಣೆ ಮಾಡ್ತಿದೆ. ಎಸ್ಐಟಿ ಹಾಗೂ ಸರ್ಕಾರದ ಮೇಲೆ ನನಗೆ ನಂಬಿಕೆಯಿಲ್ಲ ಎಂದು ಸಿಡಿ ಲೇಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಡಿವೈಎಸ್ಪಿ ಕಟ್ಟೀಮನಿ ನಮ್ಮ ಕುಟುಂಬದ ಮೇಲೆ ಒತ್ತಡ ಹಾಕುತ್ತಿದ್ದಾರೆ ನಮ್ಮ ಪೋಷಕರಿಂದ ಒತ್ತಡ ಹಾಕಿ ನನ್ನನ್ನ ಕಿಡ್ನ್ಯಾಪ್ ಮಾಡಿಸಿರುವುದಾಗಿ ಹೇಳಿಕೆ ನೀಡಿಸಿದ್ದಾರೆ. ಡಿವೈಎಸ್ಪಿ ಕಟ್ಟೀಮನಿ ನಮ್ಮ ಕುಟುಂಬದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಕಟ್ಟೀಮನಿ ರಮೇಶ್ ಜಾರಕಿಹೊಳಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಲಯವು ನನ್ನ ಮನವಿಯನ್ನ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರಕ್ಕೆ ನಿರ್ದೇಶನ ನೀಡಬೇಕು.ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಬೇಕು. ನನಗೆ ಜೀವಭಯ ಹಿನ್ನೆಲೆ ರಕ್ಷಣೆ ನೀಡುವಂತೆ ಸಿಡಿ ಲೇಡಿ ಮನವಿ ಮಾಡಿಕೊಂಡಿದ್ದಾಳೆ.
Published On - 7:46 am, Mon, 29 March 21