ಬಳ್ಳಾರಿ: ಕರ್ನಾಟಕ ಗೃಹ ಮಂಡಳಿ ಮನವಿಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಗಣಿನಾಡು ಬಳ್ಳಾರಿ ಜಿಲ್ಲೆಯನ್ನು 2 ಜಿಲ್ಲೆಗಳಾಗಿ ವಿಭಜಿಸಿ ಸಂಪುಟ ಸಭೆಯಲ್ಲಿ ಆದೇಶ ಹೊರಡಿಸಲಾಗಿದೆ. ನೂತನ ವಿಜಯನಗರ ಜಿಲ್ಲೆಗೆ 6 ತಾಲೂಕುಗಳನ್ನು ಸೇರಿಸಲಾಗಿದೆ ಎಂದು ಸಂಪುಟ ಸಭೆ ಬಳಿಕ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ರು.
ನೂತನ ವಿಜಯನಗರ ಜಿಲ್ಲೆಗೆ ಹೊಸಪೇಟೆ, ಕೊಟ್ಟೂರು, ಹರಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಸೇರಿದಂತೆ ಒಟ್ಟು 6 ತಾಲೂಕುಗಳನ್ನು ಸೇರಿಸಲಾಗಿದೆ. ಹೊಸಪೇಟೆಯನ್ನು ನೂತನ ಜಿಲ್ಲಾ ಕೇಂದ್ರವಾಗಿ ಘೋಷಿಸಲಾಗಿದೆ.
98 ವಸತಿ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಅನುಮತಿ ಸಿಕ್ಕಿದೆ. ವಸತಿ ಯೋಜನೆಗೆ ₹2,275 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಹಾಗೂ ಎಸ್‌ಸಿ, ಎಸ್‌ಟಿ ಸಂಪುಟ ಉಪಸಮಿತಿಗೆ ಅಧ್ಯಕ್ಷರಾಗಿ ಸಚಿವ ಶ್ರೀರಾಮುಲು ನೇಮಕಗೊಂಡಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಗೋವಿಂದ ಕಾರಜೋಳ ಈಗ ಸದಸ್ಯರಾಗಿದ್ದಾರೆ.
ಕರ್ನಾಟಕ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ತಿದ್ದುಪಡಿ:
ಕರ್ನಾಟಕ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ 1:15 ಅನುಪಾತ ನಿಗದಿ ಪಡಿಸಿ ನಿಯಮ ತಿದ್ದುಪಡಿ ಮಾಡಲಾಗಿದೆ. ಮಲ್ಲಸಂದ್ರ, ಮನವರ್ತೆ ಕಾವಲ್ ಗ್ರಾಮ ಪಂಚಾಯಿತಿ, ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಬಿಬಿಎಂಪಿಗೆ ಸೇರ್ಪಡೆ ಮಾಡಲಾಗಿದೆ.
ವೀರಶೈವ ಲಿಂಗಾಯತ ಸಮುದಾಯ ಒಬಿಸಿ ಪಟ್ಟಿಗೆ:
ವೀರಶೈವ ಲಿಂಗಾಯತ ಸಮುದಾಯ ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಕೆಲವು ಅಂಶಗಳ ಅಧ್ಯಯನ ನಡೆಸಬೇಕಿದೆ. ಹೀಗಾಗಿ ವರದಿ ಪಡೆದು ಮತ್ತೆ ಸಂಪುಟದಲ್ಲಿ ಚರ್ಚಿಸಬೇಕು. ಈ ಕಾರಣಕ್ಕಾಗಿ ಮುಂದೂಡಿದ್ದೇವೆ. ನಮ್ಮ ಮೇಲೆ ಕೇಂದ್ರದ ಒತ್ತಡ, ಹೈಕಮಾಂಡ್ ಒತ್ತಡವಿಲ್ಲ ಎಂದು ವಿಧಾನಸೌಧದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ-ವಿಜಯನಗರ ತಾಲೂಕುಗಳ ಬಗ್ಗೆ ಡಿ.ಎಮ್. ನಂಜುಂಡಪ್ಪ ಸಮಿತಿ ವರದಿ ಏನು ಹೇಳುತ್ತದೆ?
ವಿಜಯನಗರ ಜಿಲ್ಲೆ ಸ್ಥಾಪನೆ: ಸಚಿವ ಆನಂದ್ ಸಿಂಗ್ ಕೊಟ್ಟ ಗುಡ್ ನ್ಯೂಸ್ ಏನು?
Published On - 12:42 pm, Fri, 27 November 20