ಬೆಂಗಳೂರು: ನಗರದ ದೊಮ್ಮಲೂರಿನ ಕೊವಿಡ್ ವಾರ್ರೂಂಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೇಟಿ ನೀಡಿದರು. ಈ ವೇಳೆ ಸ್ವತಃ ಕರೆಯೊಂದನ್ನು ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಿದ ವ್ಯಕ್ತಿಯ ಕರೆ ಸ್ವೀಕರಿಸಿದರು. ಕಾಲ್ ಸೆಂಟರ್ ಸಿಬ್ಬಂದಿ ಬದಲು ತಾವೇ ಹೆಲ್ಪ್ ಲೈನ್ ಕರೆ ಸ್ವೀಕರಿಸಿದರು. 1912 ಗೆ ಕರೆ ಮಾಡಿ ಐಸಿಯು ಬೆಡ್ ಬೇಕಿತ್ತು ಅಂದ ಆ ಕಡೆಯ ವ್ಯಕ್ತಿಯ ಬಳಿ, ಬಿಯು ನಂಬರ್ ಇದೆಯಾ? ಇದ್ದರೆ ಹೇಳಪ್ಪ, ಬೆಡ್ ವ್ಯವಸ್ಥೇ ಮಾಡುತ್ತಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಕೇಳಿದರು. ನಂತರ ವ್ಯಕ್ತಿಯ ಮಾಹಿತಿ ಪಡೆದು ಬೆಡ್ ವ್ಯವಸ್ಥೆ ಮಾಡಿದರು.
ಮುಂದಿನ 10ರಿಂದ 12 ದಿನಗಳಲ್ಲಿ ಲಾಕ್ಡೌನ್ ಪ್ಯಾಕೇಜ್ನಲ್ಲಿ ಪರಿಹಾರ ಧನ ಸಿಗದಿದ್ದವರಿಗೆ ಇನ್ನೊಂದು ಪ್ಯಾಕೇಜ್ ಮೂಲಕ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ತಿಳಿಸಿದರು.
ಆರ್ಥಿಕ ಪ್ಯಾಕೇಜ್ ವಿಚಾರದಲ್ಲಿ ಹಣಕಾಸಿನ ಇತಿಮಿತಿಯಲ್ಲಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಎಷ್ಟೇ ಟೀಕಿಸಿದರೂ, ಅವರು ಅಧಿಕಾರದಲ್ಲಿದ್ದಾಗ ಯಾರಿಗೆ ಏನು ಮಾಡಿಕೊಟ್ಟರು ಅಂತಾ ಜಗತ್ತಿಗೇ ಗೊತ್ತಿದೆ ಎಂದು ಸಿಎಂ ಯಡಿಯೂರಪ್ಪ ಟೀಕಿಸಿದರು.
ರಾಜ್ಯದಲ್ಲಿ ಕೊವಿಡ್ ಲಸಿಕೆ ಕೊರತೆ ಇರುವುದು ನಿಜ. ಇನ್ನು ಮುಂದೆ ಹೆಚ್ಚು ಲಸಿಕೆ ವಿತರಿಸಲು ದೆಹಲಿಯವರ ಬಳಿ ವಿನಂತಿ ಮಾಡಿದ್ದೇವೆ. ನಮಗೆ ಲಸಿಕೆ ಪೂರೈಕೆಯಾದಂತೆ ನಾವು ಸಹ ರಾಜ್ಯದಲ್ಲಿ ವಿತರಣೆ ಮಾಡುತ್ತೇವೆ. ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲು ತಿಳಿಸಿದ್ದಾಗಿ ಅವರು ಹೇಳಿದರು.
ಇದನ್ನೂ ಓದಿ: ದೇಶದಲ್ಲಿ ಕಳೆದ 11 ದಿನಗಳಿಂದ ಪತ್ತೆಯಾಗುವ ಹೊಸ ಕೊವಿಡ್ ಸೋಂಕಿತರಿಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ: ಲವ್ ಅಗರ್ವಾಲ್
ಉಸಿರಿನಿಂದ ಕೊವಿಡ್ ಪರೀಕ್ಷೆ; ಕ್ಷಣ ಮಾತ್ರದಲ್ಲಿ ಫಲಿತಾಂಶ ಸಿಗುವ ಈ ಪರೀಕ್ಷೆಗೆ ಸಿಂಗಾಪುರ್ ಅನುಮೋದನೆ
(CM BS Yediyurappa himself arranged a bed for the person who went to covid war room and call for helpline number for Bed)
Published On - 6:29 pm, Mon, 24 May 21