AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್ ಪರಿಹಾರ ಧನ: ಮುಂದಿನ 10ರಿಂದ 12 ದಿನಗಳಲ್ಲಿ ಇನ್ನೊಂದು ಲಾಕ್​ಡೌನ್ ಪ್ಯಾಕೇಜ್ ಘೋಷಿಸಲು ಪ್ರಯತ್ನಿಸುವೆ: ಸಿಎಂ ಯಡಿಯೂರಪ್ಪ

Karnataka Lockdown Relief Fund: ರಾಜ್ಯದಲ್ಲಿ ಕೊವಿಡ್ ಲಸಿಕೆ ಕೊರತೆ ಇರುವುದು ನಿಜ. ಇನ್ನು ಮುಂದೆ ಹೆಚ್ಚು ಲಸಿಕೆ ವಿತರಿಸಲು ದೆಹಲಿಯವರ ಬಳಿ ವಿನಂತಿ ಮಾಡಿದ್ದೇವೆ. ನಮಗೆ ಲಸಿಕೆ ಪೂರೈಕೆಯಾದಂತೆ ನಾವು ಸಹ ರಾಜ್ಯದಲ್ಲಿ ವಿತರಣೆ ಮಾಡುತ್ತೇವೆ. ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಕೇರ್ ಸೆಂಟರ್​ಗೆ ಶಿಫ್ಟ್ ಮಾಡಲು ಹೇಳಿದ್ದೇವೆ ಎಂದು ಅವರು ಹೇಳಿದರು.

ಲಾಕ್​ಡೌನ್ ಪರಿಹಾರ ಧನ: ಮುಂದಿನ 10ರಿಂದ 12 ದಿನಗಳಲ್ಲಿ ಇನ್ನೊಂದು ಲಾಕ್​ಡೌನ್ ಪ್ಯಾಕೇಜ್ ಘೋಷಿಸಲು ಪ್ರಯತ್ನಿಸುವೆ: ಸಿಎಂ ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ
guruganesh bhat
|

Updated on:May 24, 2021 | 7:01 PM

Share

ಬೆಂಗಳೂರು: ಮುಂದಿನ 10ರಿಂದ 12 ದಿನಗಳಲ್ಲಿ ಲಾಕ್​ಡೌನ್ ಪ್ಯಾಕೇಜ್​ನಲ್ಲಿ ಪರಿಹಾರ ಧನ ಸಿಗದಿದ್ದವರಿಗೆ ಇನ್ನೊಂದು ಪ್ಯಾಕೇಜ್ ಮೂಲಕ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ತಿಳಿಸಿದರು. ಆರ್ಥಿಕ ಪ್ಯಾಕೇಜ್ ವಿಚಾರದಲ್ಲಿ ಹಣಕಾಸಿನ ಇತಿಮಿತಿಯಲ್ಲಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಎಷ್ಟೇ ಟೀಕಿಸಿದರೂ, ಅವರು ಅಧಿಕಾರದಲ್ಲಿದ್ದಾಗ ಯಾರಿಗೆ ಏನು ಮಾಡಿಕೊಟ್ಟರು‌ ಅಂತಾ ಜಗತ್ತಿಗೇ ಗೊತ್ತಿದೆ ಎಂದು ಸಿಎಂ ಯಡಿಯೂರಪ್ಪ ಟೀಕಿಸಿದರು.

ಹಳ್ಳಿಗಳಲ್ಲಿ ಕೊರೊನಾ ಹೆಚ್ಚುತ್ತಿರುವುದರಿಂದ ಅಸಮಾಧಾನವಾಗುತ್ತಿದೆ.  14 ದಿನಗಳ ಕಾಲ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಜನರು ಈ ಬಗ್ಗೆ ತಪ್ಪುತಿಳಿದುಕೊಳ್ಳದೇ ಸಹಕಾರ ನೀಡಬೇಕು. ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ. ಬೆಂಗಳೂರಿನಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ಇಳಿಕೆ ಆಗಿದೆ.  ಕೊವಿಡ್ ಪ್ರಕರಣಗಳ ಸಂಖ್ಯೆ 5,700ಕ್ಕೆ ಇಳಿಕೆ ಕಂಡಿದೆ. ಮುಂದಿನ ದಿನದಲ್ಲಿ ಕೊವಿಡ್ ಕೇಸ್ 2,000ಕ್ಕೆ ಇಳಿಯಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕೊವಿಡ್ ಲಸಿಕೆ ಕೊರತೆ ಇರುವುದು ನಿಜ. ಇನ್ನು ಮುಂದೆ ಹೆಚ್ಚು ಲಸಿಕೆ ವಿತರಿಸಲು ದೆಹಲಿಯವರ ಬಳಿ ವಿನಂತಿ ಮಾಡಿದ್ದೇವೆ. ನಮಗೆ ಲಸಿಕೆ ಪೂರೈಕೆಯಾದಂತೆ ನಾವು ಸಹ ರಾಜ್ಯದಲ್ಲಿ ವಿತರಣೆ ಮಾಡುತ್ತೇವೆ. ಗ್ರಾಮೀಣ ಪ್ರದೇಶದಲ್ಲಿ ಕೊವಿಡ್ ಕೇರ್ ಸೆಂಟರ್​ಗೆ ಶಿಫ್ಟ್ ಮಾಡಲು ಹೇಳಿದ್ದೇವೆ ಎಂದು ಅವರು ಹೇಳಿದರು.

ಬೆಂಗಳೂರಿನ ದೊಮ್ಮಲೂರು ಭಾಗದ ಕೊವಿಡ್ ವಾರ್​ರೂಂಗೆ ತೆರಳಿದ ಸಿಎಂ ಯಡಿಯೂರಪ್ಪ ಸ್ವತಃ ಕರೆಯೊಂದನ್ನು ಸ್ವೀಕರಿಸಿದರು. ಅಷ್ಟೇ ಅಲ್ಲದೇ ಸಿಎಂ ಯಡಿಯೂರಪ್ಪ, ಕಾಲ್ ಸೆಂಟರ್ ಸಿಬ್ಬಂದಿ ಬದಲು ತಾವೇ ಹೆಲ್ಪ್ ಲೈನ್ ಕರೆ ಸ್ವೀಕರಿಸಿದರು. 1912 ಗೆ ಕರೆ ಮಾಡಿ ಐಸಿಯು ಬೆಡ್ ಬೇಕಿತ್ತು ಅಂದ ಆ ಕಡೆಯ ವ್ಯಕ್ತಿಯ ಬಳಿ, ಬಿಯು ನಂಬರ್ ಇದೆಯಾ? ಇದ್ದರೆ ಹೇಳಪ್ಪ, ಬೆಡ್ ವ್ಯವಸ್ಥೇ ಮಾಡುತ್ತಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಇದನ್ನೂ ಓದಿ: ಕೊವಿಡ್ ವಾರಿಯರ್ಸ್ ವಿರುದ್ಧ ಹಲ್ಲೆ ಮಾಡಿದರೆ ಕ್ರಮ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ದೇಶದಲ್ಲಿ ಕಳೆದ 11 ದಿನಗಳಿಂದ ಪತ್ತೆಯಾಗುವ ಹೊಸ ಕೊವಿಡ್ ಸೋಂಕಿತರಿಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ: ಲವ್ ಅಗರ್ವಾಲ್ 

(Will try to anounce another Lockdown Relief Fund in 10 to 12 days says Karnataka CM BS Yediyurappa )

Published On - 6:43 pm, Mon, 24 May 21