AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಕತ್ವದ ಪ್ರಶ್ನೆ ಎತ್ತಿದ್ದವರಿಗೆ ಸಿಎಂ ತಿರುಗೇಟು, ಕುರ್ಚಿ ವಿಚಾರಕ್ಕೆ ಬಂದವರಿಗೆ ಕೊಡ್ತಾರಾ ಪಂಚ್?

ಸಿಎಂ ಯಡಿಯೂರಪ್ಪ ಬದಲಾಗ್ತಾರೆ. ಇದೇ ಮಾತು ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತು. ಅಂತೆ ಕಂತೆಗಳ ದೊಡ್ಡ ಮೇಲಾಟವೇ ನಡೆದಿತ್ತು. ಆದ್ರೆ, ಇದೆಲ್ಲವನ್ನೂ ಮೆಟ್ಟಿ ನಿಲ್ಲೋಕೆ ಸಿಎಂ ಬಿಎಸ್​ವೈ ಸಜ್ಜಾಗಿದ್ದಾರೆ. ಇಂದು ಮಂಗಳೂರಿನಲ್ಲಿ ನಡೀತಿರೋ ರಾಜ್ಯ ಕಾರ್ಯಕಾರಿಣಿಯಲ್ಲಿ ಖಡಕ್ ಸಂದೇಶ ರವಾನಿಸೋಕೆ ರೆಡಿಯಾಗಿದ್ದಾರೆ. ನಾಯಕತ್ವ ಬದಲಾವಣೆ.. ಸಿಎಂ ಚೇಂಜ್.. ಯಡಿಯೂರಪ್ಪ ಕುರ್ಚಿಗೆ ಕಂಟಕ.. ಕಳೆದ ಎರಡು ತಿಂಗಳಿಂದ ರಾಜ್ಯ ರಾಜಕಾರಣದಲ್ಲಿ ಇದೇ ಮಾತು. ವಿಪಕ್ಷಗಳಿಂದ ಹಿಡಿದು ಸ್ವಪಕ್ಷಿಯರವರೆಗೂ ಆಡಿದ್ದ ಮಾತು. ಆದ್ರೀಗ, ಇಷ್ಟು ದಿನ ಯಾವುದೇ ಪ್ರತಿಕ್ರಿಯೆ ನೀಡದ […]

ನಾಯಕತ್ವದ ಪ್ರಶ್ನೆ ಎತ್ತಿದ್ದವರಿಗೆ ಸಿಎಂ ತಿರುಗೇಟು, ಕುರ್ಚಿ ವಿಚಾರಕ್ಕೆ ಬಂದವರಿಗೆ ಕೊಡ್ತಾರಾ ಪಂಚ್?
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ
ಆಯೇಷಾ ಬಾನು
|

Updated on: Nov 05, 2020 | 7:12 AM

Share

ಸಿಎಂ ಯಡಿಯೂರಪ್ಪ ಬದಲಾಗ್ತಾರೆ. ಇದೇ ಮಾತು ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತು. ಅಂತೆ ಕಂತೆಗಳ ದೊಡ್ಡ ಮೇಲಾಟವೇ ನಡೆದಿತ್ತು. ಆದ್ರೆ, ಇದೆಲ್ಲವನ್ನೂ ಮೆಟ್ಟಿ ನಿಲ್ಲೋಕೆ ಸಿಎಂ ಬಿಎಸ್​ವೈ ಸಜ್ಜಾಗಿದ್ದಾರೆ. ಇಂದು ಮಂಗಳೂರಿನಲ್ಲಿ ನಡೀತಿರೋ ರಾಜ್ಯ ಕಾರ್ಯಕಾರಿಣಿಯಲ್ಲಿ ಖಡಕ್ ಸಂದೇಶ ರವಾನಿಸೋಕೆ ರೆಡಿಯಾಗಿದ್ದಾರೆ.

ನಾಯಕತ್ವ ಬದಲಾವಣೆ.. ಸಿಎಂ ಚೇಂಜ್.. ಯಡಿಯೂರಪ್ಪ ಕುರ್ಚಿಗೆ ಕಂಟಕ.. ಕಳೆದ ಎರಡು ತಿಂಗಳಿಂದ ರಾಜ್ಯ ರಾಜಕಾರಣದಲ್ಲಿ ಇದೇ ಮಾತು. ವಿಪಕ್ಷಗಳಿಂದ ಹಿಡಿದು ಸ್ವಪಕ್ಷಿಯರವರೆಗೂ ಆಡಿದ್ದ ಮಾತು. ಆದ್ರೀಗ, ಇಷ್ಟು ದಿನ ಯಾವುದೇ ಪ್ರತಿಕ್ರಿಯೆ ನೀಡದ ಸಿಎಂ ಈಗ ನಾಯಕ ನಾನೇ ಅನ್ನೋ ಸಂದೇಶ ರವಾನಿಸೋಕೆ ಹೊರಟಿದ್ದಾರೆ. ಇಂದು ಕರಾವಳಿಯಲ್ಲಿ ನಡೆಯೋ ರಾಜ್ಯ ಕಾರ್ಯಕಾರಿಣಿಯಲ್ಲಿ ಸಿಎಂ ಬಿಎಸ್​ವೈ ಯಾರ ಆಟವೂ ನಡೆಯಲ್ಲ ಅನ್ನೊ ಮೆಸೆಜ್ ಕೊಡೋ ಹಿಂಟ್ ಕೊಟ್ಟಿದ್ದಾರೆ.

ಇಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ! ಯೆಸ್, ಅದ್ಯಾವಾಗ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ರೋ ಅಂದಿನಿಂದ್ಲೇ, ಸಿಎಂ ಕುರ್ಚಿಯ ಕಾಲು ಕೀಳೋ ಆಟ ಶುರುವಾಗಿತ್ತು. ಅದ್ರಲ್ಲೂ ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಇನ್ನು 15 ದಿನ ಬಿಎಸ್​ವೈ ಸಿಎಂ ಆಗಿರ್ತಾರೆ ಅಂತಾ ಬಾಂಬ್ ಸಿಡಿಸಿದ್ರು. ಇಷ್ಟೇ ಅಲ್ಲ ದೆಹಲಿ ಮೂಲಗಳಿಂದ್ಲೇ ತಮಗೆ ಮಾಹಿತಿ ಬಂದಿದೆ. ಬಿಹಾರ್ ಎಲೆಕ್ಷನ್ ಬಳಿಕ ಬಿಎಸ್​ವೈ ಬಾಹರ್ ಅಂತಾ ಭವಿಷ್ಯ ನುಡಿದಿದ್ರು.

ಇಷ್ಟು ದಿನ ಸಿದ್ದರಾಮಯ್ಯ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದ ಸಿಎಂ ಬಿಎಸ್​ವೈ ಇಂದು ಸಿದ್ದರಾಮಯ್ಯ ವಿರುದ್ಧ ಅಕ್ಷರಶಃ ಗುಡುಗಿದ್ದಾರೆ. ಸಿದ್ದರಾಮಯ್ಯ ಬೇಜಬಾಬ್ದಾರಿ ಹೇಳಿಕೆ ಕೊಡ್ತಿದ್ದು, ಬೈ ಎಲೆಕ್ಷನ್ ಫಲಿತಾಂಶದ ನಂತರ ಯಾರ ಬಂಡವಾಳ ಏನು ಅಂತಾ ಗೊತ್ತಾಗುತ್ತೆ ಎಂದಿದ್ದಾರೆ.

ಅಲ್ಲಿಗೆ ಸಿಎಂ ಬಿಎಸ್​ವೈ ಮಂಗಳೂರಿನಲ್ಲಿ ನಡೆಯೋ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸೋ ಮೊದಲೇ, ತಮ್ಮ ಕುರ್ಚಿ ಭವಿಷ್ಯದ ಬಗ್ಗೆ ಮಾತನಾಡಿದವರಿಗೆ ಟಕ್ಕರ್ ಕೊಟ್ಟಿದ್ದಾರೆ. ಅಲ್ದೆ, ಇಂದಿನ ಸಭೆಯಲ್ಲಿ ನಾಯಕ ನಾನೇ ಅನ್ನೋ ಸಂದೇಶ ರವಾನಿಸೋ ಹಿಂಟ್ ಕೊಟ್ಟಿದ್ದಾರೆ.

ಹೌದು, ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತ್ರವಲ್ಲ, ಬಿಜೆಪಿ ಪಕ್ಷದೊಳಗೆ ನಾಯಕತ್ವ ಬದಲಾವಣೆ ವಿಚಾರಕ್ಕೆ ದೊಡ್ಡ ಕೂಗು ಎದ್ದಿತ್ತು. ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಪದೇ ಪದೇ ಮಾತು ಕೇಳಿ ಬರ್ತಿತ್ತು. ಬಿಹಾರ ಎಲೆಕ್ಷನ್ ಆದ್ಮೇಲೆ ಸಿಎಂ ಬದಲಾವಣೆ ಅನ್ನೋ ಮಾತು ಕೇಳಿ ಬರ್ತಿತ್ತು. ಉತ್ತರ ಕರ್ನಾಟಕ ಭಾಗದ ನಾಯಕನೊಬ್ಬ ಸಿಎಂ ಆಗ್ತಾರೆ, ಸಿಎಂ ಸ್ಥಾನಕ್ಕೆ ಆ ನಾಯಕ ಈ ನಾಯಕ ಅನ್ನೋ ಚರ್ಚೆ ಶುರುವಾಗಿದ್ವು.

ಮೇಲಾಗಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ, ಬಿಎಸ್​ವೈ ಇನ್ನೇನು ಹೆಚ್ಚು ದಿನ ಸಿಎಂ ಆಗಿರಲ್ಲ ಅಂತಾ ಬಹಿರಂಗವಾಗೇ ಹೇಳಿದ್ರು. ಆ ಮೂಲಕ ನಾಯಕತ್ವ ಬದಲಾವಣೆಗೆ ಕಿಚ್ಚು ಹಚ್ಚಿದ್ರು. ಹೀಗೆ ನಿತ್ಯ ಪಕ್ಷದೊಳಗೆ ಸಿಎಂ ಚೇಂಜ್ ಅನ್ನೋ ವಿಚಾರವೇ ಹೆಚ್ಚು ಸದ್ದು ಮಾಡ್ತಿತ್ತು. ಇದೀಗ ಎಲ್ಲದಕ್ಕೂ ಉತ್ತರ ಕೊಡೋಕೆ ಸಿಎಂಗೆ ದೊಡ್ಡ ಅವಕಾಶ ಒದಗಿ ಬಂದಿದೆ.

ನಾಯಕತ್ವ ಗೊಂದಲದ ಸದ್ದಡಗಿಸುತ್ತಾರಾ ಸಿಎಂ? ಯೆಸ್, ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೀತಿದೆ. ಇದೇ ಇದೇ ಸಭೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಬಿಜೆಪಿಯಲ್ಲಿ ಎದ್ದಿರುವ ಗೊಂದಲಗಳಿಗೆ ತೆರೆ ಎಳೆಯೋದಕ್ಕೆ ಸಿಎಂ ಸಜ್ಜಾಗಿದ್ದಾರೆ ಅನ್ಸುತ್ತೆ. ಹೀಗಾಗೇ, ಸಿದ್ದರಾಮಯ್ಯ ಹೇಳಿಕೆಯನ್ನೇ ಇಟ್ಕೊಂಡು ಮೆಸೇಜ್ ಪಾಸ್ ಮಾಡಿದ್ದಾರೆ. ಅಷ್ಟೇ ಅಲ್ಲ ಇಂದು ತಮ್ಮ ನಾಯಕತ್ವದ ಬಗ್ಗೆ ಪಕ್ಷದೊಳಗೆ ಪ್ರಶ್ನೆ ಎತ್ತಿದವರಿಗೆ ಯಡಿಯೂರಪ್ಪ ತಿರುಗೇಟು ನೀಡುವ ನಿರೀಕ್ಷೆಯಿದೆ.

ಇನ್ನು, ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಿ.ವೈ ವಿಜಯೇಂದ್ರ, ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಸುಭದ್ರವಾಗಿರುತ್ತೆ ಎಂದಿದ್ದಾರೆ. ಸಿಎಂ ಕುರ್ಚಿ ವಿಚಾರಕ್ಕೆ ಸೊಲ್ಲೆತ್ತಿದ್ದವರಿಗೆ ಪಂಚ್ ಕೊಡೋಕೆ ಸಿಎಂ ರೆಡಿಯಾಗಿದ್ದಾರೆ. ಇದ್ರ ಜೊತೆಗೆ ಇಂದಿನ ಮೀಟಿಂಗ್​ನಲ್ಲಿ ರೋಷನ್ ಬೇಗ್ ಸೇರಿದಂತೆ ಲಿಂಗಾಯತ ಕೈ ನಾಯಕರ ಪಕ್ಷ ಸೇರ್ಪಡೆ ಬಗ್ಗೆಯೂ ಚರ್ಚೆಯಾಗಲಿದೆ.