AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನುಮುಂದೆ ಟ್ರಾಫಿಕ್ ನಿಯಮ ಉಲ್ಲಂಘಿಸಿ ತಪ್ಪಿಕೊಳ್ಳುವಂತೆಯೇ ಇಲ್ಲ! Beware traffic rule violators, cops will visit your house to collect fine!

ಬೆಂಗಳೂರಿನ ಸಂಚಾರಿ ವಿಭಾಗದ ಪೊಲೀಸರು ನಿಯಮಗಳನ್ನು ಬಿಗಿಗೊಳಿಸಿರುವುದು ನಗರದಲ್ಲಿ ವಾಹನಗಳನ್ನು ಬಳಸುವ ಎಲ್ಲರಿಗೂ ಗೊತ್ತಿದೆ. ಎಲ್ಲ ಪ್ರಮುಖ ರಸ್ತೆಗಳಲ್ಲಿ ಅವರನ್ನು ನಾವೀಗ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಓಡಿಸುವವರಿಗೆ, ವಾಹನದ ಡಾಕ್ಯುಮೆಂಟ್​ಗಳನ್ನು ಹೊಂದಿಲ್ಲದವರಿಗೆ ಮತ್ತು ಪದೇಪದೆ ನಿಯಮ ಉಲ್ಲಂಘಿಸಿ ಇದುವರೆಗೆ ಬಚಾವಾದವರಿಗೆ ದಂಡ ವಿಧಿಸುತ್ತಾ ನಿಂತಿರುವುದನ್ನು ಕಾಣಬಹುದು. ಇನ್ನು ಮುಂದೆ ನಿಯಮಗಳನ್ನು ನಿರ್ಲಕ್ಷಿಸಿವವರಿಗೆ ಮತ್ತಷ್ಟು ಫಜೀತಿ ಎದುರಾಗಲಿದೆ. ವಾಹನ ಸವಾರನೊಬ್ಬ 5ಕ್ಕೂ ಹೆಚ್ಚು ಬಾರಿ ನಿಯಮಗಳನ್ನು ಉಲ್ಲಂಘಿಸಿ ದಂಡ ಪಾವತಿಸದೆ ತಪ್ಪಿಸಿಕೊಂಡಿದ್ದರೆ, ಪೊಲೀಸರು […]

ಇನ್ನುಮುಂದೆ ಟ್ರಾಫಿಕ್ ನಿಯಮ ಉಲ್ಲಂಘಿಸಿ ತಪ್ಪಿಕೊಳ್ಳುವಂತೆಯೇ ಇಲ್ಲ! Beware traffic rule violators, cops will visit your house to collect fine!
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 04, 2020 | 10:21 PM

Share

ಬೆಂಗಳೂರಿನ ಸಂಚಾರಿ ವಿಭಾಗದ ಪೊಲೀಸರು ನಿಯಮಗಳನ್ನು ಬಿಗಿಗೊಳಿಸಿರುವುದು ನಗರದಲ್ಲಿ ವಾಹನಗಳನ್ನು ಬಳಸುವ ಎಲ್ಲರಿಗೂ ಗೊತ್ತಿದೆ. ಎಲ್ಲ ಪ್ರಮುಖ ರಸ್ತೆಗಳಲ್ಲಿ ಅವರನ್ನು ನಾವೀಗ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಓಡಿಸುವವರಿಗೆ, ವಾಹನದ ಡಾಕ್ಯುಮೆಂಟ್​ಗಳನ್ನು ಹೊಂದಿಲ್ಲದವರಿಗೆ ಮತ್ತು ಪದೇಪದೆ ನಿಯಮ ಉಲ್ಲಂಘಿಸಿ ಇದುವರೆಗೆ ಬಚಾವಾದವರಿಗೆ ದಂಡ ವಿಧಿಸುತ್ತಾ ನಿಂತಿರುವುದನ್ನು ಕಾಣಬಹುದು.

ಇನ್ನು ಮುಂದೆ ನಿಯಮಗಳನ್ನು ನಿರ್ಲಕ್ಷಿಸಿವವರಿಗೆ ಮತ್ತಷ್ಟು ಫಜೀತಿ ಎದುರಾಗಲಿದೆ. ವಾಹನ ಸವಾರನೊಬ್ಬ 5ಕ್ಕೂ ಹೆಚ್ಚು ಬಾರಿ ನಿಯಮಗಳನ್ನು ಉಲ್ಲಂಘಿಸಿ ದಂಡ ಪಾವತಿಸದೆ ತಪ್ಪಿಸಿಕೊಂಡಿದ್ದರೆ, ಪೊಲೀಸರು ಅವನ ಮನೆಗೆ ಹೋಗಿ ಪೆನಾಲ್ಟಿಯನ್ನು ವಸೂಲಿ ಮಾಡಲು ನಿರ್ಧರಿಸಿದ್ದಾರೆ. ಸದರಿ ಪದ್ಧತಿಯನ್ನು ಕೆ.ಆರ್ ಪುರಂ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಜಾರಿಗೊಳಿಸಲಾಗಿದೆ.

ನಿಯಮ ಉಲ್ಲಂಘಿಸಿದ ವಾಹನ ಸವಾರರ ಮನೆಗಳಿಗೆ ತೆರಳಿ ಇದುವರೆಗೆ ಅವರಿಂದ ರೂ. 3 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಇದೇ ವ್ಯಾಪ್ತಿಯಲ್ಲಿ ಓಡಾಡುವ ಓರ್ವ ಬೈಕ್ ಸವಾರನಿಂದ 32 ಸಾವಿರ ರೂ. ದಂಡ ವಸೂಲಿ ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಅವನ ವಿರುದ್ಧ 61 ಕೇಸ್​ಗಳು ದಾಖಲಾಗಿದ್ದವಂತೆ.

ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್ ರವಿಕಾಂತೇಗೌಡ ಅವರ ನಿರ್ದೇಶನದ ಮೇರೆಗೆ ದಂಡ ವಸೂಲಿ ಮಾಡಲಾಗುತ್ತಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.