ಅಡಕೆ ಕಾರ್ಯಪಡೆ ಬೇಡಿಕೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಸ್ತು

ಬೆಂಗಳೂರು: ಶಾಸಕ ಹಾಗೂ ಅಡಕೆ ಕಾರ್ಯಪಡೆ ಅಧ್ಯಕ್ಷ ಅರಗ ಜ್ಞಾನೇಂದ್ರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಅವರನ್ನು ಭೇಟಿ‌ ಮಾಡಿ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿತು. ಈ ವೇಳೆ, ಸಿಎಂ ಯಡಿಯೂರಪ್ಪ ಅವರಿಗೆ ಟಾಸ್ಕ್ ಫೋರ್ಸ್‌ ಪರ ಬೇಡಿಕೆಗಳನ್ನು ಸಲ್ಲಿಸಿತು. 1) ಟಾಸ್ಕ್​​ ಫೋರ್ಸ್ ಗೆ ಇನ್ನೂ ಕಚೇರಿ ಆಗಿಲ್ಲ. ಒಂದು ಕಚೇರಿ ಬೇಕು 2) ಅಡಕೆ ಸಂಶೋಧನೆ ಕೆಲಸವನ್ನು ಈಗಾಗಲೇ ರಾಮಯ್ಯ ವಿವಿ ಆರಂಭ ಮಾಡಿದೆ. ಸಂಶೋಧನೆ ಮತ್ತು ಇತ್ಯಾದಿ ಕೆಲಸಕ್ಕೆ […]

ಅಡಕೆ ಕಾರ್ಯಪಡೆ ಬೇಡಿಕೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಸ್ತು

Updated on: Oct 14, 2020 | 5:38 PM

ಬೆಂಗಳೂರು: ಶಾಸಕ ಹಾಗೂ ಅಡಕೆ ಕಾರ್ಯಪಡೆ ಅಧ್ಯಕ್ಷ ಅರಗ ಜ್ಞಾನೇಂದ್ರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಅವರನ್ನು ಭೇಟಿ‌ ಮಾಡಿ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿತು. ಈ ವೇಳೆ, ಸಿಎಂ ಯಡಿಯೂರಪ್ಪ ಅವರಿಗೆ ಟಾಸ್ಕ್ ಫೋರ್ಸ್‌ ಪರ ಬೇಡಿಕೆಗಳನ್ನು ಸಲ್ಲಿಸಿತು.

1) ಟಾಸ್ಕ್​​ ಫೋರ್ಸ್ ಗೆ ಇನ್ನೂ ಕಚೇರಿ ಆಗಿಲ್ಲ. ಒಂದು ಕಚೇರಿ ಬೇಕು
2) ಅಡಕೆ ಸಂಶೋಧನೆ ಕೆಲಸವನ್ನು ಈಗಾಗಲೇ ರಾಮಯ್ಯ ವಿವಿ ಆರಂಭ ಮಾಡಿದೆ. ಸಂಶೋಧನೆ ಮತ್ತು ಇತ್ಯಾದಿ ಕೆಲಸಕ್ಕೆ 2 ಕೋಟಿ ರೂ. ಅನುದಾನ ನೀಡುವುದು
3) ಗುಟ್ಕಾ, ತಂಬಾಕು ನಿಷೇಧದ ಚರ್ಚೆ ಶುರುವಾಗಿದೆ. ಅಡಕೆ ಬೆಳೆಯುವ ಜಿಲ್ಲೆಗಳಲ್ಲಿ ಆತಂಕ ಶುರುವಾಗಿದೆ. ಸಿಎಂ ಅವರು ಅಡಕೆ ರೈತರ ಹಿತ ಕಾಯುವ ಭರವಸೆ ನೀಡಬೇಕು
4)ಅಡಕೆ ಬೆಳೆಗಾರರ ಹಿತಕ್ಕೆ ಬಜೆಟ್ ನಲ್ಲಿ ಮಾಡಿದ ಘೋಷಣೆ ಜಾರಿಗೆ ಕ್ರಮದ‌ ಭರವಸೆ ಆಗಬೇಕು

ಬೇಡಿಕೆಗಳಿಗೆ ಸಿಎಂ ಯಡಿಯೂರಪ್ಪ ಅಸ್ತು
ಟಾಸ್ಕ್ ಫೋರ್ಸ್‌ ಬೇಡಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು‌ ನಂಬಬಾರದು. ಸರ್ಕಾರವು ಸದಾ ಅಡಕೆ ಬೆಳೆಗಾರರ ಪರವಾಗಿ ಇರುತ್ತದೆ. ಜೊತೆಗೆ ಕೂಡಲೇ ಟಾಸ್ಕ್ ಫೋರ್ಸ್ ಗೆ ಮೂಲಸೌಕರ್ಯಗಳನ್ನು‌ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.