ಶಿರಾ ಬೈಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಆಸ್ತಿ ವಿವರ ಹೀಗಿದೆ

ತುಮಕೂರು: ಶಿರಾ ಕ್ಷೇತ್ರದ ಉಪಚುನಾವಣೆ ನವೆಂಬರ್ 3ರಂದು ನಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ, ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ತಮ್ಮ ಆಸ್ತಿ ವಿವರ ಸಲ್ಲಿಸಿದ್ದು, ವಿವರ ಕೆಳಗಿನಂತಿದೆ. ಟಿ.ಬಿ.ಜಯಚಂದ್ರ ತಮ್ಮ ಹೆಸರಿನಲ್ಲಿ 14 ಕೋಟಿ ರೂಪಾಯಿ ಆಸ್ತಿ ಹೊಂದಿದ್ದರೆ ಅವರ ಪತ್ನಿ ಜಿ.ಹೆಚ್.ನಿರ್ಮಲಾ ಹೆಸರಿನಲ್ಲಿ 8 ಕೋಟಿ ರೂ. ಆಸ್ತಿಯಿಎ. ಜಯಚಂದ್ರ ವಾರ್ಷಿಕ ಆದಾಯ 68,01,856 ರೂಪಾಯಿ ಇದ್ದರೆ, ಅವರ ಚರಾಸ್ತಿ ಮೌಲ್ಯ 1,33,81,409 ರೂಪಾಯಿ ಇದೆ. ಇನ್ನು, […]

ಶಿರಾ ಬೈಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಆಸ್ತಿ ವಿವರ ಹೀಗಿದೆ
Follow us
ಸಾಧು ಶ್ರೀನಾಥ್​
|

Updated on:Oct 14, 2020 | 4:38 PM

ತುಮಕೂರು: ಶಿರಾ ಕ್ಷೇತ್ರದ ಉಪಚುನಾವಣೆ ನವೆಂಬರ್ 3ರಂದು ನಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ, ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ತಮ್ಮ ಆಸ್ತಿ ವಿವರ ಸಲ್ಲಿಸಿದ್ದು, ವಿವರ ಕೆಳಗಿನಂತಿದೆ.

ಟಿ.ಬಿ.ಜಯಚಂದ್ರ ತಮ್ಮ ಹೆಸರಿನಲ್ಲಿ 14 ಕೋಟಿ ರೂಪಾಯಿ ಆಸ್ತಿ ಹೊಂದಿದ್ದರೆ ಅವರ ಪತ್ನಿ ಜಿ.ಹೆಚ್.ನಿರ್ಮಲಾ ಹೆಸರಿನಲ್ಲಿ 8 ಕೋಟಿ ರೂ. ಆಸ್ತಿಯಿಎ. ಜಯಚಂದ್ರ ವಾರ್ಷಿಕ ಆದಾಯ 68,01,856 ರೂಪಾಯಿ ಇದ್ದರೆ, ಅವರ ಚರಾಸ್ತಿ ಮೌಲ್ಯ 1,33,81,409 ರೂಪಾಯಿ ಇದೆ. ಇನ್ನು, ಪತ್ನಿ ನಿರ್ಮಲಾ ವಾರ್ಷಿಕ ಆದಾಯ 11,69,227 ರೂಪಾಯಿಯಿದ್ದು, ಪತ್ನಿ ನಿರ್ಮಲಾ ಚರಾಸ್ತಿ ಮೌಲ್ಯ 60,09,092 ರೂಪಾಯಿಯಷ್ಟಿದೆ.

ಜಯಚಂದ್ರ ಪತ್ನಿ ಬಳಿ 11.44 ಲಕ್ಷ ರೂ, 610 ಗ್ರಾಂ ಚಿನ್ನ ಇದೆ. ಜೊತೆಗೆ 1.50 ಲಕ್ಷ ಮೌಲ್ಯದ 2,500 ಗ್ರಾಂ ಬೆಳ್ಳಿ ಹೊಂದಿದ್ದಾರೆ. ಅಭ್ಯರ್ಥಿ ಟಿ.ಬಿ.ಜಯಚಂದ್ರ ಬಳಿ 100 ಗ್ರಾಂ ಚಿನ್ನಾಭರಣವಿದೆ.

ಬೆಂಗಳೂರಿನ R.T.ನಗರದದಲ್ಲಿ 8.5 ಕೋಟಿ ರೂ ಮೌಲ್ಯದ ಕಟ್ಟಡ, ಆರ್‌ಎಂವಿ 2ನೇ ಹಂತದ ಹೆಚ್‌ಐಜಿ ಲೇಔಟ್‌ನಲ್ಲಿ ಕಟ್ಟಡ ಸೇರಿ 13.10 ಕೋಟಿ ರೂ ಸ್ಥಿರಾಸ್ತಿಯೂ ಜಯಚಂದ್ರ ಹೊಂದಿದ್ದಾರೆ. ಪತ್ನಿ ನಿರ್ಮಲಾ ಹೆಸರಿನಲ್ಲಿ 7.40 ಕೋಟಿ ರೂ. ಸ್ಥಿರಾಸ್ತಿಯಿದೆ. ಆರ್‌ಎಂವಿ 2ನೇ ಹಂತದ ಹೆಚ್‌ಐಜಿ ಲೇಔಟ್‌ನಲ್ಲಿ 4.60 ಕೋಟಿ ರೂಪಾಯಿ ಮೌಲ್ಯದ ಕಟ್ಟಡ ಸೇರಿ ಒಟ್ಟು ಸ್ಥಿರಾಸ್ತಿ ಮೌಲ್ಯ 13.10 ಕೋಟಿ ರೂಪಾಯಿ. ಇನ್ನು ಪತ್ನಿ ನಿರ್ಮಲಾ ಹೆಸರಲ್ಲಿ ಕಳ್ಳಂಬೆಳ್ಳ ಬಳಿ 3.22 ಎಕರೆ ಜಮೀನು ಇದೆ. ಜತೆಗೆ ಫಾರ್ಮಹೌಸ್ ಸಹ ಇದೆ. ಪೀಣ್ಯ ಇಂಡಸ್ಟ್ರೀಯಲ್‌ ಎಸ್ಟೇಟ್​ನಲ್ಲಿ 6.25 ಕೋಟಿ ರೂಪಾಯಿ ಮೌಲದ್ಯ ವಾಣಿಜ್ಯ ಕಟ್ಟಡ ಸಹ ಹೊಂದಿದ್ದಾರೆ.

ದಂಪತಿಯಿಬ್ಬರೂ ಸಾಲಗಾರರು ಟಿ.ಬಿ.ಜಯಚಂದ್ರ ಮತ್ತು ಪತ್ನಿ ನಿರ್ಮಲಾ ಇಬ್ಬರೂ ಸಾಲಗಾರರು. ಜಯಚಂದ್ರ 1.47 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಪತ್ನಿ ನಿರ್ಮಲಾ 15 ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. ಜಯಚಂದ್ರ ಬಳಿ 39.35 ಲಕ್ಷ ರೂ. ಮೌಲ್ಯದ ಕಾರು ಇದೆ. 5 ಲಕ್ಷ ರೂ. ಮೌಲ್ಯದ ಮತ್ತೊಂದು ಕಾರು ಕೂಡ ಇದೆ. ಟಿ.ಬಿ.ಜಯಚಂದ್ರ ವಿರುದ್ಧ 2 ಕ್ರಿಮಿನಲ್ ಕೇಸ್‌ಗಳು ಇವೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅಭ್ಯರ್ಥಿ ಜಯಚಂದ್ರ ಉಲ್ಲೇಖಿಸಿದ್ದಾರೆ.

Published On - 4:36 pm, Wed, 14 October 20

ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್