ಮರಾಠ ಅಭಿವೃದ್ಧಿ ನಿಗಮ ರಚನೆ: ಇತ್ತ ಕನ್ನಡಿಗರ ಪ್ರತಿಭಟನೆ..ಅತ್ತ ಮರಾಠರಿಂದ ಸಿಎಂ ಯಡಿಯೂರಪ್ಪನವರಿಗೆ ಸನ್ಮಾನ

ಇಂದು ಮರಾಠ ಅಭಿವೃದ್ಧಿ ನಿಗಮ ರಚಿಸಿದ್ದಕ್ಕಾಗಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್​ಗೆ ಕರೆ ನೀಡಿದ್ದವು. ಹಲವೆಡೆ ಹೋರಾಟ ನಡೆಸಿದ್ದವು. ಈ ನಡುವೆ ಸಿಎಂ ಮರಾಠ ಮುಖಂಡರ ಸನ್ಮಾನ ಸ್ವೀಕರಿಸಿದ್ದಾರೆ.

ಮರಾಠ ಅಭಿವೃದ್ಧಿ ನಿಗಮ ರಚನೆ: ಇತ್ತ ಕನ್ನಡಿಗರ ಪ್ರತಿಭಟನೆ..ಅತ್ತ ಮರಾಠರಿಂದ ಸಿಎಂ ಯಡಿಯೂರಪ್ಪನವರಿಗೆ ಸನ್ಮಾನ
ಬಿ ಎಸ್​ ಯಡಿಯೂರಪ್ಪ ರಾಜೀನಾಮೆ: ಬಿಜೆಪಿ ಸಂಸದೀಯ ಮಂಡಳಿ ಮುಂದಿನ ನಡೆ ಏನು? ಯಾವಾಗ?
Edited By:

Updated on: Apr 07, 2022 | 5:37 PM

ಬೆಳಗಾವಿ: ಮರಾಠ ಅಭಿವೃದ್ಧಿ ನಿಗಮ ರಚಿಸಿದ್ದಕ್ಕೆ ಬೆಳಗಾವಿಯ ಸ್ಥಳೀಯ ಮರಾಠ ಮುಖಂಡರು ಮುಖ್ಯಮಂತ್ರಿ ಯಡಿಯೂರಪ್ಪಗೆ ಸನ್ಮಾನ ಮಾಡಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಬೆಳಗಾವಿಗೆ ತೆರಳಿದ್ದ ಯಡಿಯೂರಪ್ಪಗೆ ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಸನ್ಮಾನ ನಡೆದಿದೆ. ಮರಾಠ ಮುಖಂಡರು ಶಾಲು ಹೊದಿಸಿ, ಛತ್ರಪತಿ ಶಿವಾಜಿ ಮೂರ್ತಿ ನೀಡಿ ಸನ್ಮಾನಿಸಿದ್ದಾರೆ.

ಬಂದ್ ನಡೆದ ಬೆನ್ನಲ್ಲೇ ಈ ಸನ್ಮಾನ
ಇಂದು ಮರಾಠ ಅಭಿವೃದ್ಧಿ ನಿಗಮ ರಚಿಸಿದ್ದಕ್ಕಾಗಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್​ಗೆ ಕರೆ ನೀಡಿದ್ದವು. ಹಲವೆಡೆ ಹೋರಾಟ ನಡೆಸಿದ್ದವು. ಈ ನಡುವೆ ಸಿಎಂ ಮರಾಠ ಮುಖಂಡರ ಸನ್ಮಾನ ಸ್ವೀಕರಿಸಿದ್ದು, ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ತೋರಿದೆ.

ಕರ್ನಾಟಕ ಬಂದ್​ ಮಧ್ಯೆ ಮರಾಠಿಗರ ವಿಜಯೋತ್ಸವ: ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ, ಸಿಹಿ ಹಂಚಿಕೆ

Published On - 6:40 pm, Sat, 5 December 20