ಗುಂಡು-ತುಂಡು ಆಯ್ತು, ಈಗ ಜೈಲಲ್ಲಿ ರೌಡಿಶೀಟರ್ ಜತೆ ವಿನಯ್ ಕುಲಕರ್ಣಿ ಕಾಲಹರಣ!

ವಿಕ್ಕಿ ಮಂಗಳೂರಿನ ಬಹುದೊಡ್ಡ ರೌಡಿ ಶೀಟರ್​ಗಳಲ್ಲಿ ಒಬ್ಬ. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ವಿಕ್ಕಿ ಜೈಲು ಸೇರಿದ್ದ. ಈಗ ಆತನ ಜೊತೆಯೇ ವಿನಯ್​ ಕುಲಕರ್ಣಿ ಕಾಲ ಕಳೆಯುತ್ತಿದ್ದಾರೆ.

ಗುಂಡು-ತುಂಡು ಆಯ್ತು, ಈಗ ಜೈಲಲ್ಲಿ ರೌಡಿಶೀಟರ್ ಜತೆ ವಿನಯ್ ಕುಲಕರ್ಣಿ ಕಾಲಹರಣ!
ಮಾಜಿ ಸಚಿವ ವಿನಯ್ ಕುಲಕರ್ಣಿ
Follow us
TV9 Web
| Updated By: ganapathi bhat

Updated on:Apr 07, 2022 | 5:40 PM

ಬೆಳಗಾವಿ: ಧಾರವಾಡ ಜಿ.ಪಂ. ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಒಂದಾದರ ಮೇಲೆ ಒಂದರಂತೆ ವಿವಾದಕ್ಕೆ ತುತ್ತಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಜೈಲಿನಲ್ಲಿ ರಾಜಾತಿಥ್ಯ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಈಗ ರೌಡಿಶೀಟರ್​ ಜೊತೆ ಕಾಲಹರಣ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿನಯ್ ಕುಲಕರ್ಣಿಯನ್ನು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇಡಲಾಗಿದೆ. ಶಾಕಿಂಗ್​ ವಿಚಾರ ಎಂದರೆ ವಿನಯ್ ತಾವಿರುವ ಸೆಲ್​ನಲ್ಲಿ ಮಂಗಳೂರಿನ ರೌಡಿ ಶೀಟರ್​​ ವಿಕ್ಕಿ ಪೂಜಾರಿಯನ್ನು ಕರೆಸಿಕೊಂಡು ಆತನ ಜತೆ ಕಾಲ ಕಳೆಯುತ್ತಿದ್ದಾರೆ. ಆಗಾಗ ವಿನಯ್​ ಸೆಲ್​ಗೆ ವಿಕ್ಕಿ ಪೂಜಾರಿ ಬಂದುಹೋಗುತ್ತಿದ್ದಾನಂತೆ! ವಿನಯ್​ಗೆ ಎಲ್ಲ ರೀತಿಯಲ್ಲೂ ವಿಕ್ಕಿ ಸಹಾಯ ಮಾಡುತ್ತಿದ್ದಾನೆ ಎಂದು ಉನ್ನತ ಮೂಲಗಳು ಟಿವಿ9ಗೆ ತಿಳಿಸಿವೆ.

ಯಾರು ಈ ವಿಕ್ಕಿ?:

ವಿಕ್ಕಿ ಮಂಗಳೂರಿನ ಬಹುದೊಡ್ಡ ರೌಡಿ ಶೀಟರ್​ಗಳಲ್ಲಿ ಒಬ್ಬ. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ವಿಕ್ಕಿ ಜೈಲು ಸೇರಿದ್ದ. ಸಹಚರರ ಮೂಲಕವೇ ಜೈಲಿನಲ್ಲಿ ಕೊಲೆ ಕೂಡ ಮಾಡಿಸಿದ್ದ. ಹಲವು ವರ್ಷಗಳಿಂದ ರೌಡಿಶೀಟರ್ ವಿಕ್ಕಿ ಜೈಲಿನಲ್ಲೇ ಇದ್ದಾನೆ.

ವಿನಯ್​ ಕುಲಕರ್ಣಿಗೆ ಐಷಾರಾಮಿ ಸವಲತ್ತು:

ಮೂಲಗಳ ಪ್ರಕಾರ ವಿನಯ್ ಕುಲಕರ್ಣಿಗೆ ಜೈಲಿನಲ್ಲಿ ಸಕಲ ಸವಲತ್ತುಗಳನ್ನೂ ಒದಗಿಸಲಾಗುತ್ತಿದೆಯಂತೆ. ಆಯಿಲ್ ಮಸಾಜ್ ಮಾಡೋಕೆ ಇಬ್ಬರು ಕೈದಿಗಳನ್ನ ಬಿಟ್ಟಿದ್ದಾರಂತೆ. ಸಾಲದ್ದಕ್ಕೆ ಇವರಿಗೆ ಮೆತ್ತನೆಯ ಹಾಸಿಗೆ, ದಿನಕ್ಕೊಂದು ಬಗೆಯ ಊಟ, ತಿಂಡಿ, ಧಾರವಾಡ ರೊಟ್ಟಿ, ಚಿಕನ್ ಬಿರಿಯಾನಿ, ಫೇವರೇಟ್ ಬ್ರ್ಯಾಂಡ್ನ ಡ್ರಿಂಕ್ಸ್ ಇತ್ಯಾದಿ ಇತ್ಯಾದಿ ಎಲ್ಲವೂ ಸಿಗುತ್ತಿದೆ ಎನ್ನುವ ಮಾತು ಇತ್ತೀಚೆಗೆ ಕೇಳಿ ಬಂದಿತ್ತು.

ಬೆಳಗಾವಿ ಜೈಲಲ್ಲಿ ವಿನಯ್ ಕುಲಕರ್ಣಿ ಬಿಂದಾಸ್ ಬದುಕು

Published On - 5:18 pm, Sat, 5 December 20

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್