ಬೆಂಗಳೂರಿನಲ್ಲಿ ಪ್ರಾರಂಭವಾಯ್ತು ಆರ್ಟ್ ಆ್ಯಂಡ್​ ಫೋಟೋಗ್ರಫಿ ಮ್ಯೂಸಿಯಂ; ಇಂದಿನಿಂದಲೇ ವರ್ಚ್ಯುವಲ್​ ವೀಕ್ಷಣೆ

ಆಧುನಿಕ ಪೂರ್ವ ಕಲಾಕೃತಿಗಳು, ಕೆಲವು ಪ್ರಸಿದ್ಧ ಸಂಸ್ಕೃತಿಗಳನ್ನು ಸಾರುವ ಕಲಾಕೃತಿಗಳು, ಜಾನಪದ ಮತ್ತು ಬುಡಕಟ್ಟು, ಆಧುನಿಕ ಮತ್ತು ಸಮಕಾಲೀನ ಕಲಾಕೃತಿಗಳು, ಛಾಯಾಚಿತ್ರಗಳು, ವಿವಿಧ ಸಂಪ್ರದಾಯದ ಉಡುಪುಗಳು, ಕರಕುಶಲ ವಸ್ತುಗಳು, ವಿನ್ಯಾಸಗಳು ಈ ಮ್ಯೂಸಿಯಂನ ಪ್ರಮುಖ ಆಕರ್ಷಣೆಯಾಗಿದೆ.

ಬೆಂಗಳೂರಿನಲ್ಲಿ ಪ್ರಾರಂಭವಾಯ್ತು ಆರ್ಟ್ ಆ್ಯಂಡ್​ ಫೋಟೋಗ್ರಫಿ ಮ್ಯೂಸಿಯಂ; ಇಂದಿನಿಂದಲೇ ವರ್ಚ್ಯುವಲ್​ ವೀಕ್ಷಣೆ
ಕಸ್ತೂರ ಬಾ ರಸ್ತೆಯಲ್ಲಿರುವ ಆರ್ಟ್ ಆ್ಯಂಡ್ ಫೋಟೋಗ್ರಫಿ ಮ್ಯೂಸಿಯಂ
Follow us
Lakshmi Hegde
|

Updated on:Dec 05, 2020 | 3:36 PM

ಬೆಂಗಳೂರು: ದಕ್ಷಿಣ ಭಾರತದ ಮೊದಲ,  ಬೃಹತ್​ ಖಾಸಗಿ ವಸ್ತು ಸಂಗ್ರಹಾಲಯವಾದ ‘ಮ್ಯೂಸಿಯಂ ಆಫ್​ ಆರ್ಟ್ ಆ್ಯಂಡ್​ ಫೋಟೋಗ್ರಫಿ (MAP) ಇಂದು ಡಿಜಿಟಲ್​ ರೂಪದಲ್ಲಿ ಪ್ರಾರಂಭವಾಗಿದ್ದು, 11ರವರೆಗೆ ಅಂದರೆ ಆರು ದಿನಗಳ ಕಾಲ ಸಾಂಸ್ಕೃತಿಕ ಹಬ್ಬ ಆಚರಣೆ ನಡೆಯಲಿದೆ. ಹಾಗೇ ಇದು ದೇಶದ ಡಿಜಿಟಲ್ ಮ್ಯೂಸಿಯಂಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

20,000 ವಿವಿಧ ಕಲಾಕೃತಿಗಳ ಸಂಗ್ರಹ ಬೆಂಗಳೂರಿನ ಕಸ್ತೂರ್ ಬಾ ರಸ್ತೆಯಲ್ಲಿರುವ ಈ ವಿಶೇಷ ಮ್ಯೂಸಿಯಂ 2021ರಲ್ಲಿ ಭೌತಿಕವಾಗಿ ಉದ್ಘಾಟನೆಗೊಳ್ಳಲಿದೆ. ಸದ್ಯ ಕೊವಿಡ್​-19 ಸಾಂಕ್ರಾಮಿಕ ಇರುವುದರಿಂದ ಡಿಜಿಟಲ್​ ಉದ್ಘಾಟನೆ ಮಾಡಲಾಗಿದ್ದು, ವರ್ಚ್ಯುವಲ್​ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಹೊಸ ಮಾದರಿಯಲ್ಲಿ ಕಲೆ ಮತ್ತು ನಮ್ಮ ಪರಂಪರೆಯನ್ನು ಜನರಿಗೆ ಪರಿಚಯಿಸುವ ಉದ್ದೇಶ, ವ್ಯವಸ್ಥೆಯೊಂದಿಗೆ ನಿರ್ಮಾಣವಾಗಿರುವ ಈ ಮ್ಯೂಸಿಯಂ ಆಫ್​ ಆರ್ಟ್ ಆ್ಯಂಡ್ ಫೋಟೋಗ್ರಫಿಯಲ್ಲಿ, 10ನೇ ಶತಮಾನದಿಂದ ಆಧುನಿಕ ಯುಗದವರೆಗಿನ ನಮ್ಮ ಸಂಸ್ಕೃತಿ, ಪರಂಪರೆಗೆ ಸಂಬಂಧಪಟ್ಟ ಬರೋಬ್ಬರಿ 20,000 ವಿವಿಧ ಕಲಾಕೃತಿಗಳ ಸಂಗ್ರಹವಿದೆ.

ಆಧುನಿಕ ಪೂರ್ವ ಕಲಾಕೃತಿಗಳು, ಕೆಲವು ಪ್ರಸಿದ್ಧ ಸಂಸ್ಕೃತಿಗಳನ್ನು ಸಾರುವ ಕಲಾಕೃತಿಗಳು, ಜಾನಪದ ಮತ್ತು ಬುಡಕಟ್ಟು, ಆಧುನಿಕ ಮತ್ತು ಸಮಕಾಲೀನ ಕಲಾಕೃತಿಗಳು, ಛಾಯಾಚಿತ್ರಗಳು, ವಿವಿಧ ಸಂಪ್ರದಾಯದ ಉಡುಪುಗಳು, ಕರಕುಶಲ ವಸ್ತುಗಳು, ವಿನ್ಯಾಸಗಳು ಈ ಮ್ಯೂಸಿಯಂನ ಪ್ರಮುಖ ಆಕರ್ಷಣೆಯಾಗಿದೆ.

ಎಲ್ಲ ಹಂತದ ಜನರನ್ನೂ ತಲುಪುವ ಉದ್ದೇಶ.. ಹಾಗೇ ವಸ್ತುಪ್ರದರ್ಶನದೊಟ್ಟಿಗೆಗೆ ಅವುಗಳ ಕಲಾ ಪ್ರಾಕಾರಗಳು, ಕಲಾ ಶೈಲಿ,  ಕಾಲ, ಕಲಾ ವರ್ಗೀಕರಣದ ಮಾಹಿತಿಗಳ ಬಗ್ಗೆ ಅರಿವು ಮೂಡಿಸುವ ಘನ ಉದ್ದೇಶವನ್ನು ಇಟ್ಟುಕೊಂಡಿದೆ.

ಎಲ್ಲ ಹಂತದ ಜನರನ್ನೂ ತಲುಪುವುದು ನಮ್ಮ ಮುಖ್ಯ ಉದ್ದೇಶ. ಪ್ರತಿಯೊಂದು ಸಂಗ್ರಹದ ಬಗ್ಗೆಯೂ ಅರಿವು ಮೂಡಿಸಲು ಕಾರ್ಯಕ್ರಮ ನಡೆಸಲಾಗುವುದು ಎಂದು MAP ನಿರ್ದೇಶಕಿ ಕಾಮಿನಿ ಸಾಹ್ನಿ ತಿಳಿಸಿದ್ದಾರೆ.

ಮ್ಯೂಸಿಯಂ ಆಫ್ ಆರ್ಟ್ ಆ್ಯಂಡ್​ ಫೋಟೋಗ್ರಫಿಯ ಸಂಸ್ಥಾಪಕ ಟ್ರಸ್ಟಿ ಆಗಿರುವ ಅಭಿಷೇಕ್ ಪೋದ್ದಾರ್, ನಾವು ಈ ವಸ್ತುಸಂಗ್ರಹಾಲಯವನ್ನು ಡಿಜಿಟಲೀಕರಣಗೊಳಿಸಬೇಕು ಅಂತಾ ಅಂದುಕೊಂಡಿರಲಿಲ್ಲ. ಆದರೆ ಈಗ ಅದರಿಂದ ಅನುಕೂಲವೇ ಆಗುತ್ತಿದೆ. ಈಗ ಜನರಿಗೆ ಪ್ರವೇಶಕ್ಕೆ ಅನುಮತಿಕೊಟ್ಟಿದ್ದರೆ, ದಿನಕ್ಕೆ 200 ಜನರಿಗೆ ಅವಕಾಶ ಇರುತ್ತಿತ್ತು. ಆದರೆ ವರ್ಚ್ಯುವಲ್ ಆಗಿ ಪ್ರಾರಂಭ ಮಾಡಿದ್ದರಿಂದ ಪ್ರತಿದಿನ ಸಾವಿರಾರು ಮಂದಿ ಮ್ಯೂಸಿಯಂ ವೀಕ್ಷಿಸಬಹುದು ಎಂದಿದ್ದಾರೆ.

ಹೇಗಿದೆ ಮ್ಯೂಸಿಯಂ? ಬೆಂಗಳೂರಿನ ಕಸ್ತೂರ್​ ಬಾ ರಸ್ತೆಯಲ್ಲಿ ಐದು ಅಂತಸ್ತಿನ ಕಟ್ಟಡದಲ್ಲಿ ಮ್ಯೂಸಿಯಂ ಇದೆ. ಇದನ್ನು ವಿನ್ಯಾಸಗೊಳಿಸಿದವರು ಬೆಂಗಳೂರು ಮೂಲದ ವಾಸ್ತುಶಿಲ್ಪಿ ಸೌಮಿತ್ರೋ ಘೋಷ್. ಆರ್ಟ್​ ಗ್ಯಾಲರಿಗಳು, ಅಡಿಟೋರಿಯಂ ಮತ್ತು ಕಲಾ ಸಂಶೋಧನಾ ಲೈಬ್ರರಿಗಳು, ಶೈಕ್ಷಣಿಕ ಕೇಂದ್ರ, ವಿಶೇಷ ಸಂಶೋಧನಾ ಕೇಂದ್ರ, ಕೆಫೆಗಳನ್ನೊಳಗೊಂಡಿದೆ.

Published On - 3:28 pm, Sat, 5 December 20

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ