ಅತ್ಯಂತ ಸಂತೋಷದಿಂದ ರೈತರ ಸಾಲ ವಿತರಣೆಗೆ ಚಾಲನೆ ನೀಡಿದ್ದೇನೆ: ಸಿಎಂ ಯಡಿಯೂರಪ್ಪ
ಸಾಲ ಮರುಪಾವತಿ ಅವಧಿಯನ್ನು ಮೂರು ತಿಂಗಳು ವಿಸ್ತರಿಸಿದ್ದೇವೆ. ಕೊವಿಡ್ನಿಂದ ಸೂಕ್ತ ಮಾರುಕಟ್ಟೆ ಇಲ್ಲದ ಹೂವು, ಹಣ್ಣು ಬೆಳೆಗಾರರಿಗೂ ಪರಿಹಾರ ನೀಡಲಾಗಿದೆ. ಅಭಿವೃದ್ದಿ ಆಗುತ್ತಿಲ್ಲ ಅಂತ ಟೀಕೆ ಮಾಡುವವರಿಗೆ ಈ ಅಂಕಿ ಅಂಶಗಳೆ ಉತ್ತರ. ಹತ್ತು ಹಲವು ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಕೊರತೆ ಮಾಡಿಲ್ಲ.
ಬೆಂಗಳೂರು: ಅತ್ಯಂತ ಸಂತೋಷದಿಂದ ರೈತರಿಗೆ ಸಾಲ ವಿತರಣೆಗೆ ಚಾಲನೆ ನೀಡಿದ್ದೇನೆ ಎಂದು ಹೇಳಿಕೆ ನೀಡಿದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಮ್ಮದು ರೈತ ಪರ ಸರ್ಕಾರವಾಗಿದೆ. ರೈತರು, ಆರೋಗ್ಯ, ಶಿಕ್ಷಣ ನಮ್ಮ ಸರ್ಕಾರದ ಮೊದಲ ಆದ್ಯತೆ. ಕೊವಿಡ್ ಸಂದರ್ಭದಲ್ಲಿ ಸಹಕಾರ ಸಂಘಗಳು ಸಾಕಷ್ಟು ಕೆಲಸ ಮಾಡಿವೆ. ವೈದ್ಯಕೀಯ ಸಲಕರಣೆ, ಆಹಾರ ಕಿಟ್, ಧಾನ್ಯ ವಿತರಣೆ ಮಾಡಿವೆ. 58 ಕೋಟಿಗೂ ಹೆಚ್ಚು ಮೊತ್ತವನ್ನು ಸಿಎಂ ಪರಿಹಾರ ನಿಧಿಗೆ ಸಹಕಾರ ಇಲಾಖೆ ನೀಡಿದೆ ಎಂದು ತಿಳಿಸಿದರು.
ಸಾಲ ಮರುಪಾವತಿ ಅವಧಿಯನ್ನು ಮೂರು ತಿಂಗಳು ವಿಸ್ತರಿಸಿದ್ದೇವೆ. ಕೊವಿಡ್ನಿಂದ ಸೂಕ್ತ ಮಾರುಕಟ್ಟೆ ಇಲ್ಲದ ಹೂವು, ಹಣ್ಣು ಬೆಳೆಗಾರರಿಗೂ ಪರಿಹಾರ ನೀಡಲಾಗಿದೆ. ಅಭಿವೃದ್ದಿ ಆಗುತ್ತಿಲ್ಲ ಅಂತ ಟೀಕೆ ಮಾಡುವವರಿಗೆ ಈ ಅಂಕಿ ಅಂಶಗಳೆ ಉತ್ತರ. ಹತ್ತು ಹಲವು ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಕೊರತೆ ಮಾಡಿಲ್ಲ. ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುವುದಕ್ಕೆ ಅವಕಾಶ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ತಾವೇ ಇಷ್ಟಪಟ್ಟು ರೈತ ಗೀತೆ ಹಾಡಿಸಿದ ಸಿಎಂ ವಿಧಾನಸೌಧದ ಬ್ಯಾಂಕ್ಟೆಟ್ ಹಾಲ್ನಲ್ಲಿ ನಡೆದ ರೈತ ಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ತಾವೇ ಇಷ್ಟಪಟ್ಟು ರೈತ ಗೀತೆಯನ್ನು ಹಾಡಿಸಿದರು. ತಮ್ಮ ಭಾಷಣಕ್ಕೂ ಮೊದಲು ರೈತ ಗೀತೆಯನ್ನು ಹೇಳಿ ಎಂದು ಮುಖ್ಯಮಂತ್ರಿ ಹಾಡಿಸಿದರು.
ಲಸಿಕಾ ಮೇಳದಲ್ಲಿ 5ರಿಂದ 7 ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತೆ. ಈಗಾಗಲೇ ಎಲ್ಲ ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಮಾಡಲಾಗಿದೆ. 2ನೇ ಡೋಸ್ ಲಸಿಕೆ ನೀಡುವುದಕ್ಕೆ ಮೊದಲ ಆದ್ಯತೆ. ಲಸಿಕಾ ಅಭಿಯಾನದಿಂದ ಜನರಿಗೆ ಉಪಯೋಗವಾಗಬೇಕು. ರಾಜ್ಯದ ಜನತೆ ಲಸಿಕಾ ಅಭಿಯಾನಕ್ಕೆ ಕೈ ಜೋಡಿಸಬೇಕು. ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಕೊರೊನಾ ಕಡಿಮೆ ಆಗಿದೆ. ಹೀಗಾಗಿ ರಾಜ್ಯದಲ್ಲಿ ನಿಯಮ ಸಡಿಲ ಮಾಡಲಾಗಿದೆ. ಆದರೆ ಜನರು ಕೊವಿಡ್ ನಿಯಮ ಉಲ್ಲಂಘಿಸಬಾರದು ಎಂದು ಮುಖ್ಯಮಂತ್ರಿ ತಿಳಿಸಿದರು.
ಇದನ್ನೂ ಓದಿ
(CM Yediyurappa instructed the singer to sing the farmer song)
Published On - 1:41 pm, Mon, 21 June 21