AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಅನ್ಯರ ಚಿತಾವಣೆ; ಹಠ ಬಿಟ್ಟು ಸೇವೆಗೆ ಹಾಜರಾಗಲು ಸಿಎಂ ಯಡಿಯೂರಪ್ಪ ಮನವಿ

ಸಾರಿಗೆ ಸಿಬ್ಬಂದಿಗಳು ದಯಮಾಡಿ ಹಠ ಬಿಟ್ಟು ಸೇವೆಗೆ ಮರಳಬೇಕು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದರು. ಆದರೆ ಸಾರಿಗೆ ಸಿಬ್ಬಂದಿಗಳಿಗೆ ಎಸ್ಮಾ ಜಾರಿ ಕುರಿತ ಪ್ರಶ್ನೆಗೆ ಅವರು ಉತ್ತರ ನೀಡಲಿಲ್ಲ.

ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಅನ್ಯರ ಚಿತಾವಣೆ; ಹಠ ಬಿಟ್ಟು ಸೇವೆಗೆ ಹಾಜರಾಗಲು ಸಿಎಂ ಯಡಿಯೂರಪ್ಪ ಮನವಿ
ಬಿ.ಎಸ್.ಯಡಿಯೂರಪ್ಪ
guruganesh bhat
| Updated By: Lakshmi Hegde|

Updated on:Apr 06, 2021 | 8:14 PM

Share

ಬೆಳಗಾವಿ: 6ನೇ ವೇತನ ಆಯೋಗ ಜಾರಿ ಮಾಡಲ ಸಾಧ್ಯವೇ ಇಲ್ಲ. ಸಾರಿಗೆ ನೌಕರರ 9 ಬೇಡಿಕೆಯಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ಕೊವಿಡ್‌ನಿಂದ ಆರ್ಥಿಕ ಸಂಕಷ್ಟದಲ್ಲೂ ವೇತನ ನೀಡಿದ್ದೇವೆ. ದಯಮಾಡಿ ಹಠ ಬಿಡಿ, ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಜನರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ತಾಲೂಕಿನ ಮುತ್ನಾಳದಲ್ಲಿ ಮನವಿಪೂರ್ವಕ ಎಚ್ಚರಿಕೆ ನೀಡಿದರು.

ಮುಷ್ಕರ ನಡೆಸಿದರೆ ಹೆಚ್ಚಿಗೆ ರೈಲು ಓಡಿಸುತ್ತೇವೆ. ಖಾಸಗಿ ಬಸ್‌ಗಳಿಗೆ ಅನುಮತಿ ಕೊಡುತ್ತೇವೆ. ಸಾರಿಗೆ ಸಿಬ್ಬಂದಿಗಳ ಮುಷ್ಕರಕ್ಕೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ, ಅದು ಬೇರೆ ವಿಷಯ. ಆದರೆ, ದುರುದ್ದೇಶದಿಂದ ಉದ್ದೇಶಪೂರ್ವಕವಾಗಿ ಸಾರಿಗೆ ಸಿಬ್ಬಂದಿ ಬಳಿ ಮುಷ್ಕರ ಮಾಡಿಸುತ್ತಿದ್ದಾರೆ. ಸಾರಿಗೆ ಸಿಬ್ಬಂದಿಗಳು ದಯಮಾಡಿ ಹಠ ಬಿಟ್ಟು ಸೇವೆಗೆ ಮರಳಬೇಕು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದರು. ಆದರೆ ಸಾರಿಗೆ ಸಿಬ್ಬಂದಿಗಳಿಗೆ ಎಸ್ಮಾ ಜಾರಿ ಕುರಿತ ಪ್ರಶ್ನೆಗೆ ಅವರು ಉತ್ತರ ನೀಡಲಿಲ್ಲ.

ಸಾರಿಗೆ ಸಚಿವ ಲಕ್ಷ್ಮಣ ಸವದಿ ಏನಂದಿದ್ದಾರೆ? ಕೊರೊನಾ ಸಮಯದಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ. ಸಾರಿಗೆ ನೌಕರರು ನಾಳಿನ ಮುಷ್ಕರವನ್ನು ಕೈಬಿಡಬೇಕು. ಪ್ರತಿಭಟನೆ ಮಾಡಿದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ. ಮಧ್ಯಮ ವರ್ಗ ಮತ್ತು ಬಡವರು ಹಠಮಾರಿತನದಿಂದ ಹೊರಬರಬೇಕು ಎಂದು ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಕೊರೊನಾದಿಂದ ಸಾರಿಗೆ ಇಲಾಖೆಗೆ ₹ 3,200 ಕೋಟಿ ನಷ್ಟವಾಗಿದೆ. ಕೊರೊನಾಗೂ ಮುಂಚೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ದಿನಕ್ಕೆ 1 ಕೋಟಿ ಜನ ಪ್ರಯಾಣಿಸ್ತಿದ್ದರು. ಆದರೆ ಈಗ ದಿನಕ್ಕೆ 60 ಲಕ್ಷ ಜನರಷ್ಟೇ ಪ್ರಯಾಣಿಸುತ್ತಿದ್ದಾರೆ. ಈಗ ಬರುವ ಆದಾಯ ಸಂಬಳ, ಇಂಧನಕ್ಕೂ ಸಾಕಾಗುತ್ತಿಲ್ಲ. ಹಣದ ಕೊರತೆ ನೀಗಿಸಲು ಸರ್ಕಾರದಿಂದ ಹಣ ಪಡೆದಿದ್ದೇವೆ. ₹ 1,962 ಕೋಟಿ ಪಡೆದು ನೌಕರರಿಗೆ ಸಂಬಳ ಕೊಡಲಾಗಿದೆ. ಬೇರೆ ರಾಜ್ಯಗಳಲ್ಲಿ ಕೊರೊನಾ ನೆಪವೊಡ್ಡಿ ಸಂಬಳ ಕಡಿತ ಮಾಡಲಾಗಿದೆ. ಆದರೆ ನಾವು ಸಾರಿಗೆ ನೌಕರರ ಸಂಬಳವನ್ನು ಕಡಿತ ಮಾಡಿಲ್ಲ. ಸೌರಿಗೆ ನೌಕರರ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಸಂಬಳ ಪರಿಷ್ಕರಣೆಯ ಒಂದು ಬೇಡಿಕೆ ಮಾತ್ರ ಬಾಕಿ ಇದೆ. ಇದನ್ನು ಈಡೇರಿಸಿದರೆ ₹ 1 ಸಾವಿರ ಕೋಟಿ ಹೊರೆಯಾಗುತ್ತದೆ. ಆದರೂ ಕೂಡ ಸಿಎಂ ಯಡಿಯೂರಪ್ಪ ಜತೆ ಚರ್ಚಿಸಿ ಸಂಬಳ ಹೆಚ್ಚಿಸುತ್ತೇವೆ. ಚುನಾವಣಾ ನಿತಿ ಸಂಹಿತೆ ಇರುವ ಕಾರಣ ಮೇ 2ರ ವೇಳೆಗೆ ಸಂಬಳ ಹೆಚ್ಚಿಸಲು ಅನುಮತಿ ದೊರೆಯಬಹುದು ಎಂದು ಹೇಳಿದರು.

ನಾಳೆಯ ಬಂದ್​ನ ಬಿಸಿ ಇಂದಿನಿಂದಲೇ ಜನಸಾಮಾನ್ಯರಿಗೆ ತಟ್ಟತೊಡಗಿದೆ. ಬೆಂಗಳೂರಿನ ನೆಲಮಂಗಲದಲ್ಲಿ ಬಸ್‌ಗಳು‌ ಇಲ್ಲದೆ ಪ್ರಯಾಣಿಕರು ಪರದಾಟ ಪಡುತ್ತಿದ್ದಾರೆ. ಕೆಲ ಮಾರ್ಗದಲ್ಲಿ 2ನೇ ಪಾಳಿಯ ಬಸ್‌ ಸೇವೆಯಲ್ಲಿ ವ್ಯತ್ಯಯವಾಗಿದೆ. ಯಶವಂತಪುರ ಘಟಕ 8ರಲ್ಲಿ ಬಸ್​ಗಳು ನಿಂತಲ್ಲೇ ನಿಂತಿವೆ. ಯಶವಂತಪುರ ಘಟಕ 8ರಲ್ಲಿ ಒಟ್ಟು 177 ಬಸ್​ಗಳಿದ್ದು, ಜನರಲ್ ಶಿಫ್ಟ್​ನಲ್ಲಿ 60 ಹೊರಟಿವೆ.ಆದರೆ ರಾತ್ರಿ ಪಾಳಿಯಲ್ಲಿ 79 ಹೋಗಬೇಕಿದ್ದು, ಈವರೆಗೆ ಕೇವಲ 2 ಬಸ್ ಗಳು ಮಾತ್ರ ಹೋಗಿವೆ. ಜತೆಗೆ 77 ಬಸ್​ಗಳು ಡಿಪೋದಲ್ಲಿಯೇ ಇವೆ. ಬೆಂಗಳೂರಿನ ಇನ್ನೂ ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ವ್ಯತ್ಯಯವಾಗುತ್ತಿದೆ.

ಇದನ್ನೂ ಓದಿ: Bust Strike: ತರಬೇತಿ ಸಿಬ್ಬಂದಿಯಿಂದಲೇ ಬಸ್ ಓಡಿಸಲಿದೆಯೇ ಸಾರಿಗೆ ಇಲಾಖೆ?

Bus Strike: 14 ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತೇವೆ – ಕೆ.ಕೆ.ಬಾಲಕೃಷ್ಣ

(CM Yediyurappa requests and warns KSRTC BMTC workers to attend the service)

Published On - 8:10 pm, Tue, 6 April 21

ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!