ಕೊರೊನಾ ಸೋಂಕಿತರಿಗೆ ಬೇಕಿರುವ ಕೊಲಿಸ್ಟಿನ್ ಮಾತ್ರೆ ಪೂರೈಕೆಗೆ ಕೇಂದ್ರದ ಒಪ್ಪಿಗೆ: ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

| Updated By: ganapathi bhat

Updated on: Aug 21, 2021 | 10:11 AM

1 ಕೋಟಿ ಮಾತ್ರೆ ಪೂರೈಸಲು ಜೈಡಸ್ ಕ್ಯಾಡಿಲಾ ಒಪ್ಪಿಗೆ ನೀಡಿದೆ. ಈ ಬಗ್ಗೆ ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಆದೇಶ ಹೊರಬಿದ್ದಿದೆ.

ಕೊರೊನಾ ಸೋಂಕಿತರಿಗೆ ಬೇಕಿರುವ ಕೊಲಿಸ್ಟಿನ್ ಮಾತ್ರೆ ಪೂರೈಕೆಗೆ ಕೇಂದ್ರದ ಒಪ್ಪಿಗೆ: ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
ಕೊರೊನಾ ವೈರಸ್
Follow us on

ಬೆಂಗಳೂರು: ಕೊವಿಡ್ ಸೋಂಕಿತರಿಗೆ ಅತ್ಯಗತ್ಯವಾಗಿ ಬೇಕಿರುವ ಮಾತ್ರೆ ಪೂರೈಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. 1 ಕೋಟಿ ಕೊಲ್ಚಿಸಿನ್ ಮಾತ್ರೆ ಪೂರೈಕೆಗೆ ಕೇಂದ್ರ ಒಪ್ಪಿಗೆ ಸೂಚಿಸಿದೆ. ಮಾತ್ರೆ ಪೂರೈಕೆಗೆ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡಗೆ ಮಾತ್ರೆಯ ಅವಶ್ಯಕತೆ ಇರುವ ಬಗ್ಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜೈಡಸ್ ಕ್ಯಾಡಿಲಾ ಕಂಪನಿ ಜೊತೆ ಡಿ.ವಿ.ಸದಾನಂದ ಗೌಡ ಮಾತುಕತೆ ನಡೆಸಿದ್ದರು.

ಈ ಪ್ರಕ್ರಿಯೆ ಬಳಿಕ ರಾಜ್ಯಕ್ಕೆ ಮಾತ್ರೆ ಪೂರೈಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. 1 ಕೋಟಿ ಮಾತ್ರೆ ಪೂರೈಸಲು ಜೈಡಸ್ ಕ್ಯಾಡಿಲಾ ಒಪ್ಪಿಗೆ ನೀಡಿದೆ. ಈ ಬಗ್ಗೆ ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಆದೇಶ ಹೊರಬಿದ್ದಿದೆ. ಖರೀದಿಗೆ ಆದೇಶ ಕೊಟ್ಟ ಕೂಡಲೇ ರಾಜ್ಯಕ್ಕೆ ಮಾತ್ರೆ ಪೂರೈಕೆ ಬಗ್ಗೆ ತಿಳಿದುಬಂದಿದೆ.

ಪ್ರಸ್ತುತ 1015 ಟನ್ ಆಕ್ಸಿಜನ್​ ನಮಗೆ ಅಲಾಟ್ ಆಗಿದೆ
ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ವಿಧಾನಸೌಧದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮೊದಲಿಗೆ ಆಕ್ಸಿಜನ್ ಸಮಸ್ಯೆಯಿತ್ತು. ಪ್ರಸ್ತುತ 1015 ಟನ್ ಆಕ್ಸಿಜನ್​ ನಮಗೆ ಅಲಾಟ್ ಆಗಿದೆ. ಕೇಂದ್ರಕ್ಕೆ 1400 ಟನ್ ಆಕ್ಸಿಜನ್ ನೀಡಲು ಬೇಡಿಕೆಯಿದೆ. ಕೇಂದ್ರ ಸರ್ಕಾರದ ಜೊತೆ ನಿರಂತರ ಮಾತುಕತೆ ನಡೆಸಿದ್ದೇವೆ. ನಮಗೆ 1700 ಟನ್ ಆಕ್ಸಿಜನ್ ಪ್ರತಿದಿನ ಅವಶ್ಯಕತೆಯಿದೆ. ಇದು ಸಿಕ್ಕಿದರೆ ನಮ್ಮ ಸಂಪೂರ್ಣ ಸಮಸ್ಯೆ ಬಗೆಹರಿಯಲಿದೆ ಎಂದು ಶೆಟ್ಟರ್ ತಿಳಿಸಿದ್ದಾರೆ.

ನಮ್ಮ ರಾಜ್ಯದಲ್ಲಿ 1100 ಟನ್ ಆಕ್ಸಿಜನ್ ಉತ್ಪಾದನೆಯಾಗ್ತಿದೆ. ಕೆಲವು ರಾಜ್ಯಗಳಿಗೆ ಇಲ್ಲಿಂದ ಆಕ್ಸಿಜನ್ ಸರಬರಾಜಾಗುತ್ತಿದೆ. ಇದನ್ನು ನಮ್ಮಲ್ಲೇ ಬಳಸಿಕೊಳ್ಳಲು ಅವಕಾಶಕ್ಕೆ ಕೇಳಿದ್ದೇವೆ. ಮರು‌ಹಂಚಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿದ್ದೇವೆ ಎಂದು ಕೂಡ ವಿಧಾನಸೌಧದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಕೊರೊನಾ ಸೋಂಕಿತರ ಮಾಹಿತಿ ಇಲ್ಲಿದೆ
ರಾಜ್ಯದಲ್ಲಿ ಇಂದು ಒಂದೇ ದಿನ 34,281 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23,06,655 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 17,24,438 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 468 ಜನರ ಸಾವು ಸಂಭವಿಸಿದೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 23,306 ಜನರ ಸಾವು ದಾಖಲಾಗಿದೆ. 5,58,890 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಕೊರೊನಾದಿಂದ ಗುಣಮುಖರಾದವರಿಗೆ ಸಿಹಿ ಹಂಚಿ, ಪುಷ್ಪವೃಷ್ಟಿ ಮಾಡಿದ ಶಾಸಕ ರೇಣುಕಾಚಾರ್ಯ

ಕೊರೊನಾ 3ನೇ ಅಲೆ ಮುಂಜಾಗ್ರತೆ; 30 ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಕೊವಿಡ್ ಕೇರ್ ಸೆಂಟರ್ ಆರಂಭ: ಶಶಿಕಲಾ ಜೊಲ್ಲೆ

Published On - 7:30 pm, Wed, 19 May 21