ವಿದ್ಯಾರ್ಥಿ, ಪೋಷಕರ ಒತ್ತಾಯಕ್ಕೆ ಕಾಲೇಜು ಓಪನ್ ಮಾಡಿದ್ದೇವೆ -DCM ಡಾ. ಅಶ್ವತ್ಥ್ ನಾರಾಯಣ

ಬೆಂಗಳೂರು: ರಾಜ್ಯದಲ್ಲಿ ಕಾಲೇಜುಗಳು ಆರಂಭ ಮಾಡಿರುವ ವಿಚಾರದ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಾಯದ ಮೇರೆಗೆ ಕಾಲೇಜುಗಳನ್ನು ಆರಂಭ ಮಾಡಿದ್ದೇವೆ. ವಿದ್ಯಾರ್ಥಿಗಳು ಆನ್​ಲೈನ್ ಪಾಠ ಅರ್ಥವಾಗ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು. ಹೀಗಾಗಿ ಸರ್ಕಾರದ ಗೈಡ್​ ಲೈನ್​ನೊಂದಿಗೆ ಕಾಲೇಜು ಆರಂಭ ಮಾಡಿದ್ದೇವೆ ಅಲ್ಲದೆ ಹಂತ ಹಂತವಾಗಿ ಮುಂದಿನ ತರಗತಿ ಆರಂಭವಾಗಲಿದೆ ಎಂದರು. ಕೋವಿಡ್ ಟೆಸ್ಟ್​ಗೆ ವಿದ್ಯಾರ್ಥಿಗಳ ಹಣ ಕೊಡಬೇಕಾಗಿಲ್ಲ. ಸರ್ಕಾರದಿಂದಲೇ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತೆ ಹಾಗೂ […]

ವಿದ್ಯಾರ್ಥಿ, ಪೋಷಕರ ಒತ್ತಾಯಕ್ಕೆ ಕಾಲೇಜು ಓಪನ್ ಮಾಡಿದ್ದೇವೆ -DCM ಡಾ. ಅಶ್ವತ್ಥ್ ನಾರಾಯಣ
Updated By: ಸಾಧು ಶ್ರೀನಾಥ್​

Updated on: Nov 17, 2020 | 2:27 PM

ಬೆಂಗಳೂರು: ರಾಜ್ಯದಲ್ಲಿ ಕಾಲೇಜುಗಳು ಆರಂಭ ಮಾಡಿರುವ ವಿಚಾರದ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಾಯದ ಮೇರೆಗೆ ಕಾಲೇಜುಗಳನ್ನು ಆರಂಭ ಮಾಡಿದ್ದೇವೆ. ವಿದ್ಯಾರ್ಥಿಗಳು ಆನ್​ಲೈನ್ ಪಾಠ ಅರ್ಥವಾಗ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು. ಹೀಗಾಗಿ ಸರ್ಕಾರದ ಗೈಡ್​ ಲೈನ್​ನೊಂದಿಗೆ ಕಾಲೇಜು ಆರಂಭ ಮಾಡಿದ್ದೇವೆ ಅಲ್ಲದೆ ಹಂತ ಹಂತವಾಗಿ ಮುಂದಿನ ತರಗತಿ ಆರಂಭವಾಗಲಿದೆ ಎಂದರು.

ಕೋವಿಡ್ ಟೆಸ್ಟ್​ಗೆ ವಿದ್ಯಾರ್ಥಿಗಳ ಹಣ ಕೊಡಬೇಕಾಗಿಲ್ಲ. ಸರ್ಕಾರದಿಂದಲೇ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತೆ ಹಾಗೂ ಕಾಲೇಜಿಗೆ ಬರಲೇಬೇಕು ಎಂದು ಯಾವ ವಿದ್ಯಾರ್ಥಿಗಳಿಗೂ ಒತ್ತಾಯವಿಲ್ಲ. ಆನ್ ಲೈನ್ ಮೂಲಕವೂ ಪಾಠ ಕೇಳಬಹುದು. ಜೊತೆಗೆ ಕಾಂಟ್ಯಾಕ್ಟ್ ತರಗತಿಗಳು ಮುಂದುವರಿಯಲಿದೆ ಎಂದರು