Bengaluru: ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲು ಕಾಂಗ್ರೆಸ್ ನಿರ್ಧಾರ; ಡಿ.ಕೆ.ಶಿವಕುಮಾರ್
ರಾಜ್ಯದ ಜನರಿಗೆ ಬಿಜೆಪಿಯವರು ಕೊಟ್ಟ ಭರವಸೆಯನ್ನ ಈಡೇರಿಸಿಲ್ಲ, ದಿನಬಳಕೆಯ ವಸ್ತುಗಳ ಬೆಲೆ ಶೇಕಡಾ 60ರಷ್ಟು ಹೆಚ್ಚಾಗಿದೆ. ಈ ಹಿನ್ನೆಲೆ ಮಹಿಳೆಯರ ಪರವಾಗಿ ನಿಲ್ಲಲು ಕಾಂಗ್ರೆಸ್ ನಿರ್ಧಾರ ಮಾಡಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್(D. K. Shivakumar) ರಾಜ್ಯದ ಜನರಿಗೆ ಬಿಜೆಪಿಯವರು ಕೊಟ್ಟ ಭರವಸೆಯನ್ನ ಈಡೇರಿಸಿಲ್ಲ, ದಿನಬಳಕೆಯ ವಸ್ತುಗಳ ಬೆಲೆ ಶೇಕಡಾ 60ರಷ್ಟು ಹೆಚ್ಚಾಗಿದೆ. ಹೆಣ್ಣು ಮಕ್ಕಳಿಗೆ ನಾವು ಗ್ಯಾರಂಟಿ ಪತ್ರ ನೀಡುತ್ತೇವೆ. ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸುವ ಮೂಲಕ ಮಹಿಳೆಯರ ಪರವಾಗಿ ನಿಲ್ಲಲು ಕಾಂಗ್ರೆಸ್ ನಿರ್ಧಾರ ಮಾಡಿದೆ ಎಂದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು(ಜ.9) ಪಕ್ಷಕ್ಕೆ ಸೇರ್ಪಡೆ ಆದವರಿಗೆ ಪಕ್ಷದ ಕಡೆಯಿಂದ ಸ್ವಾಗತ ಮಾಡಿ. ಬೆಲೆ ಏರಿಕೆ ದೊಡ್ಡ ಪಿಶಾಚಿ ಆಗಿದ್ದು, ಜನರ ಬದುಕಿನಲ್ಲಿ ತೊಂದರೆಯಾಗಿದೆ. ಎಣ್ಣೆ, ಗೋಧಿ ಹಿಟ್ಟು, ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಜನರ ಜೇಬಿನಿಂದ ಪಿಕ್ ಪಾಕೆಟ್ ಆಗುತ್ತಾ ಇದೆ. ಬಿಜೆಪಿ ಜನರಿಗೆ ಕೊಟ್ಟ ಭರವಸೆಯಂತೆ ನಡೆದುಕೊಂಡಿಲ್ಲ. ಹೆಣ್ಣು ಮಕ್ಕಳಿಗೆ ನಾವು ಗ್ಯಾರಂಟಿ ಪತ್ರ ನೀಡುತ್ತೇವೆ. ಹಿರಿಯರ ಸಲಹೆ ಪಡೆದು ಅವರ ಸಲಹೆಯಂತೆ ಪ್ರಣಾಳಿಕೆಯನ್ನ ಮಾಡುತ್ತೇವೆ. ಜೊತೆಗೆ ಜನವರಿ 16ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಹೆಣ್ಣು ಮಕ್ಕಳ ದೊಡ್ಡ ಸಮಾವೇಶ ಮಾಡಲು ಈಗಾಗಲೇ ತಿರ್ಮಾನ ಮಾಡಲಾಗಿದ್ದು, ಇನ್ನು ಈ ಸಮಾವೇಶಕ್ಕೆ ಕೇಂದ್ರದಿಂದ ಪ್ರಿಯಾಂಕಾ ಗಾಂಧಿ ಭಾಗವಹಿಸಲಿದ್ದಾರೆ ಎಂದರು.
ಇದನ್ನೂ ಓದಿ:ಸ್ಯಾಂಟ್ರೋ ರವಿ ಕಂತೆ-ಕಂತೆ ಹಣ ಲೆಕ್ಕ ಹಾಕಿರುವುದು ಗೃಹ ಸಚಿವರ ಮನೆಯಲ್ಲಿ: ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ
ಇನ್ನು ಇದೇ ವೇಳೆ ಸ್ಯಾಂಟ್ರೋ ರವಿ ವಿಚಾರವಾಗಿ ಮಾತನಾಡಿದ ಅವರು ನನಗೆ ಹೊಸದಾಗಿ ಗೊತ್ತಾಯಿತು. ಸ್ಯಾಂಟ್ರೊ, ಆಡಿ, ಮರ್ಸಿಡೀಸ್ ಎಂದು ಟಿವಿಯಲ್ಲಿ ತೋರಿಸುತ್ತಿದ್ದರು. ಅವರಿಗೂ ಬಿಜೆಪಿಯವರಿಗೂ ಇರುವ ಸಂಬಂಧ ನೀವೇ ಬಿಚ್ಚಿ ಬಿಚ್ಚಿ ತೋರಿಸ್ತಿದ್ದೀರಾ. ಜೊತೆಗೆ ಹೆಚ್.ಡಿ ಕುಮಾರಸ್ವಾಮಿ ಅವರು ಕೂಡ ಈ ವಿಚಾರವಾಗಿ ಆರೋಪ ಮಾಡಿದ್ದಾರೆ. ಬಿಜೆಪಿಯವರು ಇಂತಹವರನ್ನು ರಕ್ಷಣೆ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿಯವರು ಹಾಗೂ ಗೃಹ ಸಚಿವರು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಆದರೆ ಆ ಕೆಲಸ ಮಾಡ್ತಾಯಿಲ್ಲ. ಅವರ ವಿರುದ್ಧ ಆರೋಪ ಬಂದಾಗ ಪಾರದರ್ಶಕವಾದ ತನಿಖೆ ಮಾಡಬೇಕು ಆಗ ಸತ್ಯ ಹೊರಗಡೆ ಬರುತ್ತದೆ. ಸುಮ್ಮನೆ ಯಾರು ಯಾರ ಜೊತೆ ಚಾಟ್ ಮಾಡಲ್ಲ, ಇಷ್ಟೇ ನೀವೆ ಅರ್ಥ ಮಾಡಿಕೊಳ್ಳಿ ಎಂದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Mon, 9 January 23