ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಯಾರಾದ್ರೂ ಬೇಜಾರಿಲ್ಲ. ಮುಸ್ಲಿಂರನ್ನಾದ್ರು ಮಾಡ್ಲಿ, ದಲಿತರನ್ನಾದ್ರು ಸಿಎಂ ಮಾಡಲಿ. ಸಿಎಂ ಮಾಡೋದು ಹೈಕಮಾಂಡ್ ಮತ್ತು ಶಾಸಕರಿಗೆ ಬಿಟ್ಟ ವಿಚಾರ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಮಾತನಾಡುತ್ತಾ ಬೊಮ್ಮಾಯಿಗೆ ಆರ್ಎಸ್ಎಸ್ ಅನ್ನು ಹೊಗಳದಿದ್ದರೇ ಖುರ್ಚಿ ಉಳಿಯಬೇಕಲ್ಲಾ!? ಅವರು ಪಾಪ ಆರ್ಎಸ್ಎಸ್ ನಿಂದ ಬಂದವರಲ್ಲ. ಅವರ ತಂದೆ ಕೂಡಾ ಆರ್ಎಸ್ಎಸ್ ನವರನವರಲ್ಲ. ನೈತಿಕ ಪೊಲೀಸರಿಗೆ ಆಗ್ಲೇ ಉತ್ತರ ಕೊಟ್ಟಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಯಡಿಯೂರಪ್ಪ ಮತ್ತು ನಾನು ಭೇಟಿಯಾಗಿದ್ದು ಅಪ್ಪಟ ಸುಳ್ಳು. ನಾವಿಬ್ಬರೂ ಭೇಟಿಯಾಗಿದ್ದನ್ನು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.
ಬಿಎಸ್ ಯಡಿಯೂರಪ್ಪ ಆರ್ಎಸ್ಎಸ್ನಿಂದ ಬಂದವರು. ನಾವು- ಅವರು ತದ್ವಿರುದ್ಧ. ಅವರನ್ನ ಭೇಟಿಯಾಗಿದ್ದು ಸುಳ್ಳು. ಅಧಿಕಾರದಲ್ಲಿರೋರ ಮನೆ ಬಾಗಿಲಿಗೆ ನಾನೆಂದೂ ಹೋಗಿಲ್ಲ. ಅದು ನನ್ನ ಪ್ರಿನ್ಸಿಪಲ್. ಹೀಗಾಗಿ ನಾನು BSY ಭೇಟಿಯಾಗಿಲ್ಲ ಎಂದು ಸ್ಪಷ್ಟೋಕ್ತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇದೇ ವೇಳೆ, ಕಾಂಗ್ರೆಸ್ ಮುಖಂಡರಾದ ಸಲೀಂ-ಉಗ್ರಪ್ಪ ಸಂಭಾಷಣೆ ಪ್ರಕರಣದ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಅನ್ನೋ ಶೆಟ್ಟರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಹಾಗಿದ್ರೆ ಯತ್ನಾಳ್, ವಿಶ್ವಾನಾಥ ಅವರಿಗೂ ನಾನೇ ಹೇಳಿದ್ನಾ..?
ಹಿಂದೆ ಅನಂತಕುಮಾರ-ಬಿಎಸ್ ವೈ ಮಾತನಾಡಿದ್ದರು ಅದಕ್ಕೂ ನಾನೇ ಕಾರಣನಾ..? ಇವರೆಲ್ಲಾ ಸಿಎಂ ಆದವರು.. ಹೀಗೇ ಮತನಾಡಿದ್ರೆ ಹೇಗೆ? ಎಲ್ಲದಕ್ಕೂ ಸಿದ್ದರಾಮಯ್ಯ ಟಾರ್ಗಟ್ ಮಾಡಿದ್ರೆ ಹೇಗೆ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
Also Read:
ಸಿದ್ದರಾಮಯ್ಯಗೆ ಆರ್ಎಸ್ಎಸ್ ಶಾಖೆಗೆ ಬರುವಂತೆ ಆಹ್ವಾನಿಸಿದ ಸಿ ಟಿ ರವಿ
ಸರ್.. ನೀವು, ಯಡಿಯೂರಪ್ಪ ಭೇಟಿ ಆಗಿ ಮಾತ್ನಾಡಿದ್ದಾರೆ ಅಂತ ಸುದ್ದಿ ಆಗ್ತಿದೆ ಅಂದ್ರೆ.. | Siddu | Tv9kannada
(congress leader siddaramaiah says let anybody be chief minister of karnataka congress high command to take decision)
Published On - 9:57 am, Sat, 16 October 21