ಸಿಡಿ ಇದೆ ಅದಕ್ಕೇ ವಿಲಿವಿಲಿ ಅಂತ ಒದ್ದಾಡ್ತಿದ್ದಾರೆ: ನಂಗೆ ಸಿಡಿಯೇ ಮುಖ್ಯ ಎಂದ ಸಿದ್ದರಾಮಯ್ಯ

| Updated By: ganapathi bhat

Updated on: Apr 05, 2022 | 1:15 PM

ಸಿದ್ದರಾಮಯ್ಯ ಏನ್ ಸತ್ಯಹರಿಶ್ಚಂದ್ರರಾ ಎಂದು ನನ್ನ ಹೆಸರನ್ನೂ ಸುಧಾಕರ್ ಹೇಳಿದ್ದಾರೆ. 225 ಜನರಲ್ಲಿ ಹೆಣ್ಣುಮಕ್ಕಳೂ ಬರುತ್ತಾರೆ. ಸುಧಾಕರ್ ಅವ್ರನ್ನು ಬಿಟ್ಟು ಹೇಳಿದ್ದಾರಾ? ಅವ್ರನ್ನೂ ಸೇರಿಸಿಯೇ ಹೇಳಿದ್ದಾರಲ್ವಾ? ಇದರಿಂದ ಹೆಣ್ಣುಮಕ್ಕಳ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದಂತಾಗಿದೆ ಎಂದು ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.

ಸಿಡಿ ಇದೆ ಅದಕ್ಕೇ ವಿಲಿವಿಲಿ ಅಂತ ಒದ್ದಾಡ್ತಿದ್ದಾರೆ: ನಂಗೆ ಸಿಡಿಯೇ ಮುಖ್ಯ ಎಂದ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನೀಡಿರುವ ಏಕಪತ್ನೀವ್ರತಸ್ಥ ಹೇಳಿಕೆ ವಿವಾದದ ಧೂಳೆಬ್ಬಿಸಿದೆ. ವಿಪಕ್ಷಗಳ ನಾಯಕರು ಸುಧಾಕರ್ ಹೇಳಿಕೆಯನ್ನು ಖಂಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಂದು (ಮಾರ್ಚ್ 24) ಸಂಜೆ ನಡೆದ ಸುದ್ದಗೋಷ್ಠಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸುಧಾಕರ್ ನಾನ್ ಕಳ್ಳ ಪರರ ನಂಬ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಸದನದಲ್ಲಿರುವ ಅಷ್ಟೂ ಶಾಸಕರ ವಿರುದ್ಧ ಅವರು ಆಪಾದನೆ ಮಾಡಿದ್ದಾರೆ. ಅಧಿವೇಶನದ ಸಂದರ್ಭದಲ್ಲಿ ಹೀಗೆ ಹೇಳಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

ಸಿದ್ದರಾಮಯ್ಯ ಏನ್ ಸತ್ಯಹರಿಶ್ಚಂದ್ರರಾ ಎಂದು ನನ್ನ ಹೆಸರನ್ನೂ ಸುಧಾಕರ್ ಹೇಳಿದ್ದಾರೆ. 225 ಜನರಲ್ಲಿ ಹೆಣ್ಣುಮಕ್ಕಳೂ ಬರುತ್ತಾರೆ. ಸುಧಾಕರ್ ಅವ್ರನ್ನು ಬಿಟ್ಟು ಹೇಳಿದ್ದಾರಾ? ಅವ್ರನ್ನೂ ಸೇರಿಸಿಯೇ ಹೇಳಿದ್ದಾರಲ್ವಾ? ಇದರಿಂದ ಹೆಣ್ಣುಮಕ್ಕಳ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದಂತಾಗಿದೆ ಎಂದು ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.

ಸುಧಾಕರ್ ರಾಜೀನಾಮೆ ಕೇಳಲ್ವ ಸರ್ ಎಂದು ಕೇಳಿದ ಪ್ರಶ್ನೆಗೆ ಒಂದ್ಸಲ ಕೇಳಿದೀವಲ್ಲ. ಇನ್ನೇನು ಐದಾರು ಸಲ ಕೇಳ್ಬೇಕಾ? ಎಂದು ಚಟಾಕಿ ಹಾರಿಸಿದ್ದಾರೆ. ಸಿಡಿ ಕೇಸ್​ಗೆ ಸಂಬಂಧಿಸಿ ಸುಧಾಕರ್ ಸಹಿತ ಐದಾರು ಜನರ ರಾಜೀನಾಮೆ ಕೇಳಿದ್ದೇವೆ. ಸಿಡಿ ಇದೆ ಅದಕ್ಕೆ ಅವ್ರು ವಿಲಿವಿಲಿ ಅಂತ ಒದ್ದಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ.

ನೀವು ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ಬೆಲೆ ಬಗ್ಗೆ ಮಾತನಾಡ್ತಿಲ್ಲ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಖಡಕ್ ಆಗಿ ಉತ್ತರಿಸಿದ್ದಾರೆ. ಪೆಟ್ರೋಲ್ ಬೆಲೆ ಬಗ್ಗೆನೂ ಪ್ರತಿಭಟನೆ ಮಾಡಿದ್ದೀವಲ್ಲಯ್ಯ. ಅದು ನಡೀತಿರ್ಬೇಕಾದ್ರೆ ಈ ಸಿಡಿ ಕೇಸ್ ಬಂತು ಎಂದು ಹೇಳಿದ್ದಾರೆ. ಸಿಡಿನೇ ಮುಖ್ಯನಾ ಎಂದು ಕೇಳಿದಾಗ, ಹೌದು ಕಣಯ್ಯ ನನ್ ಪ್ರಕಾರ ಮಾನ ಮುಖ್ಯ. ಸಿಡಿ ಕೇಸ್ ಮುಖ್ಯ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದಕ್ಕೂ ಮೊದಲು ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಇಂಥಾ ಆರ್ಥಿಕ ಪರಿಸ್ಥಿತಿ ಬಂದಿರಲಿಲ್ಲ. ನಾನು 13 ಬಜೆಟ್ ಮಂಡನೆ ಮಾಡಿದ್ದೇನೆ. ನಾವು ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡಿದ್ವಿ ಎಂದು ಆಡಳಿತ ಸರ್ಕಾರವನ್ನು ಟೀಕಿಸಿದ್ದಾರೆ.

ಕೇಂದ್ರ ಸರ್ಕಾರದ ಅನುದಾನಗಳೆಲ್ಲ ಕಡಿಮೆ ಆಗಿದೆ. ಕೇಂದ್ರದಿಂದ ನಮಗೆ ತೆರಿಗೆ ಪಾಲು 24 ಸಾವಿರದ 273 ಕೋಟಿ ರೂಪಾಯಿ ಬರಬೇಕಿದೆ. ಆದರೆ ಬಂದಿರೋದು 20 ಸಾವಿರದ 53 ಕೋಟಿ. ಅಂದರೆ 4 ಸಾವಿರದ 200 ಕೋಟಿ ಬಂದಿಲ್ಲ. 15,538 ಕೋಟಿ ಸಹಾಯಧನ ಬರಬೇಕಿದೆ. ಆದರೆ ಬಂದಿರೋದು 14,144 ಕೋಟಿ. 1,310 ಕೋಟಿ ಕಡಿಮೆ ಆಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸ್ಟುಪಿಡ್ ಹೇಳಿಕೆ, ಗಿಲ್ಟಿ ಮೈಂಡ್​ನಿಂದ ಸುಧಾಕರ್ ಹಾಗೆ ಹೇಳಿದ್ದಾರೆ: ಸಿದ್ದರಾಮಯ್ಯ ಟಾಂಗ್

ವೀವಾದಕ್ಕೀಡಾದ ‘ಏಕಪತ್ನೀವ್ರತಸ್ಥ’ ಹೇಳಿಕೆ; ಸಚಿವ ಡಾ.ಕೆ.ಸುಧಾಕರ್ ವಿಷಾದ

Published On - 5:43 pm, Wed, 24 March 21