ಚಿತ್ರದುರ್ಗ: ಕಾಡುಗೊಲ್ಲ ಸಮುದಾಯದ ಅಪರೂಪ ಸಾಂಪ್ರದಾಯಿಕ ಆಚರಣೆ ಅನಾವರಣ

ಬಸ್ಸಪ್ಪನ ಮಾಳಿಗೆ ಗ್ರಾಮದ ನೊಣವಿನಹಳ್ಳದಲ್ಲಿ ಕಾಡುಗೊಲ್ಲ ಸಮುದಾಯದ ಸಾಂಪ್ರದಾಯಿಕ ಆಚರಣೆ ಅನಾವರಣಗೊಂಡಿದ್ದು, ಕುಲದೇವರ ವಿಶೇಷ ಗಂಗಾ ಪೂಜೆ ಮೂಲಕ ನಾಡಿಗೆ ಒಳಿತಾಗಲಿ ಎಂದು ಕಾಡುಗೊಲ್ಲ ಸಮುದಾಯದ ಜನರು ಆರಾಧ್ಯ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಚಿತ್ರದುರ್ಗ: ಕಾಡುಗೊಲ್ಲ ಸಮುದಾಯದ ಅಪರೂಪ ಸಾಂಪ್ರದಾಯಿಕ ಆಚರಣೆ ಅನಾವರಣ
ಎತ್ತಿನ ಗಾಡಿಗಳಲ್ಲಿ ದೇವರ ಮೂರ್ತಿಯನ್ನು ತಂದ ಕಾಡುಗೊಲ್ಲ ಸಮುದಾಯ
Follow us
sandhya thejappa
|

Updated on:Mar 24, 2021 | 5:21 PM

ಚಿತ್ರದುರ್ಗ: ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಸಮುದಾಯದಲ್ಲಿ ಇಂದಿಗೂ ಅನೇಕ ವಿಭಿನ್ನ ಆಚರಣೆಗಳು ಆಚರಿಸಲಾಗುತ್ತದೆ. ಬುಡಕಟ್ಟು ಸಂಸ್ಕೃತಿಯ ತವರಾದ ಕೋಟೆನಾಡಿನಲ್ಲಿ ಕಾಡುಗೊಲ್ಲ ಸಮುದಾಯದ ಅಪರೂಪದ ಸಾಂಪ್ರದಾಯಿಕ ಆಚರಣೆ ಅನಾವರಣಗೊಂಡಿದೆ. ನೂತನ ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಸಕಲಾಪುರ ಗೊಲ್ಲರಹಟ್ಟಿಯಿಂದ ವೀರನಾಗೇಶ್ವರ ಉತ್ಸವ ಮೂರ್ತಿ, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಜಮ್ಮಾಪುರ ಗೊಲ್ಲರಹಟ್ಟಿಯಿಂದ ಮೈಲಣ್ಣೇಶ್ವರಸ್ವಾಮಿಯ ಉತ್ಸವ ಮೂರ್ತಿಗಳನ್ನು ಹೊತ್ತುಕೊಂಡು ಕಾಡುಗೊಲ್ಲ ಸಮುದಾಯದ ಜನ ನೂರಾರು ಎತ್ತಿನಗಾಡಿಗಳ ಜತೆಗೆ ಸುಮಾರು 100 ಕಿಲೋಮೀಟರ್ ದೂರದ ಜಿಲ್ಲೆಯ ಹಿರಿಯೂರು ತಾಲೂಕಿನ ಬಸಪ್ಪನ ಮಾಳಿಗೆ ಆಗಮಿಸಿದ್ದರು.

ಪುಣ್ಯಕ್ಷೇತ್ರದ ಸ್ಥಳದಲ್ಲಿ ಸಾಂಪ್ರದಾಯಿಕವಾಗಿ ಆರಾಧ್ಯ ದೇವರ ವಿಶೇಷ ಗಂಗಾಪೂಜೆ ನೆರವೇರಿಸಿದರು. ನೊಣವಿನಹಳ್ಳದಲ್ಲಿ ವರ್ತಿ ತೆಗೆದು ನೀರು ಸಂಗ್ರಹಿಸಿ ಉತ್ಸವ ಮೂರ್ತಿಗಳ ವಿಶೇಷ ಗಂಗಾ ಪೂಜೆ, ಅಭಿಷೇಕ, ಪುಣ್ಯಾರ್ಚನೆ ನೆರವೇರಿಸಿದರು.

ನಾನಾ ವ್ರತ ಆಚರಿಸುವ ಭಕ್ತರು ಕಾಡುಗೊಲ್ಲ ಸಮುದಾಯದ ಆರಾಧ್ಯ ದೇವರುಗಳ ಉತ್ಸವ ಮೂರ್ತಿ ಹೊರುವವರು, ಪೂಜಾರಿಗಳು, ದಾಸಯ್ಯಗಳು ನಾನಾ ವ್ರತಗಳನ್ನು ಆಚರಿಸುತ್ತಾರೆ. ವಾಪಸ್ ಗ್ರಾಮಗಳಿಗೆ ತಲುಪುವವರೆಗೆ ಆಚರಣೆಗಳನ್ನು ಮಾಡುತ್ತಾರೆ. ಆ ಮೂಲಕ ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಸಮುದಾಯದ ಪುರಾತನ ಆಚರಣೆಗಳನ್ನು ಆಚರಿಸಲಾಗುತ್ತಿದೆ. ಈ ಆಚರಣೆಯಿಂದ ಕಾಡುಗೊಲ್ಲ ಸಮುದಾಯದ ಹಟ್ಟಿಗಳು ಮತ್ತು ನಾಡಿಗೆ ಒಳಿತಾಗುತ್ತದೆ ಎಂಬ ನಂಬಿಕ ಸಮುದಾಯದಲ್ಲಿದೆ. ಅಂತೆಯೇ ಕಾಡುಗೊಲ್ಲರ ನೆಂಟರಿಷ್ಟರು ಮಾತ್ರವಲ್ಲದೆ ಇತರೆ ಸಮುದಾಯದವರೂ ಭಾಗಿಯಾಗುತ್ತಾರೆ. ಈ ಗಂಗಾಪೂಜೆ ಮೂಲಕ ವಿಶ್ವಕ್ಕೆ ಕಂಟಕವಾದ ಕೊರೊನಾ ದೂರಾಗಲಿದೆ ಎಂಬ ನಂಬಿಕೆ ನಮ್ಮಲ್ಲಿದೆ ಅಂತಾರೆ ಕಾಡುಗೊಲ್ಲ ಸಮುದಾಯದ ಮುಖಂಡರು.

ದೇವರ ಮೂರ್ತಿ

ಗಂಗಾ ಪೂಜೆಯ ವೇಳೆ ಸೇರಿದ್ದ ಭಕ್ತರು

ಗಂಗಾ ಪೂಜೆ ನೆರವೇರಿಸಿ ತಲೆ ಮೇಲೆ ವಿಗ್ರಹವನ್ನು ಹೊತ್ತು ತಂದರು

ಬಸ್ಸಪ್ಪನ ಮಾಳಿಗೆ ಗ್ರಾಮದ ನೊಣವಿನಹಳ್ಳದಲ್ಲಿ ಕಾಡುಗೊಲ್ಲ ಸಮುದಾಯದ ಸಾಂಪ್ರದಾಯಿಕ ಆಚರಣೆ ಅನಾವರಣಗೊಂಡಿದ್ದು, ಕುಲದೇವರ ವಿಶೇಷ ಗಂಗಾ ಪೂಜೆ ಮೂಲಕ ನಾಡಿಗೆ ಒಳಿತಾಗಲಿ ಎಂದು ಕಾಡುಗೊಲ್ಲ ಸಮುದಾಯದ ಜನರು ಆರಾಧ್ಯ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ

ಮಂಡ್ಯದಲ್ಲಿ ಕೆಂಡ ಹಾಯುವ ವೇಳೆ ಆಯತಪ್ಪಿ ಕೊಂಡಕ್ಕೆ ಬಿದ್ದ ಅರ್ಚಕ..

ಗ್ರಾಮ ಪಂಚಾಯತಿ ಸದಸ್ಯೆ ಮನೆ ಮೇಲೆ ದಾಳಿ; ಮಣ್ಣು ತೆಗೆಯುವ ವಿಚಾರಕ್ಕೆ ಕಿಡಿಗೇಡಿಗಳಿಂದ ದಾಂದಲೆ

Published On - 5:12 pm, Wed, 24 March 21