ಕೋಸಿಗಿಲ್ಲ ಕಾಸು… ಟ್ರ್ಯಾಕ್ಟರ್ ಹೊಡೆಸಿ ಬೆಳೆ ನಾಶ ಮಾಡಿದ ಚಿಕ್ಕಮಗಳೂರಿನ ರೈತ

ಮೂರ್ನಾಲ್ಕು ತಿಂಗಳು ನೀರಾಯಿಸಿ ಹಗಲಿರುಳು ಕಾದು ಬೆಳೆದ ಬೆಳೆಗೆ ಬೆಲೆ ಇಲ್ಲ ಅಂತ ಮನನೊಂದು ರೈತ ಬಸವರಾಜು ಭೂಮಿಗೆ ಗೊಬ್ಬರವಾದರು ಆಗಲಿ ಎಂದು ಇಡೀ ಎರಡು ಎಕರೆ ಹೊಲದ ತುಂಬಾ ಟ್ರ್ಯಾಕ್ಟರ್ ಹೊಡೆಸಿದ್ದಾರೆ. ಹೊಲದ ತುಂಬಾ ಒಳ್ಳೆ ಸೈಜಿನ ಕೋಸುಗಳು ನಳನಳಿಸುತ್ತಿತ್ತು.

ಕೋಸಿಗಿಲ್ಲ ಕಾಸು... ಟ್ರ್ಯಾಕ್ಟರ್ ಹೊಡೆಸಿ ಬೆಳೆ ನಾಶ ಮಾಡಿದ ಚಿಕ್ಕಮಗಳೂರಿನ ರೈತ
ಕೋಸ್​ ಬೆಳೆ ಮೇಲೆ ಟ್ರ್ಯಾಕ್ಟರ್ ಹೊಡೆಸಿದ ರೈತ
Follow us
sandhya thejappa
|

Updated on: Mar 24, 2021 | 4:19 PM

ಚಿಕ್ಕಮಗಳೂರು: ರೈತ ಬೆಳೆದ ಬೆಳೆಯ ಬಗ್ಗೆ ಲಾಭದ ನಿರೀಕ್ಷೆಯನ್ನು ಇಟ್ಟುಕೊಳ್ಳುವುದೇ ತಪ್ಪೆಂದು ಅನಿಸುತ್ತದೆ. ಈ ಬಾರಿಯಾದರೂ ಒಳ್ಳೆಯ ಲಾಭವನ್ನು ಪಡೆಯಬಹುದು ಎಂದು ಯೋಚಿಸುವ ರೈತರಿಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುವುದಂತು ಸುಳ್ಳಲ್ಲ. ಹೀಗೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ರೈತರೊಬ್ಬರು ಎರಡು ಎಕರೆ ಹೊಲದಲ್ಲಿ ಕೋಸ್ ಬೆಳೆದಿದ್ದರು. ಕಳೆದೊಂದು ವರ್ಷದಲ್ಲಿ ನಾಲ್ಕು ಬೆಳೆ ಬೆಳೆದಿದ್ದಾರೆ. ಲಾಕ್ಡೌನ್ನಲ್ಲೂ ಕೋಸ್ನ ಬೆಳೆದಿದ್ದರು. ಆದರೆ ನಾಲ್ಕು ಬೆಳೆಯಲ್ಲಿ ಯಾವ ಬೆಳೆಯೂ ಒಂದು ರೂಪಾಯಿ ಲಾಭ ತರಲಿಲ್ಲ. ನಷ್ಟವೇ ಹೆಚ್ಚು. ನಷ್ಟ ಎಂದರೆ ಹಾಕಿದ ಹಣವೂ ಸಿಗದಷ್ಟು ನಷ್ಟವಾಗಿದೆ.

ಮೂರ್ನಾಲ್ಕು ತಿಂಗಳು ನೀರಾಯಿಸಿ ಹಗಲಿರುಳು ಕಾದು ಬೆಳೆದ ಬೆಳೆಗೆ ಬೆಲೆ ಇಲ್ಲ ಅಂತ ಮನನೊಂದು ರೈತ ಬಸವರಾಜು ಭೂಮಿಗೆ ಗೊಬ್ಬರವಾದರು ಆಗಲಿ ಎಂದು ಇಡೀ ಎರಡು ಎಕರೆ ಹೊಲದ ತುಂಬಾ ಟ್ರ್ಯಾಕ್ಟರ್ ಹೊಡೆಸಿದ್ದಾರೆ. ಹೊಲದ ತುಂಬಾ ಒಳ್ಳೆ ಸೈಜಿನ ಕೋಸುಗಳು ನಳನಳಿಸುತ್ತಿತ್ತು. ಆದರೆ ಮಾರ್ಕೆಟ್ ಹೋಗಿ ಉತ್ತಮ ಬೆಲೆ ಕೇಳಿದರೆ 10 ಕೆ.ಜಿಗೆ ಚೀಲಕ್ಕೆ 30 ರಿಂದ 50 ರೂಪಾಯಿ ಸಿಗುತ್ತಿದೆ. ಇದರಿಂದ ಮನನೊಂದ ರೈತ ಸರ್ಕಾರ ಮತ್ತು ಮಧ್ಯವರ್ತಿಗಳ ಮೇಲಿನ ಸಿಟ್ಟನ್ನು ಹೊಲದ ಮೇಲೆ ಟ್ರ್ಯಾಕ್ಟರ್ ಹೊಡೆಸುವ ಮೂಲಕ ತೀರಿಸಿಕೊಂಡಿದ್ದಾರೆ.

ಎರಡು ಎಕರೆ ಹೊಲದಲ್ಲಿ ಕೋಸನ್ನು ಬೆಳೆಯಲು ಸುಮಾರು 40 ರಿಂದ 50 ಸಾವಿರ ಹಣವನ್ನು ಖರ್ಚು ಮಾಡಿದ್ದಾರೆ. ಲಾಕ್ಡೌನ್ ವೇಳೆ ಕೆಲಸವಿಲ್ಲದೆ, ಹಣವಿಲ್ಲದೆ ಸಾಲ ಸೋಲ ಮಾಡಿ ಬೆಳೆದ ಬೆಳೆ ಕೊಟ್ಟಿದ್ದು ಸಾಲದ ಭಯ. ಈ ಮಧ್ಯೆ ಗಗನ ಮುಟ್ಟಿರುವ ಬೀಜ ಹಾಗೂ ಗೊಬ್ಬರದ ದರ ರೈತರನ್ನ ಮತ್ತಷ್ಟು ಕಂಗಾಲಾಗಿಸಿತ್ತು. ಹೀಗಿದ್ದರೂ ಕೃಷಿ ಮೇಲಿನ ಪ್ರೀತಿಯಿಂದ ಬೆಳೆದ ಬೆಳೆ ರೈತನಿಗೆ ಬೇಜಾರು ತರಿಸಿದೆ. ಚೀಲಕ್ಕೆ 30-40 ರೂಪಾಯಿ ಕೇಲುತ್ತಿರುವುದು ರೈತರನ್ನು ಮತ್ತಷ್ಟು ಕಂಗೆಡಿಸಿದೆ. ಇದರಿಂದ ಬೇಸತ್ತ ರೈತ ಬಸವರಾಜು ಹೊಲದ ತುಂಬಾ ಟ್ರ್ಯಾಕ್ಟರ್ ಹೊಡಿಸಿ ಕೋಸಿನ ಬೆಳೆಯನ್ನ ಹೊಲಕ್ಕೆ ಗೊಬ್ಬರವಾಗಿಸಿದ್ದಾರೆ. ವರ್ಷಕ್ಕೆ ಮೂರ್ನಾಲ್ಕು ಬೆಳೆ ಬೆಳೆದರು ಲಾಭ ಬರದ ಕಾರಣ ರೈತ ಆತಂಕಕ್ಕೊಳಗಾಗಿದ್ದಾರೆ. ಇದು ಕೇವಲ ಬಸವರಾಜು ಒಬ್ಬರ ಸಮಸ್ಯೆಯಲ್ಲ. ಜಿಲ್ಲೆಯ ಬಹುತೇಕ ಬೆಳೆಯ ಬಹುತೇಕ ರೈತರದ್ದು ಇದೇ ಸಮಸ್ಯೆ. ಬಹಳ ಜನ ಹೀಗೆ ಬೆಳೆಯನ್ನ ಹೊಲದಲ್ಲೇ ನಾಶ ಮಾಡಲು ಮುಂದಾಗಿದ್ದಾರೆ.

ಬೆಳೆಗೆ ಲಾಭ ಸಿಗದ ರೈತ ಟ್ರ್ಯಾಕ್ಟರ್ ಹೊಡೆಸಿದ್ದಾರೆ

ರೈತ ಬಸವರಾಜು ಎರಡು ಎಕರೆ ಹೊಲದಲ್ಲಿ ಕೋಸನ್ನು ಬೆಳೆದಿದ್ದರು

ಅನ್ನದಾತನ ಅಳಲು ಮೂರ್ನಾಲ್ಕು ತಿಂಗಳು ನೀರಾಯಿಸಿ, ರಣಬಿಸಿಲಲ್ಲಿ ನೊಂದು ಬೆಂದು ಬೆವರು ಸುರಿಸಿದರು ಲಾಭವಿಲ್ಲ. ಹಾಕಿದ ಬಂಡವಾಳವೂ ಬರಲಿಲ್ಲ. ಹಾಕಿದ ಬಂಡವಾಳವಾದರು ಸಿಕ್ಕಿದ್ದರೆ ರೈತ ಸಮುದಾಯ ನಿಟ್ಟುಸಿರು ಬಿಡುತ್ತಿತ್ತು. ಆದರೆ ಈಗಿರುವ ಬೆಲೆಗೆ ಕೂಲಿ ಕೊಡಲು ಆಗುವುದಿಲ್ಲ ಎಂದು ತಾನೇ ಮಕ್ಕಳಂತೆ ಬೆಳೆಸಿದ ಕೋಸಿನ ಫಸಲಿಗೆ ಟ್ರ್ಯಾಕ್ಟರ್ ಹತ್ತಿಸಿ ಸಂಪೂರ್ಣ ನಾಶ ಮಾಡಿದ್ದಾರೆ. ಸರ್ಕಾರ ಕೃಷಿ ಮಾರುಕಟ್ಟೆಗೆ ಹೊಸ-ಹೊಸ ಕಾನೂನುಗಳನ್ನ ತರುವ ಬದಲು ಸರ್ಕಾರ ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡಿದರೆ ಬಡರೈತರಾದರೂ ಬದುಕುತ್ತಾರೆ ಎನ್ನುವುದು ಅನ್ನದಾತರ ಅಳಲಾಗಿದೆ.

ಇದನ್ನೂ ಓದಿ

BBK8: ನಿಧಿ-ಶುಭಾ ಬಿಗ್​ ಬಾಸ್​ ಮನೆಯ ಗಾಸಿಪ್​ ರಾಣಿಯರು! ಮಲಗುವ ಮುನ್ನ ಬರೀ ಇಂಥ ಮಾತುಗಳೇ

ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್​ ಕೊಡೋಲ್ಲ ಎಂದು ದೇಶಪ್ರೇಮ, ಸಮಯಪ್ರಜ್ಞೆ ಮೆರೆದ ಅಜಿಂಕ್ಯ ರಹಾನೆ! ವೈರಲ್ ಆಯ್ತು ವಿಡಿಯೋ

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ