ಕಾಂಗ್ರೆಸ್​ ಪಾಳಯದಲ್ಲಿ ಭಾರೀ ಚಿಂತೆ, ಚಿಂತನೆ: ಕೋರ್ಟ್ ತಪರಾಕಿ ಬೆನ್ನಲ್ಲೇ ‘ನಾನೊಬ್ಬನೇ ನಡಿತೀನಿ ಬಿಡಿ’ ಎಂದಿರುವ ಡಿಕೆಶಿ

| Updated By: ಸಾಧು ಶ್ರೀನಾಥ್​

Updated on: Jan 13, 2022 | 8:04 AM

ಅತ್ತ ಕಾಂಗ್ರೆಸ್​ ಪಾಳಯದಲ್ಲೂ ಭಾರೀ ಚಿಂತೆ, ಚಿಂತನೆಗಳು ನಡೆದಿವೆ. ಪಾದಯಾತ್ರೆಯ ಮುಂಧಾಳತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು congress mekedatu padayatre: ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎಂಬ ಜೋಡೆತ್ತುಗಳ ಪೈಕಿ ಡಿ ಕೆ ಶಿವಕುಮಾರ್ ಅವರು ಕೋರ್ಟ್​ ಅಬ್ಸರ್ವೇಶನ್ ​ಬಳಿಕ ಡಿ ಕೆ ಶಿವಕುಮಾರ್ ಕಾನೂನು ತಜ್ಞರ ಜೊತೆ ನಿರಂತರವಾಗಿ ಚರ್ಚೆ ನಡೆಸಿದ್ದಾರೆ. ಕಾನೂನಿಗೆ ನಾವೆಲ್ಲರೂ ತಲೆ ಬಾಗಲೇಬೇಕು ಎಂಬ ಸಂದೇಶ ಕಾಂಗ್ರೆಸ್​ ನಾಯಕರ ಮಧ್ಯೆ ಹರಿದಾಡುತ್ತಿದೆ.

ಕಾಂಗ್ರೆಸ್​ ಪಾಳಯದಲ್ಲಿ ಭಾರೀ ಚಿಂತೆ, ಚಿಂತನೆ: ಕೋರ್ಟ್ ತಪರಾಕಿ ಬೆನ್ನಲ್ಲೇ ‘ನಾನೊಬ್ಬನೇ ನಡಿತೀನಿ ಬಿಡಿ’ ಎಂದಿರುವ ಡಿಕೆಶಿ
ಪ್ರಾತಿನಿಧಿಕ ಚಿತ್ರ
Follow us on

ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಇಂದು ಐದನೇ ದಿನ‌ಕ್ಕೆ ಕಾಲಿರಿಸಿದೆ. ಆದರೆ ಕಾಂಗ್ರೆಸ್​ ನಾಯಕರು ಇಂದೂ ಕಾಲೂರಿ ಪಾದಯಾತ್ರೆ ಮುಂದುವರಿಸುತ್ತಾರಾ ಎಂಬುದೇ ಸದ್ಯದ ಪ್ರಶ್ನೆ. ಈ ಮಂಚಿನ ಪ್ಲಾನ್ ಪ್ರಕಾರ ಐದನೇ ದಿನ‌ವಾದ ಇಂದು ಪಾದಯಾತ್ರೆ ರಾಮನಗರ ಟೌನ್ ನಿಂದ ರಾಮನಗರ ತಾಲೂಕಿನ ಬಿಡದಿವರೆಗೂ ಕಾಂಗ್ರೆಸ್​ ನಾಯಕರು ಪಾದಯಾತ್ರೆ ಬೆಳೆಸಬೇಕಿದೆ. ಒಟ್ಟು 13 ಕಿಲೋ ಮೀಟರ್ ಇಂದು ಪಾದಯಾತ್ರೆ ಮಾಡಬೇಕಿದೆ. ನಿನ್ನೆ ರಾಮನಗರ ಟೌನ್ ನಲ್ಲಿ ನಾಲ್ಕನೇ ದಿನದ ಪಾದಯಾತ್ರೆ ಅಂತ್ಯವಾಗಿತ್ತು. ಇಂದು ಐದನೇ ದಿನದ ಪಾದಯಾತ್ರೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗುವ ಸಾಧ್ಯತೆಯಿದೆ. ಆದರೆ ಶತಾಯಗತಾಯ ಅವರ ಪಾದಯಾತ್ರೆಯನ್ನು ಮೊಟಕುಗೊಳಿಸಲು ಮಾರ್ಗದುದ್ದಕ್ಕೂ ಭಾರೀ ಖಾಕಿ ಪಡೆ ಸಜ್ಜಾಗಿ ನಿಂತುಬಿಟ್ಟಿದೆ. ನಿನ್ನೆ ಒಂದು ರೀತಿಯಲ್ಲಿ ಕೋರ್ಟ್​ ಛೀಮಾರಿ ಹಾಕಿದ ಮೇಲೆ ರಾಜ್ಯ ಸರ್ಕಾರ ಎದ್ದುಕುಳಿತಿದ್ದು, ಭಾರೀ ಪೊಲೀಸ್​ ಪಡೆಯನ್ನೇ ಫೀಲ್ಡ್​​ಗಿಳಿಸಿದ್ದು, ಕಾಂಗ್ರೆಸ್​ ನಾಯಕರ ಪಾದಯಾತ್ರೆಯನ್ನು ಕಟ್ಟಿಹಾಕಲು ಸಜ್ಜಾಗಿಸಿದೆ.

ಇನ್ನು ಅತ್ತ ಕಾಂಗ್ರೆಸ್​ ಪಾಳಯದಲ್ಲೂ ಭಾರೀ ಚಿಂತೆ, ಚಿಂತನೆಗಳು ನಡೆದಿವೆ. ಪಾದಯಾತ್ರೆಯ ಮುಂಧಾಳತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎಂಬ ಜೋಡೆತ್ತುಗಳ ಪೈಕಿ ಡಿ ಕೆ ಶಿವಕುಮಾರ್ ಅವರು ಕೋರ್ಟ್​ ಅಬ್ಸರ್ವೇಶನ್ ​ಬಳಿಕ ಡಿ ಕೆ ಶಿವಕುಮಾರ್ ಕಾನೂನು ತಜ್ಞರ ಜೊತೆ ನಿರಂತರವಾಗಿ ಚರ್ಚೆ ನಡೆಸಿದ್ದಾರೆ. ಕಾನೂನಿಗೆ ನಾವೆಲ್ಲರೂ ತಲೆ ಬಾಗಲೇಬೇಕು ಎಂಬ ಸಂದೇಶ ಕಾಂಗ್ರೆಸ್​ ನಾಯಕರ ಮಧ್ಯೆ ಹರಿದಾಡುತ್ತಿದೆ.

ಕೋರ್ಟ್​​ನಿಂದ ಪಾದಯಾತ್ರೆಗೆ ತಡೆ ನೀಡಿದ್ರೆ ಮುಂದಿನ ನಡೆಯೇನು? ಮುಂದಿನ ಹೆಜ್ಜೆ ಎತ್ತ ಹಾಕಬೇಕು ಎಂಬುದರ ಬಗ್ಗೆ ಗಹನವಾದ ಚರ್ಚೆಗಳು ನಡೆದಿವೆ. ಈ ಮಧ್ಯೆ ನಾನು ಒಬ್ಬನೇ ನಡೆದುಕೊಂಡು ಹೋದ್ರೆ ಎನಾದರೂ ಸಮಸ್ಯೆ ಆಗುತ್ತಾ ಎಂದೂ ಡಿಕೆಶಿ ಕಾನೂನು ತಜ್ಞರನ್ನು ಕೇಳಿತಿಳಿದುಕೊಂಡಿದ್ದಾರೆ. ಅದರಂತೆ ನಡೆದುಕೊಂಡು ಹೋಗುವುದಕ್ಕೆ ಕಾನೂನಿನಲ್ಲಿ ಯಾವ ತೊಡಕೂ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಾದ್ರೆ​ ಪಾದಯಾತ್ರೆಗೆ ಕೋರ್ಟ್ ತಡೆ ನೀಡಿದ್ರೆ ನಾನೊಬ್ಬನೇ ನಡಿತೀನಿ ಬಿಡಿ ಎಂದಿರುವ ಡಿಕೆಶಿ, ಯಾವುದಕ್ಕೂ ಅದರ ಬಗ್ಗೆ ಹಿರಿಯರ ಜೊತೆ ಮತ್ತೊಮ್ಮೆ ಚರ್ಚಿಸೋಣ ಬಿಡಿ ಎಂದು ಹೇಳಿದ್ದಾರೆ. ಇದೇ ದಿಲ್ಲಿ ಗಡಿಯಲ್ಲಿ ರೈತರ ಹೋರಾಟದ ವಿಷಯವನ್ನು ಮುಂದಿಟ್ಟು ಸುಪ್ರೀಂಕೊರ್ಟೇ ಬೇಡಾ ಅಂದಿದ್ದರೂ ರೈತರು ಅಲ್ಲಿ ಸುದೀರ್ಘ ಕಾಲ ಪ್ರತಿಭಟನೆ ನಡೆಸಲಿಲ್ಲವಾ? ಎಂದೂ ಡಿಕೆಶಿ ತಮ್ಮ ಕಾನೂನು ಪಂಡಿತರನ್ನು ಕೇಳಿನೋಡಿದ್ದಾರೆ.

ಅದಕ್ಕೆಲ್ಲ ಯಾವ ಸಮಸ್ಯೆಯಿಲ್ಲ, ಆದರೆ ನಿಮ್ಮ ಎಫ್​ಐಆರ್​ ಇದೆ ಎಂದು ತಜ್ಞರು ಕಿವಿಮಾತು ಹೇಳಿದ್ದಾರೆ. ನೀವು ನಡೆದರೆ ಜನ ಮತ್ತೆ ಸೇರುತ್ತಾರೆ, ಸಮಸ್ಯೆ ಆಗುತ್ತೆ ಎಂದಿದ್ದಾರೆ. ಅದಕ್ಕೆ ಡಿಕೆಶಿ ಜನ ಸೇರೋದು ಬೇಡ ನಾನು ಮತ್ತು ಸಿದ್ದರಾಮಯ್ಯ ಇಬ್ಬರೇ ನಡೀತಿವಿ. ಬೇಕಾದರೆ ಎಂಎಲ್​ಎಗಳು ಬಂದ್ರೆ ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಂಡು ನಡೀತಿವಿ ಎಂದು ಕಣ್ಣು ಕೆಂಪಗೆ ಮಾಡಿಕೊಂಡು, ದಣಿದ ದೇಹದೊಂದಿಗೆ ನಿನ್ನೆ ನಿದ್ದೆಗೆ ಜಾರಿದ್ದಾರೆ. ಬೆಳಗೆದ್ದು ಇಂದು ಏನು ಮಾಡುತ್ತಾರೋ ಕಾದುನೋಡಬೇಕಿದೆ.

ರಾಮನಗರದಲ್ಲಿ ಡಿಕೆಶಿ ಸುಸ್ತು.. ಸ್ಟೇಜ್ ಮೇಲೆ ವಿಶ್ರಾಂತಿ | Mekedatu Padayatre 4th Day |Tv9kannada

Also Read:
ಪೊಲೀಸ್​ ಭದ್ರಕೋಟೆಯಾದ ಇಡೀ ರಾಮನಗರ: ಇಂದು ಭಾರೀ ಹೈಡ್ರಾಮಾಗೆ ಸಾಕ್ಷಿ ಆಗಲಿದೆ ರಾಮನಗರ! ಏನಿದೆ ಸದ್ಯದ ಪರಿಸ್ಥಿತಿ

Published On - 7:16 am, Thu, 13 January 22