ಪೊಲೀಸ್​ ಭದ್ರಕೋಟೆಯಾದ ಇಡೀ ರಾಮನಗರ: ಇಂದು ಭಾರೀ ಹೈಡ್ರಾಮಾಗೆ ಸಾಕ್ಷಿ ಆಗಲಿದೆ ರಾಮನಗರ! ಏನಿದೆ ಸದ್ಯದ ಪರಿಸ್ಥಿತಿ

congress mekedatu padayatre: ರಾಮನಗರದಲ್ಲಿ ಹೆಚ್ಚುವರಿ ಪೊಲೀಸ್​ ಬಿಗಿ ಬಂದೋಬಸ್ತ್ ಹೇಗಿದೆ ಅಂದ್ರೆ ಐವರು ಡಿವೈಎಸ್​ಪಿ, 16 ಇನ್ಸ್​​ಪೆಕ್ಟರ್, 27 ಪಿಎಸ್‌ಐ, 176 ಎಎಸ್​ಐ, 800 ಕಾನ್ಸ್‌ಟೇಬಲ್‌ಗಳು, 4 ಡಿಎಆರ್, 8 ASRP ತುಕಡಿ ಸೇರಿ 1,200 ಸಿಬ್ಬಂದಿ ಪೊಲೀಸ್​ ಕೋಟೆ ಕಟ್ಟಿ ನಿಂತಿದ್ದಾರೆ.

ಪೊಲೀಸ್​ ಭದ್ರಕೋಟೆಯಾದ ಇಡೀ ರಾಮನಗರ: ಇಂದು ಭಾರೀ ಹೈಡ್ರಾಮಾಗೆ ಸಾಕ್ಷಿ ಆಗಲಿದೆ ರಾಮನಗರ! ಏನಿದೆ ಸದ್ಯದ ಪರಿಸ್ಥಿತಿ
ಪೊಲೀಸ್​ ಭದ್ರಕೋಟೆಯಾದ ಇಡೀ ರಾಮನಗರ: ಇಂದು ಭಾರೀ ಹೈಡ್ರಾಮಾಗೆ ಸಾಕ್ಷಿ ಆಗಲಿದೆ ರಾಮನಗರ! ಏನಿದೆ ಸದ್ಯದ ಪರಿಸ್ಥಿತಿ


ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಇಂದು ಐದನೇ ದಿನ‌ಕ್ಕೆ ಕಾಲಿರಿಸಿದೆ. ಆದರೆ ಇದರ ವಿರುದ್ಧ ರಾಜ್ಯ ಹೈಕೋರ್ಟ್​ ಗರಂ ಆಗಿದ್ದು, ಕೊರೊನಾ ಇರೋವಾಗ ಏನಿದೆಲ್ಲಾ ಹುಡುಗಾಟ ಎಂಬ ಧಾಟಿಯಲ್ಲಿ ತೀವ್ರ ಅಸಮಾಧಾನ ಹೊರಹಾಕಿದೆ. ಕೋರ್ಟ್​ ನೋಟಿಸ್ ಕೈಯಲ್ಲಿ ಹಿಡಿದು, ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್​ ನಾಯಕರ ವಿರುದ್ಧ ರಾಜ್ಯ ಸರ್ಕಾರ ಸೆಟೆದು ನಿಂತಿದೆ. ಭಾರೀ ಸಂಖ್ಯೆಯಲ್ಲಿ ಪೊಲೀಸ್​ ಪಡೆಯನ್ನು ಫೀಲ್ಡ್​​ಗಿಳಿಸಿದೆ. ಇಂದು ಐದನೇ ದಿನ‌ಕ್ಕೇ ಕಾಂಗ್ರೆಸ್ ಪಾದಯಾತ್ರೆ ಮೊಟಕುಗೊಳಿಸಲು ಅದಾಗಲೇ ಕಾಂಗ್ರೆಸ್​ ನಾಯಕರ ವಿರುದ್ದ 4ನೆಯ ಎಫ್​ಐಆರ್​ ದಾಖಲಿಸಿದೆ. ರಾಮನಗರ ಗ್ರಾಮಾಂತರ ಠಾಣೆಯಲ್ಲಿ 30 ಜನರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದೆ.

ಹೈಕೋರ್ಟ್ ತರಾಟೆ, ಪಾದಯಾತ್ರೆಗೆ ಸರ್ಕಾರ ನಿರ್ಬಂಧ ಹಿನ್ನೆಲೆ ಕಾಂಗ್ರೆಸ್ ಪಾದಯಾತ್ರೆಯನ್ನ ತಡೆಯಲು ಮುಂದಾಗಿರುವ ಪೊಲೀಸರು ಭಾರೀ ಪ್ಲಾನ್ ರೂಪಿಸಿದ್ದಾರೆ. ನಿನ್ನೆ ರಾಮನಗರದಲ್ಲಿ ತಡರಾತ್ರಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆದಿದೆ. ರಾಮನಗರ ಜಿಲ್ಲೆಯ ಗಡಿಭಾಗದಲ್ಲಿ ಬ್ಯಾರಿಕೇಡ್ ಗಳನ್ನ ಹಾಕಿ, ಪಾದಯಾತ್ರೆಗೆ ಹೊರ ಜಿಲ್ಲೆಗಳಿಂದ ಪಾದಯಾತ್ರೆಗೆ ಬರುವವರಿಗೆ ಬ್ರೇಕ್ ಹಾಕಲು ಸಜ್ಜಾಗಿ ನಿಂತಿದ್ದಾರೆ. ಇಡೀ ರಾಮನಗರ ಪೊಲೀಸ್​ ಭದ್ರಕೋಟೆಯಾಗಿ ಪರಿಣಮಿಸಿದೆ. ಪಾದಯಾತ್ರೆ ‌ನಡೆಸಿದ್ರೆ ಸಾಲುಸಾಲು ಕೈ ನಾಯಕರ ಬಂಧನ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಪಾದಯಾತ್ರೆ ಹತ್ತಿಕ್ಕಲು ಸರ್ಕಾರ ಎಲ್ಲ ರೀತಿಯ ಪ್ಲಾನ್ ಮಾಡಿಕೊಂಡಿದ್ದು, ರಾಮನಗರ ಇಂದು ಭಾರೀ ಹೈಡ್ರಾಮಾಗೆ ಸಾಕ್ಷಿ ಆಗಲಿದೆ.

ರಾಮನಗರದಲ್ಲಿ ಹೆಚ್ಚುವರಿ ಪೊಲೀಸ್​ ಬಿಗಿ ಬಂದೋಬಸ್ತ್ ಹೇಗಿದೆ ಅಂದ್ರೆ ಐವರು ಡಿವೈಎಸ್​ಪಿ, 16 ಇನ್ಸ್​​ಪೆಕ್ಟರ್, 27 ಪಿಎಸ್‌ಐ, 176 ಎಎಸ್​ಐ, 800 ಕಾನ್ಸ್‌ಟೇಬಲ್‌ಗಳು, 4 ಡಿಎಆರ್, 8 ASRP ತುಕಡಿ ಸೇರಿ 1,200 ಸಿಬ್ಬಂದಿ ಪೊಲೀಸ್​ ಕೋಟೆ ಕಟ್ಟಿ ನಿಂತಿದ್ದಾರೆ.

ಒಟ್ಟಾರೆಯಾಗಿ ಕಾಂಗ್ರೆಸ್ ನಾಯಕರ ‘ಮೇಕೆದಾಟು ಫೈಟ್’ ಇಂದೇ ಕ್ಲೈಮ್ಯಾಕ್ಸ್ ಆಗುತ್ತದಾ!? 11 ದಿನದ ಕಾಂಗ್ರೆಸ್ ಪಾದಯಾತ್ರೆ ಐದೇ ದಿನಕ್ಕೆ ಅಂತ್ಯವಾಗುತ್ತಾ? ಕಾಲ್ನಡಿಗೆ ಮುಂದುವರಿಸಿದ್ರೆ ತಡೆಯೋಕೆ ಸರ್ಕಾರದ ಮೆಗಾಪ್ಲ್ಯಾನ್ ಏನಿದೆ? ಎಂಬುದು ಕುತೂಹಲಕಾರಿಯಾಗಿದೆ. ಒಟ್ನಲ್ಲಿ ಭಾರಿ ಹಂಗಾಮಾ, ಹೈಡ್ರಾಮಾಕ್ಕೆ ಸಾಕ್ಷಿಯಾಗಲಿದೆ ರಾಮನಗರ.

Congress Padayatre: ರಾಮನಗರದ ಐಜೂರು ವೃತ್ತದ ಬಳಿ ಹಾಕಿದ್ದ ವೇದಿಕೆ ತೆರವು | Tv9kannada

Also Read:
ಕಾಂಗ್ರೆಸ್​ ಪಾಳಯದಲ್ಲಿ ಭಾರೀ ಚಿಂತೆ, ಚಿಂತನೆ: ಕೋರ್ಟ್ ತಪರಾಕಿ ಬೆನ್ನಲ್ಲೇ ‘ನಾನೊಬ್ಬನೇ ನಡಿತೀನಿ ಬಿಡಿ’ ಎಂದಿರುವ ಡಿಕೆಶಿ

Published On - 7:52 am, Thu, 13 January 22

Click on your DTH Provider to Add TV9 Kannada