ಸರ್ಕಾರದ ವಿರುದ್ಧ ಕಾಂಗ್ರೆಸ್ ‘ಟ್ರೆಂಡ್ ಅಲರ್ಟ್’ ಅಭಿಯಾನ.. ಮಧ್ಯಾಹ್ನ ಸರಣಿ ಟ್ವೀಟ್ ಮೂಲಕ ಪ್ರಶ್ನೆ
Congress Trend Alert | ರಾಜ್ಯ ಕಾಂಗ್ರೆಸ್ ಇಂದು ಮಧ್ಯಾಹ್ನ 2 ಗಂಟೆಯಿಂದ ಟ್ವಿಟ್ಟರ್‌ನಲ್ಲಿ ‘ಟ್ರೆಂಡ್ ಅಲರ್ಟ್’ ಅಭಿಯಾನ ಕೈಗೊಳ್ಳಲು ಸಿದ್ಧತೆ ನಡೆಸಿದೆ.
ಬೆಂಗಳೂರು: ರಾಜ್ಯ ಕಾಂಗ್ರೆಸ್ ಇಂದು ಮಧ್ಯಾಹ್ನ 2 ಗಂಟೆಯಿಂದ ಟ್ವಿಟ್ಟರ್‌ನಲ್ಲಿ ‘ಟ್ರೆಂಡ್ ಅಲರ್ಟ್’ ಅಭಿಯಾನ ಕೈಗೊಳ್ಳಲು ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ ಕೊವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವನ್ನು ಅಲರ್ಟ್ ಮಾಡಲು ಕಾಂಗ್ರೆಸ್ ಮುಂದಾಗಿದ್ದು ಟ್ವಿಟ್ಟರ್‌ನಲ್ಲಿ ಸರಣಿ ಪ್ರಶ್ನೆ ಕೇಳುವ ಮೂಲಕ ಅಲರ್ಟ್ ಮಾಡಲಿದೆ.
ಕೊವಿಡ್ 2ನೇ ಅಲೆಯ ಪರಿಸ್ಥಿತಿಯನ್ನು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ನಿಯಂತ್ರಿಸುವಲ್ಲಿ ವಿಫಲವಾಗಿರುವುದನ್ನು ಖಂಡಿಸಿ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ, ಹಾಸಿಗೆ, ಐಸಿಯು, ಆಕ್ಸಿಜನ್, ವೆಂಟಿಲೇಟರ್‌ಗಳನ್ನು ಒದಗಿಸಲು ಆಗ್ರಹಿಸಿ ‘ಟ್ರೆಂಡ್ ಅಲರ್ಟ್’ ನಡೆಸಲಿದ್ದಾರೆ. ಇಡೀ ಸರ್ಕಾರ ಕೊರೊನಾ ತಡೆಗೆ ಅಣಿಯಾಗಬೇಕು.
ಲಸಿಕೆ ತಯಾರಿ 2 ಕಂಪನಿಗೆ ಸೀಮಿತವಾಗಬಾರದು. ಬೇರೆ ಕಂಪನಿಗಳಿಗೂ ಅವಕಾಶ ನೀಡಬೇಕೆಂದು ಆಗ್ರಹಿಸಲಿದೆ. ಜನಸಂಖ್ಯೆಗೆ ಅನುಗುಣವಾಗಿ ಔಷಧ ತಯಾರಿಸಬೇಕು. ಎಲ್ಲ ವಯೋಮಾನದವರಿಗೂ ಲಸಿಕೆಯನ್ನು ನೀಡಬೇಕು. ಬಿಕ್ಕಟ್ಟಿನ ವೇಳೆ ಸಚಿವರ ಮಧ್ಯೆ ಸಮನ್ವಯತೆ ಇರಬೇಕು. ಈ ರೀತಿ ಹಲವು ಪ್ರಶ್ನೆ ಕೇಳುವ ಮೂಲಕ ಕಾಂಗ್ರೆಸ್‌ನಿಂದ ‘ಟ್ರೆಂಡ್ ಅಲರ್ಟ್’ ನಡೆಸಲಿದೆ. ಇನ್ನು ಟ್ರೆಂಡಿಂಗ್ ಅಲರ್ಟ್‌ನಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿಯಿಂದ ಸೂಚನೆ ನೀಡಲಾಗಿದೆ.
ಕೊವಿಡ್ ಸಂಕಷ್ಟದಲ್ಲೂ ಅಗತ್ಯ ವಸ್ತುಗಳಿಗೆ GSTಯನ್ನು ಮುಕ್ತಗೊಳಿಸಲಿಲ್ಲ. ವೆಂಟಿಲೇಟರ್‌ಗಳಿಗೆ ಶೇಕಡಾ 12ರಷ್ಟು ಜಿಎಸ್‌ಟಿ. ಆಕ್ಸಿಜನ್‌ಗೆ ಶೇ.12ರಷ್ಟು GST, ಮಾಸ್ಕ್‌ಗೆ ಶೇ.5, ಟೆಸ್ಟಿಂಗ್ ಕಿಟ್‌ಗಳಿಗೆ ಶೇಕಡಾ 12ರಷ್ಟು ಜಿಎಸ್‌ಟಿ, ಸ್ಯಾನಿಟೈಸರ್‌ಗೆ ಶೇಕಡಾ 18ರಷ್ಟು ಜಿಎಸ್‌ಟಿ ಇದೆ. ಪಿಪಿಇ ಕಿಟ್‌ಗಳಿಗೆ ಶೇ.5ರಿಂದ 12ರಷ್ಟು GST ಇದೆ. ರೆಮ್‌ಡಿಸಿವಿರ್‌ಗೆ ಶೇಕಡಾ 12ರಷ್ಟು ಜಿಎಸ್‌ಟಿ ಇದೆ. ವ್ಯಾಕ್ಸಿನ್ ಸ್ಟೋರೇಜ್‌ಗೆ ಶೇ.18ರಷ್ಟು GST ಇದೆ. ಲಸಿಕೆಗೆ ಶೇ.5ರಷ್ಟು ಜಿಎಸ್‌ಟಿ ಇದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕರೋನಾದ ಭೀಕರ ಸಂಕಟದ ನಡುವೆಯೂ ಅಗತ್ಯ ವಸ್ತುಗಳಿಗೆ GST ತೆರಿಗೆ ಮುಕ್ತಗೊಳಿಸಲಿಲ್ಲ @BJP4India ಸರ್ಕಾರ.
●ವೆಂಟಿಲೇಟರ್ಸ್ – 12%●ಆಕ್ಸಿಜನ್ – 12%●ಮಾಸ್ಕ್ -5%●ಟೆಸ್ಟಿಂಗ್ ಕಿಟ್ -12%●ಸ್ಯಾನಿಟೈಸರ್ – 18%●ಪಿಪಿಇ ಕಿಟ್ಸ್ – 5- 12%●ರೆಮಿಡಿಸಿವಿರ್ -12%●ಲಸಿಕೆ – 5%●ವ್ಯಾಕ್ಸಿನ್ ಸ್ಟೋರೇಜ್ – 18%ಇನ್ನೂ ಹಲವು.
— Karnataka Congress (@INCKarnataka) April 22, 2021
ಇದನ್ನೂ ಓದಿ: ಕೇರಳದಲ್ಲಿ ಆಮ್ಲಜನಕಕ್ಕೆ ಇಲ್ಲ ಬರ, ತಮಿಳುನಾಡು ಕರ್ನಾಟಕಕ್ಕೆ ಇಲ್ಲಿಂದ ಪೂರೈಕೆಯಾಗಲಿದೆ ವೈದ್ಯಕೀಯ ಆಕ್ಸಿಜನ್